ಬಂಟರ ಸಂಘ (ರಿ) ಹೈದರಾಬಾದ್ ಇದರ ವತಿಯಿಂದ ಮಾರ್ಚ್ 10 ರಂದು ಸೋಮವಾರ ಹೈದರಾಬಾದ್ ಬಂಟರ ಸಂಘದ ಆಡಳಿತ ಕಚೇರಿಗೆ ಆಗಮಿಸಿದ ಯುವ ಸಂಘಟಕ ಕುಂದಾಪುರ ತಾಲೂಕು ಯುವ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಬಂಟರ ಸಂಘ (ರಿ) ಹೈದರಬಾದ್ ಇದರ ಅಧ್ಯಕ್ಷರಾದ ಶ್ರೀ ಶಂಕರ ಶೆಟ್ಟಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಹೈದರಾಬಾದ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ರತ್ನಾಕರ ರೈ, ಕೋಶಾಧಿಕಾರಿ ರವಿರಾಜ್ ಶೆಟ್ಟಿ, ಹೋಟೆಲ್ ಉದ್ಯಮಿಗಳಾದ ಅಲ್ತಾರು ದೇಬೆಟ್ಟು ಜಯರಾಮ ಶೆಟ್ಟಿ, ಅಣ್ಣಪ್ಪ ಶೆಟ್ಟಿ ಮಲ್ಯಾಡಿ, ಉದಯ್ ಕುಮಾರ್ ಶೆಟ್ಟಿ ಹಕ್ಲಾಡಿ ಉಪಸ್ಥಿತರಿದ್ದರು.