ಮಕ್ಕಳಿಗೆ ಚಿಕ್ಕಂದಿನಲ್ಲೇ ಸನ್ಮಾರ್ಗ ತೋರಿ, ನೈತಿಕತೆ ಬೆಳೆಸುವುದರಿಂದ ದೇಶದ ಜವಾಬ್ದಾರಿಯುತ ಪ್ರಜೆಯನ್ನಾಗಿಸಲು ಸಾಧ್ಯ. ಸರ್ವಾಂಗೀಣ ಶಿಕ್ಷಣ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ಅವರು ಕೊಕ್ಕರ್ಣೆ ಶ್ರೀ ಅನಿತಾ ಎಜ್ಯುಕೇಶನಲ್ ಸೊಸೈಟಿಯ ದುರ್ಗಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಮತಿ ಕನಕ ಶಂಕರ ಶೆಟ್ಟಿ ಪ್ಲೇ ಸ್ಕೂಲ್ ಉದ್ಘಾಟಿಸಿ ಮಾತನಾಡಿದರು. ಸರಕಾರದ ಜತೆ ದಾನಿಗಳು ಕೈ ಜೋಡಿಸುವುದರಿಂದ ಊರಿನ ಅಭಿವೃದ್ಧಿಯಾಗುತ್ತದೆ ಎಂದರು. ಹುಬ್ಬಳ್ಳಿಯ ಶೆಟ್ಟೀಸ್ ಕನ್ಸ್ಟ್ರಕ್ಷನ್ ನ ನಿರ್ದೇಶಕಿ ಕನಕ ಶಂಕರ್ ಶೆಟ್ಟಿಯವರು ಶುಭಾರಂಭಗೊಳಿಸಿದರು.

ಅನಿತಾ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷ ಸಿಎ ಎಸ್ ಬಿ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಾಸಕ ಯಶ್ ಪಾಲ್ ಎ. ಸುವರ್ಣ, ದಾನಿ ಶೆಟ್ಟೀಸ್ ಕನ್ಸ್ಟ್ರಕ್ಷನ್ ನ ಆಡಳಿತ ನಿರ್ದೇಶಕ ಪ್ರಸನ್ನ ಎಸ್. ಶೆಟ್ಟಿ ಹುಬ್ಬಳ್ಳಿ, ಕೆ. ಶಂಕರ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಟ್ರಸ್ಟೀ ವಿಜಯಕಲಾ ಪಿ. ಶೆಟ್ಟಿ, ಬಿಇಓ ಶಬಾನಾ ಅಂಜುಮ್, ಹುಬ್ಬಳ್ಳಿ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಸುಜಾತಾ ಎ. ಹೆಗ್ಡೆ, ಪಂ. ಅಧ್ಯಕ್ಷ ಜಯಂತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಚಂದ್ರಶೇಖರ ಶೆಟ್ಟಿ, ಶೇಖರ ಹೆಗ್ಡೆ, ಹರೀಶ್ ಕುಮಾರ್ ಶೆಟ್ಟಿ, ಜಯರಾಮ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲ ಚಂದ್ರಶೇಖರ್, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಪೋಷಕರು ಉಪಸ್ಥಿತರಿದ್ದರು ಶಿಕ್ಷಕಿಯರಾದ ಸಹನಾ, ತ್ರಿವೇಣಿ, ಸರಸ್ವತಿ ನಿರೂಪಿಸಿದರು.