ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ 2024ನೇ ಸಾಲಿನಲ್ಲಿ ನಡೆಸಿದ್ದ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಪ್ರಕಟಗೊಳಿಸಿದ್ದು, ಆಳ್ವಾಸ್ನ ವಿದ್ಯಾರ್ಥಿಗಳು ಒಟ್ಟು 10 ರ್ಯಾಂಕ್ಗಳಿಸಿದ್ದಾರೆ. ಪದವಿ ರ್ಯಾಂಕ್ಗಳು: ಬಿಬಿಎ ವಿಭಾಗದ ಕೃತಿ, ಬಿಎಸ್ಸಿ ಅನಿಮೇಷನ್ನ ಅಪೂರ್ವ ಪ್ರಥಮ ರ್ಯಾಂಕ್ ಗಳಿಸಿದರೆ, ಬಿವಿಎ ವಿಭಾಗದಲ್ಲಿ ಅರ್ಪಿತಾ ಹೆಗ್ಡೆ ದ್ವಿತೀಯ ರ್ಯಾಂಕ್ ಹಾಗೂ ಮೆಲ್ರೊಯಿ ತೃತೀಯ ರ್ಯಾಂಕ್ ಗಳಿಸಿದ್ದಾರೆ. ಬಿಎಸ್ಸಿ ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗದಲ್ಲಿ ರಿತೇಶ್ ದ್ವಿತೀಯ ರ್ಯಾಂಕ್ ಪಡೆದರೆ, ಬಿಕಾಂನಲ್ಲಿ ದೀಕ್ಷಾ ಶೆಟ್ಟಿ 10ನರ್ಯಾಂಕ್ ಪಡೆದು ಪದವಿ ವಿಭಾಗದಲ್ಲಿ ಒಟ್ಟು 6 ರ್ಯಾಂಕ್ಗಳು ಆಳ್ವಾಸ್ ಕಾಲೇಜಿಗೆ ಲಭಿಸಿದೆ. ಸ್ನಾತಕೋತ್ತರ ರ್ಯಾಂಕ್ಗಳು: ಎಂಎಸ್ಸಿ ಆಹಾರ ವಿಜ್ಞಾನ ವಿಭಾಗದ ಭವ್ಯ ಕೆ, ಸಸ್ಯಶಾಸ್ತ್ರ ವಿಭಾಗದ ಪಿ.ಎಸ್. ನಿರಂಜನ ಹಾಗೂ ಮನಃಶಾಸ್ತ್ರ ವಿಭಾಗದ ಪ್ರಕೃತಿ ಎಸ್ಕೆ ಪ್ರಥಮ ರ್ಯಾಂಕ್ನೊAದಿಗೆ ಮೂರು ಪ್ರಥಮ ರ್ಯಾಂಕ್ಗಳು ಆಳ್ವಾಸ್ ಸ್ನಾತಕೋತ್ತರ ವಿದ್ಯಾರ್ಥಿಗಳು ಪಡೆದಿದ್ದಾರೆ. ದೈಹಿಕ ಶಿಕ್ಷಣ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವರ್ಷಿಣಿ ಪ್ರಥಮ ರ್ಯಾಂಕ್ಗಳಿಸಿದ್ದಾರೆ.ರ್ಯಾAಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಮಧು ಅಭಿನಂದಿಸಿದ್ದಾರೆ.
