ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಸಂಜೆ ಬಂಟರ ಭವನ ವಠಾರದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು, ಪಟ್ಲ ಫೌಂಡೇಶನ್ ಸುರತ್ಕಲ್ ಘಟಕ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಾ ಬಂದಿದೆ. ಈಗಾಗಲೇ 21 ಮಂದಿ ಟ್ರಸ್ಟಿಗಳಾಗಿದ್ದಾರೆ. ಟ್ರಸ್ಟ್ ನಂಬಿ ದಾನಿಗಳು ಕೋಟ್ಯಂತರ ರೂಪಾಯಿ ದಾನ ನೀಡಿದ್ದಾರೆ. ನಾವು ತುಳುನಾಡಿನಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಬೇಕು. ಇಂದು ಸನ್ಮಾನ ಸ್ವೀಕರಿಸಿದ ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆ ನೋಡಲು ಬಾಲ್ಯದಲ್ಲಿ ಎಲ್ಲೆಲ್ಲಿಗೋ ಹೋಗುತ್ತಿದ್ದೆವು. ಇಂದು ಅವರನ್ನು ಈ ವೇದಿಕೆಯಲ್ಲಿ ಸನ್ಮಾನಿಸಿರುವುದು ಸಂತಸ ತಂದಿದೆ. ಎಲ್ಲರಿಗೂ ಸುಬ್ರಮಣ್ಯ ಸ್ವಾಮಿ ಒಳ್ಳೆಯದು ಮಾಡಲಿ ಎಂದರು.
ಬಳಿಕ ಮಾತಾಡಿದ ಅಗರಿ ಎಂಟರ್ ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್ ಅವರು, ಜಾಗತಿಕ ಮಟ್ಟದಲ್ಲಿ ಯಕ್ಷಗಾನ ಪರಂಪರೆಯನ್ನು ಬೆಳಗಿಸಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ ಅವರದ್ದು. ಯಕ್ಷಗಾನಕ್ಕೆ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಸ್ಟಾರ್ ವ್ಯಾಲ್ಯೂ ಬಂದಿದೆ. ಅದನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್. ಪೂಂಜ, ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶಂಕರ ನಾರಾಯಣ ಭಟ್, ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಪೂಜಾರಿ ಬಾಳ, ಉದ್ಯಮಿ ಡಿ.ಕೆ. ಶೆಟ್ಟಿ ಸುರತ್ಕಲ್, ಉದ್ಯಮಿ ಮನೋಹರ ಶೆಟ್ಟಿ ಸೂರಿಂಜೆ, ಸುರತ್ಕಲ್ ಬಂಟರ ಸಂಘದ ನಿರ್ದೇಶಕ ಜಗದೀಶ್ ಶೆಟ್ಟಿ ಪೆರ್ಮುದೆ, ಶ್ರೀಕಾಂತ್ ಕಾಮತ್, ಪಟ್ಲ ಫೌಂಡೇಶನ್ ಕೇಂದ್ರ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಉಪಾಧ್ಯಕ್ಷ ಲೀಲಾಧರ್ ಶೆಟ್ಟಿ ಕಟ್ಲ, ಸಂಚಾಲಕ ವಿನಯ ಆಚಾರ್ಯ ಹೊಸಬೆಟ್ಟು, ಕೋಶಾಧಿಕಾರಿ ಟಿ ಎನ್ ರಮೇಶ್ ಸುರತ್ಕಲ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರೀಯ ಘಟಕದ ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ, ಟ್ರಸ್ಟಿಗಳಾದ ಧನಪಾಲ್ ಶೆಟ್ಟಿಗಾರ್, ಚರಣ್ ಜೆ ಶೆಟ್ಟಿ ಕುಳಾಯಿಗುತ್ತು, ನಾರಾಯಣ ಶೆಟ್ಟಿ ಕಟ್ಲ, ಪುಷ್ಪರಾಜ ಶೆಟ್ಟಿ ಕುಡುಂಬೂರು, ಸಹನಾ ರಾಜೇಶ್ ರೈ, ಕೇಸರಿ ಪೂಂಜ, ಚಿತ್ರಾ ಜೆ ಶೆಟ್ಟಿ, ಶೈಲಾ ಶಂಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ, ಯಕ್ಷ ಗುರುಗಳಾದ ಶಂಕರ ನಾರಾಯಣ ಮೈರ್ಪಾಡಿ, ಅರ್ಥಧಾರಿ ಶ್ರೀಧರ ಶೆಟ್ಟಿ ಕೊಕ್ಕಾರುಗುತ್ತು ಪೆರ್ಮುದೆ, ರಂಗಸ್ಥಳ ವಿನ್ಯಾಸಗಾರ ಜಗದೀಶ್ ಆಚಾರ್ಯ ಜೋಕಟ್ಟೆ, ಯಕ್ಷಗಾನ ಸೇವಾಕರ್ತರಾದ ಕೃಷ್ಣಪ್ಪ ಪೂಜಾರಿ ಬೊಟ್ಟಿಕೆರೆ ಸೂರಿಂಜೆ, ನೇಪಥ್ಯ ಕಲಾವಿದ ಜನಾರ್ಧನ ಡಿ. ಶೆಟ್ಟಿಗಾರ್ ಅವರನ್ನು ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅನೂಪ್ ಶೆಟ್ಟಿ ಕಟ್ಲ ದೇವರನ್ನು ಸ್ತುತಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್. ಪೂಂಜ ಅತಿಥಿಗಳನ್ನು ಸ್ವಾಗತಿಸಿದರು. ಪ್ರದೀಪ್ ಆಳ್ವ ಕದ್ರಿ ಪ್ರಾಸ್ತಾವಿಕ ಮಾತನ್ನಾಡಿದರು. ಗಂಗಾಧರ ಪೂಜಾರಿ ವಂದಿಸಿದರು. ಸುಧಾ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.