ಮಹಾರಾಷ್ಟ್ರದ ಮರಾಠಿ ಮಣ್ಣಿನಲ್ಲಿ ತುಳುವರ ಹಾಗೂ ಕನ್ನಡಿಗರ ಸಂಘ ಸಂಸ್ಥೆಗಳು ಹುಟ್ಟಿ ಬೆಳೆದಿವೆ. ಹಲವು ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ವಿವಿಧ ಸೇವಾ ಕಾರ್ಯಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಾ ಇವೆ. ಕೆಲವು ಸಂಘಟನೆಗಳು ಶತಮಾನೋತ್ಸವವನ್ನು ಆಚರಿಸಿ ವಿಜೃಂಭಿಸಿವೆ. ಕೇವಲ 2 ವರ್ಷದ ಹಿಂದೆ ಹುಟ್ಟಿ ಅಂಬೆಗಾಲಿಡುತ್ತಾ ಹೆಜ್ಜೆ ಹಾಕುತ್ತಿರುವ ಶ್ರೀಶಕ್ತಿ ಸಂಸ್ಥೆಯು ಸದಭಿರುಚಿಯ ಸಾವಿರಾರು ಮಹಿಳೆಯರನ್ನು ಒಟ್ಟು ಸೇರಿಸಿ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಜನಸೇವಾ ಸಂಸ್ಥೆ ಶ್ರೀಶಕ್ತಿ ಫೌಂಡೇಶನ್ ಮಹಾರಾಷ್ಟ್ರ (ರಿ) ಮೀರಾ ರೋಡ್ ‘ಹೆಣ್ಣು ಬಲವೂ ಹೌದು ಬುದ್ಧಿಯೂ ಹೌದು’ ಎಂಬ ಮಾತಿನಂತೆ ಸ್ತ್ರೀ ಶಕ್ತಿ ಅಗಾಧವಾದುದು. ಸ್ತ್ರೀಯರು ಒಟ್ಟಾಗಿ ಸಂಘಟಿತರಾದರೆ ಯಾವ ಕಾರ್ಯವನ್ನೂ ಸುಲಭವಾಗಿ ಸಾಧಿಸಬಹುದು. ಸಂಘಟನಾ ಚತುರೆಯಾಗಿರುವ ಶಾಲಿನಿ ಶೆಟ್ಟಿ ಸಚ್ಚೇರಿಗುತ್ತು ಶ್ರೀಶಕ್ತಿ ಸಂಘಟನೆಯ ಸ್ಥಾಪಕ ಅಧ್ಯಕ್ಷೆಯಾಗಿದ್ದಾರೆ. ಅವರ ನೇತೃತ್ವದಲ್ಲಿ ಸ್ತ್ರೀಯರ ಸಂಘಟನೆಯ ಮೂಲಕ ಹಲವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.ಜಗತ್ತನ್ನೇ ಅಲ್ಲೋಲ ಕಲ್ಲೋಲಗೊಳಿಸಿದ ಕೋವಿಡ್ ಮಹಾಮಾರಿಯ ಸಮಯದಲ್ಲಿ ಜೀವದ ಹಂಗು ತೊರೆದು ಆಶಕ್ತರಿಗೆ ವೈದ್ಯಕೀಯ ನೆರವು ನೀಡಿ, ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ಸಹಾಯಧನ, ಆಹಾರ ಸಾಮಾಗ್ರಿಗಳ ವಿತರಣೆ ಮಾಡಿದ್ದರು. ಮಹಿಳೆಯರು ಎಂದೂ ಅಬಲೆಯರಲ್ಲ ಸಬಲೆಯರು ಎಂಬುದನ್ನು ತನ್ನ ಕ್ರೀಯಾಶಕ್ತಿಯಿಂದ ತೋರಿಸಿಕೊಟ್ಟು ಮಹಿಳಾಮಣಿಗಳು ಜನಪರ ಕಾಳಜಿಯ ಚಟುವಟಿಕೆಗಳ ಮೂಲಕ ಜನಪ್ರಿಯತೆ ಗಳಿಸಿದೆ.

ಶ್ರೀ ಶಕ್ತಿ ಫೌಂಡೇಶನ್ ಮಹಾರಾಷ್ಟ್ರ ಇದರ ವತಿಯಿಂದ ಅಗೋಸ್ತ್ 4 ರಂದು ಆಟಿಡೊಂಜಿ ಕೂಟ ಹಾಗೂ ವನಮಹೋತ್ಸವ ಕಾರ್ಯಕ್ರವನ್ನು ವಿಜಯ್ ಪಾರ್ಕ್ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಶಾಲಿನಿ ಎಸ್. ಶೆಟ್ಟಿ ಸಚ್ಚೇರಿಗುತ್ತು ಇವರು ತುಳುನಾಡಿನ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಿ, ಆಟಿಡೊಂಜಿ ಕೂಟ ಎಲ್ಲರಿಂದಲೂ ಮೆಚ್ಚಿಗೆ ಪಡೆಯಿತು. ತುಳುನಾಡಿನ ಸಂಸ್ಕೃತಿ, ಆಟಿ ಸಮಾವಾಸ್ಯೆ, ಮೊದಲಾದ ಆಚರಣೆಗಳ ಬಗ್ಗೆ ತುಳು ಕನ್ನಡ ಭಾಷಿಕರಲ್ಲದೆ ಮರಾಠಿ ಗುಜರಾತಿ ಮತ್ತಿತರ ಭಾಷೆಯವರಿಗೂ ಪರಿಚಯ ಮಾಡಬೇಕೆಂಬ ಉದ್ದೇಶದಿಂದ ಮಾಡಿದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿತ್ತು. ಶಾಲಿನಿ ಎಸ್.ಶೆಟ್ಟಿಯವರ ಮನೆಯಲ್ಲಿ ತಯಾರಿಸಿದ ಪಾಲೆದ ಕೆತ್ತೆದ ಕಷಾಯ, ಮೆಂತೆ ಗಂಜಿ ಊಟವನ್ನು ಸವಿಯುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಹಸಿರು ಬೆಳೆಸಿ ಕಾಡು ಉಳಿಸಿ ಎಂಬ ಪರಿಸರ ಸಂರಕ್ಷಣೆಯ ಧ್ಯೇಯೋದ್ದೇಶದಿಂದ ಸದಸ್ಯರು ಸ್ವಪ್ರೇರಣೆಯಿಂದ ತಂದಿದ್ದ ಗಿಡಗಳನ್ನು ವಿಜಯ ಪಾರ್ಕ್ ಗಾರ್ಡನ್ ನಲ್ಲಿ ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು.
“ಶ್ರೀ ಶಕ್ತಿ ಪೌಂಡೇಶನ್ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಹಿಂದುಳಿದ ಸಮುದಾಯಗಳನ್ನು ಮೇಲಕ್ಕೆತ್ತಲು ಮೀಸಲಾಗಿರುವ ಸಂಸ್ಥೆಯಾಗಿದೆ. ನಾವು ಪ್ರತಿಯೊಬ್ಬ ಮನುಷ್ಯನ ಅಂತರ್ಗತ ಘನತೆ ಮತ್ತು ಮೌಲ್ಯವನ್ನು ನಂಬುತ್ತೇವೆ ಮತ್ತು ಪ್ರತಿಯೊಬ್ಬರೂ ಜೀವನವನ್ನು ನಡೆಸಲು ಅವಕಾಶವಿರುವ ನ್ಯಾಯಯುತ ಮತ್ತು ಸಮಾನ ಸಮಾಜವನ್ನು ರಚಿಸಲು ಶ್ರಮಿಸಿಸುತ್ತೇವೆ. ನಮ್ಮ ಕೆಲಸವು ವ್ಯಾಪಕ ಶ್ರೇಣಿಯ ಉಪಕ್ರಮಗಳನ್ನು ಒಳಗೊಂಡಿದೆ. ಬಡತನ ಮತ್ತು ಕಷ್ಟಗಳನ್ನು ನಿವಾರಿಸುವುದು, ಆಹಾರ, ಬಟ್ಟೆ , ಗುಣಮಟ್ಟದ ಶಿಕ್ಷಣದ ಪ್ರವೇಶ ಸೇರಿದಂತೆ ಬಡತನದಲ್ಲಿ ವಾಸಿಸುವ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ನಾವು ಅಗತ್ಯ ಬೆಂಬಲವನ್ನು ಒದಗಿಸುತ್ತೇವೆ. ನಾವು ನಿರಾಶ್ರಿತ ವ್ಯಕ್ತಿಗಳಿಗೆ ಆಶ್ರಯ ಮತ್ತು ಬೆಂಬಲವನ್ನು ನೀಡುತ್ತೇವೆ ಮತ್ತು ಅನಾಥ ಮಕ್ಕಳಿಗೆ ಆರೈಕೆ ಮತ್ತು ಮಾರ್ಗದರ್ಶನವನ್ನು ನೀಡುತ್ತೇವೆ. ಅವರ ಯೋಗ ಕ್ಷೇಮ ಮತ್ತು ಭವಿಷ್ಯವನ್ನು ಖಚಿತ ಪಡಿಸಿಕೊಳ್ಳುತ್ತೇವೆ. ಸಮಗ್ರ ಯೋಗ ಕ್ಷೇಮವನ್ನು ಉತ್ತೇಜಿಸುವುದು ನಮ್ಮ ಸಂಕಲ್ಪ. ನಾವು ವ್ಯಕ್ತಿಗಳು ಮತ್ತು ಸಮುದಾಯಗಳ ಸಮಗ್ರ ಯೋಗ ಕ್ಷೇಮಕ್ಕೆ ಆದ್ಯತೆ ನೀಡುತ್ತೇವೆ.
ಆರೋಗ್ಯ ಶಿಬಿರಗಳು, ಯೋಗ ತರಗತಿಗಳು ಮತ್ತು ಪೌಷ್ಠಿಕಾಂಶ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಅವಧಿಗಳನ್ನು ಒಳಗೊಂಡಿದೆ. ದೈಹಿಕ ಮಾನಸಿಕ ಮತ್ತು ಭಾವನಾತ್ಮಕ ಯೋಗ ಕ್ಷೇಮವನ್ನು ಉತ್ತೇಜಿಸುತ್ತದೆ. ಸಂತೋಷ ಮತ್ತು ಸಹಾನುಭೂತಿಯನ್ನು ಬಳಸುವ ಪ್ರಾಮುಖ್ಯತೆಯನ್ನು ನಾವು ನಂಬುತ್ತೇವೆ. ಹಿಂದುಳಿದ ಮಕ್ಕಳ ಜೀವನಕ್ಕೆ ನಗು ಮತ್ತು ನಗು ತರಲು ನಾವು ಈವೆಂಟುಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸುತ್ತೇವೆ. ಸಮುದಾಯ ಮತ್ತು ಸೇರಿದವರ ಭಾವನೆಯನ್ನು ಬೆಳೆಸುತ್ತೇವೆ. ನಮ್ಮ ಪರಿಸರವನ್ನು ರಕ್ಷಿಸುವುದು, ಮಾನವ ಯೋಗ ಕ್ಷೇಮ ಮತ್ತು ಪರಿಸರದ ಆರೋಗ್ಯದ ಪರಸ್ಪರ ಸಂಬಂಧವನ್ನು ನಾವು ಗುರುತಿಸುತ್ತೇವೆ. ನಾವು ಸ್ವಚ್ಛ ಭಾರತ ಅಭಿಯಾನದಂತಹ ಪರಿಸರ ಉಪಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ. ಗಿಡನೆಡುವ ಅಭಿಯಾನಗಳಲ್ಲಿ ತೊಡಗುತ್ತೇವೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಉತ್ತೇಜಿಸುತ್ತೇವೆ. ನಮ್ಮ ಸಂಘದ ಸದಸ್ಯರು ಅಂಗಾಂಗ ದಾನಕ್ಕೆ ನೋಂದಾಯಿಸಿಕೊಂಡಿರುವುದು ಕೂಡ ಒಂದು ಹೆಮ್ಮೆಯ ಸಂಗತಿ.ಸಬಲೀಕರಣ ಎಂದು ನಾವು ಧೃಢವಾಗಿ ನಂಬುತ್ತೇವೆ. ಸಮಾಜದ ಪ್ರಗತಿಗೆ ಮಹಿಳೆ ಮುಖ್ಯ. ನಾವು ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಆರ್ಥಿಕ ಸಾಕ್ಷರತೆ ಮತ್ತು ನಾಯಕತ್ವದ ತರಬೇತಿಗೆ ಅವಕಾಶಗಳನ್ನು ಒದಗಿಸುತ್ತೇವೆ. ಅವರು ಸ್ವಾವಲಂಬಿಗಳಾಗಲು ಮತ್ತು ಅವರ ಸಮುದಾಯಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಅನುವು ಮಾಡಿ ಕೊಡುತ್ತೇವೆ. ಅಂತರ್ಗತ ಸಮುದಾಯಗಳನ್ನು ನಿರ್ಮಿಸುವುದು ವೈವಿಧ್ಯತೆಯನ್ನು ಆಚರಿಸುವ ಮತ್ತು ಎಲ್ಲಾ ವ್ಯಕ್ತಿಗಳನ್ನು ಒಳಗೊಂಡಿರುವ ಸಮುದಾಯಗಳನ್ನು ನಿರ್ಮಿಸಲು ನಾವು ಕ್ರಮಿಸುತ್ತೇವೆ. ಅವರ ಹಿನ್ನೆಲೆ ಅಭಿವೃದ್ಧಿ ಹೊಂದಲು ಸಮಾನ ಅವಕಾಶಗಳಿವೆ.
ನಾವು ಸಾಮಾಜಿಕ ಅಡೆತಡೆಗಳನ್ನು ಮುರಿಯಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಕೆಲಸ ಮಾಡುತ್ತೇವೆ. ಮಹಿಳೆಯರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಮತ್ತು ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಸಶಕ್ತರಾಗಿರುವ ಜಗತ್ತನ್ನು ನಾವು ರೂಪಿಸುತ್ತೇವೆ. ಬಡತನ ಮತ್ತು ಅಸಮಾನತೆಯನ್ನು ನಿರ್ಮೂಲನೆ ಮಾಡುವ ನ್ಯಾಯಯುತ ಮತ್ತು ಸಮಾನ ಜಗತ್ತನ್ನು ನಿರ್ಮಿಸಲು ನಾವು ಶ್ರಮಿಸುತ್ತೇವೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಅವರ ಹಿನ್ನೆಲೆ ಅಥವಾ ಸಂದರ್ಭಗಳನ್ನು ಲೆಕ್ಕಿಸದೆ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವಕಾಶಗಳನ್ನು ಹೊಂದಿರುತ್ತಾರೆ. ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ, ಮಾನವ ಘನತೆಯನ್ನು ಆಚರಿಸುವ ಮತ್ತು ಸಹಾನುಭೂತಿ ಮತ್ತು ಒಳಗೊಳ್ಳುವಿಕೆಯ ಸಂಸ್ಕೃತಿಯನ್ನು ಬೆಳೆಸುವ ಸಮಾಜವನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ.
ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ, ದುರ್ಬಲ ಜನಸಂಖ್ಯೆಯನ್ನು ಬೆಂಬಲಿಸುವ ಮೂಲಕ ಮತ್ತು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ಮೂಲಕ, ನಾವು ಪ್ರಪಂಚದ ಮೇಲೆ ಸಕಾರಾತ್ಮಕ ಮತ್ತು ಶಾಶ್ವತವಾದ ಪರಿಣಾಮವನ್ನು ರಚಿಸಬಹುದು ಎಂಬ ಆಶಯದೊಂದಿಗೆ ಫೆಬ್ರವರಿ 2 ರ ರವಿವಾರ ಸಂಜೆ 3.30 ರಿಂದ ಭಾರತರತ್ನ ಗಾನ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ನಾಟ್ಯಗೃಹ ಆಡಿಟೋರಿಯಂ, ಠಾಕೂರ್ ಮಾಲ್ ಹತ್ತಿರ, ದಹಿಸರ್ ಚೆಕ್ ನಾಕಾ ಬಳಿ, ಮಹಾಜನವಾಡಿ ಇಲ್ಲಿ ವಾರ್ಷಿಕೋತ್ಸವವು ಜರಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಗಣ್ಯ ಅತಿಥಿಗಳಲ್ಲಿ ಕಾರ್ಯಕ್ರಮದ ಉದ್ಘಾಟಕರಾಗಿ ಜನಾರ್ಧನ್ ಭಟ್ (ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೀರಗಾಂವ್) ಇವರ ಶುಭಾ ಶೀರ್ವಚನದೊಂದಿಗೆ ದೀಪ ಪ್ರಜ್ವಲನೆಯಾಗಲಿದೆ. ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕಿ ಶಾಲಿನಿ ಶೆಟ್ಟಿ ಸಚ್ಚೇರಿಗುತ್ತು ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಿಶೋರ್ ಕುಮಾರ್ ಕುತ್ಯಾರ್ (ಕಾರ್ಯದರ್ಶಿ, ಮಾತೃಭೂಮಿ ಕ್ರೆಡಿಟ್ ಕೋ.ಆಪ್ ಸೊಸೈಟಿ, ಬಂಟರ ಸಂಘ, ಮುಂಬಯಿ), ಸೂರ್ಯಕಾಂತ್ ಜಯ ಸುವರ್ಣ (ಕಾರ್ಯಾಧ್ಯಕ್ಷರು ಭಾರತ್ ಕೋ. ಆಪ್ ಬ್ಯಾಂಕ್), ನರೇಶ್ ಪೂಜಾರಿ (ನಿರ್ದೇಶಕರು ಭಾರತ್ ಕೋ. ಆಪ್ ಬ್ಯಾಂಕ್), ಉದಯ್ ಎಂ. ಶೆಟ್ಟಿ ಮಲಾರ್ ಬೀಡು (ಅಧ್ಯಕ್ಷರು ಬಂಟ್ಸ್ ಫೋರಂ, ಮೀರಾ ಭಾಯಂದರ್) ರವಿಕಾಂತ ಶೆಟ್ಟಿ ಇನ್ನ (ಅಧ್ಯಕ್ಷರು ಕರ್ನಾಟಕ ಮಹಾ ಮಂಡಲ-ಭಾಯಂದರ್) ಗೋಪಾಲಕೃಷ್ಣ ಗಾಣಿಗ (ಅಧ್ಯಕ್ಷರು ನಿತ್ಯಾನಂದ ಸೇವಾ ಸಂಸ್ಥೆ ಮೀರಾ ಬಾಯಂದರ್), ಸಂಪತ್ ಬಿ ಶೆಟ್ಟಿ ಪಂಜದಗುತ್ತು (ಅಧ್ಯಕ್ಷರು – ಸಮಾಜ ಕಲ್ಯಾಣ ಸಮಿತಿ ಬಂಟರ ಸಂಘ, ಮೀರಾ ಭಾಯಂದರ್ ವಲಯ), ಸುರೇಶ್ ಶೆಟ್ಟಿ ಕಡಂದಲೆ (ಜೊತೆ ಕಾರ್ಯದರ್ಶಿ ಮುಲುಂಡ್ ಬಂಟ್ಸ್ ಸಂಘ)
ಚಂದ್ರಶೇಖರ ಪಾಲೆತ್ತಾಡಿ (ಸಂಪಾದಕರು ಕರ್ನಾಟಕ ಮಲ್ಲ ದಿನಪತ್ರಿಕೆ, ಮುಂಬಯಿ), ಶಂಕರ ಶೆಟ್ಟಿ ಬೋಳ (ಕೋಶಾಧಿಕಾರಿ, ಬಂಟರ ಸಂಘ, ಮೀರಾ ಭಾಯಂದರ್ ವಲಯ), ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು (ಬಿಜೆಪಿ ರಾಜಕೀಯ ನಾಯಕರು), ಚಂದ್ರಶೇಖರ್ ವಿ. ಶೆಟ್ಟಿ (ಸ್ಥಾಪಕರು: ಕರ್ನಾಟಕ ಮಹಾ ಮಂಡಲ, ಮೀರಾ ಭಾಯಂದರ್)
ಶೇಖರ್ ಶೆಟ್ಟಿ (ಧರ್ಮದರ್ಶಿ: ಶ್ರೀ ಮೂಕಾಂಬಿಕಾ ಶಾಂತಾ ದುರ್ಗಾ ಸೇವಾ ಸಮಿತಿ), ದಿವಾಕರ ಶೆಟ್ಟಿ ಶಿರ್ಲಾಲ್ (ಉಪಾಧ್ಯಕ್ಷರು ಬಂಟ್ಸ್ ಫೋರಂ ಮೀರಾ ಭಾಯಂದರ್), ಪದ್ಮನಾಭ ಕೆ. ಶೆಟ್ಟಿ, ಮಿಜಾರ್ (ಹೊಟೇಲ್ ಮಿಲನ್, ಪೋರ್ಟ್ ಮುಂಬಯಿ), ಎ.ಕೆ. ಹರೀಶ್ (ಮಾಜಿ ಅಧ್ಯಕ್ಷರು ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್), ನವನೀತ್ ಡಿ ಶೆಟ್ಟಿ (ಬ್ಲೂ & ಬ್ರೌನ್ ಗ್ಲೋಬಲ್ ಲಾಜಿಸ್ಟಿಕ್ಸ್), ಶ್ರೀಧರ ಶೆಟ್ಟಿ ಭಜನಾ ಗುರು (ಪ್ರಧಾನ ಕಾರ್ಯದರ್ಶಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್-ಮಹಾರಾಷ್ಟ್ರ), ಬೋಳ ರವಿ ಪೂಜಾರಿ (ಸಿಕಾನ್ ಕಂ. ಪ್ರೈ. ಲಿ. ನವಿಮುಂಬಯಿ) ಚಂದ್ರಾವತಿ ವಸಂತ್ (ಪ್ರಸಿದ್ಧ ರಂಗ ನಟಿ) , ಶುಭಾ ಸತೀಶ್ ಶೆಟ್ಟಿ (ಮಾಜಿ ಅಧ್ಯಕ್ಷೆ-ಮೀರಾ ದಹಾನು ಬಂಟ್ಸ್), ನವೀನ ಜಯಪ್ರಕಾಶ ಭಂಡಾರಿ (ಅಧ್ಯಕ್ಷರು ಭಜನಾ ಸಮಿತಿ ಬಂಟ್ಸ್ ಫೋರಂ ಮೀರಾ ಭಾಯಂದರ್), ತಾರಾ ಪ್ರಕಾಶ್ ಶೆಟ್ಟಿ (ಮಾಜಿ ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ, ಥಾಣೆ ಬಂಟ್ಸ್)
ಸುಕನ್ಯಾ ಭಟ್ (ಸ್ಥಾಪಕಿ: ರಾಧಾಕೃಷ್ಣ ನೃತ್ಯ ಅಕಾಡೆಮಿ)
ಮಹಾಲಕ್ಷ್ಮಿ ಎಸ್. ರೈ (ಜತೆ ಕಾರ್ಯದರ್ಶಿ ಬಂಟರ ಸಂಘ ಭಿವಂಡಿ ಬದ್ಲಾಪುರ ವಲಯ),
ಶುಖಾವಾಣಿ ಡಿ.ಶೆಟ್ಟಿ ತಾಳಿಪಾಡಿಗುತ್ತು (ಅಧ್ಯಕ್ಷರು , ಲೇಡೀಸ್ ವಿಂಗ್ ಬಂಟ್ಸ್ ಫೋರಂ ಮೀರಾ ಭಾಯಂದರ್), ಶೋಭಾ ಡಿ.ಶೆಟ್ಟಿ (ಸಮಾಜ ಸೇವಕಿ ಡೊಂಬಿವಲಿ), ತಾರಾ ರಘುನಾಥ್ ಬಂಗೇರ ಮಹಿಳಾ ಕಾರ್ಯಾಧ್ಯಕ್ಷೆ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ) ಆಗಮಿಸಲಿದ್ದಾರೆ.ಕಾರ್ಯಕ್ರಮದ ಕೊನೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರವೀಣ್ ಭೋಜ ಶೆಟ್ಟಿ (ಅಧ್ಯಕ್ಷರು ಬಂಟ್ಸ್ ಸಂಘ ಮುಂಬಯಿ) ವಹಿಸಲಿದ್ದಾರೆ. ವಿಶೇಷ ಗಣ್ಯರುಗಳಾಗಿ ನರೇಂದ್ರ ಎಲ್ ಮೆಹ್ರಾ (ಶಾಸಕರು-ಮೀರಾ ಭಾಯಂದರ್ ನಗರ), ಮುಖ್ಯ ಅತಿಥಿಗಳಾಗಿ ಸರ್ವೋತ್ತಮ ಶೆಟ್ಟಿ (ತುಳು ಕನ್ನಡ ಸಂಘಟಕ ಯುಎಇ), ಡಾ| ರವಿ ಶೆಟ್ಟಿ ಮೂಡಂಬೈಲ್ (ವ್ಯವಸ್ಥಾಪಕ ನಿರ್ದೇಶಕರು ಎಟಿಎಸ್ ಗ್ರೂಪ್ ಕತಾರ್), ಗೌರವ ಅತಿಥಿಗಳಾಗಿ ಪ್ರವೀಣ್ ಶೆಟ್ಟಿ ಪುತ್ತೂರು (ಉಪಾಧ್ಯಕ್ಷರು, ಬಂಟರ ಸಂಘ ಪುಣೆ) , ಡಾ. ಎನ್.ಎ. ಹೆಗ್ಡೆ (ಸಿಎಂಡಿ ಸಾಯಿಬಾಬಾ ಆಸ್ಪತ್ರೆ ಭಾಯಂದರ್) ಹರೀಶ್ ಜಿ ಅಮೀನ್ (ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್, ಮುಂಬಯಿ) ಪ್ರಭಾಕರ ಶೆಟ್ಟಿ (ಆಡಳಿತ ನಿರ್ದೇಶಕರು ತಮನ್ನಾ ಹೋಟೆಲ್ಸ್ ಪ್ರೈ ಲಿಮಿಟೆಡ್ ಪುಣೆ), ಅಶೋಕ್ ಪುರೋಹಿತ್ (ಜ್ಯೋತಿಷಿ, ವಾಸ್ತು ತಜ್ಞ, ರತ್ನ ಸಲಹೆಗಾರ), ಬಿಳಿಯೂರು ಗುತ್ತು ಡಾ. ಅರುಣೋದಯ ಎಸ್. ರೈ (ಸಿ.ಎಮ್.ಡಿ ರೈ ಸುಮತಿ ಚಾರಿಟೇಬಲ್ ಎಜುಕೇಶನಲ್ ಟ್ರಸ್ಟ್), ಹರೀಶ್ ಶೆಟ್ಟಿ ಕುರ್ಕಾಲ್ (ಅಧ್ಯಕ್ಷರು ತುಳು ಸಂಘ, ಪಿಂಪ್ರಿ ಚಿಂಚವಾಡ), ರಮೇಶ್ ಶೆಟ್ಟಿ ಸಿದ್ಧಕಟ್ಟೆ (ಸೃಷ್ಟಿ ಮಾರಿಟೈಮ್ ಸರ್ವಿಸಸ್ ನ ಮಾಲಕರು), ಎಸ್. ಪ್ರದೀಪ್ ಕುಮಾರ್ ಕಲ್ಕೂರ (ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು-ದ.ಕ.), ಉದಯ್ ಕಿರಣ್ ಶೆಟ್ಟಿ ಸಚ್ಚೇರಿಗುತ್ತು (ಹೋಟೆಲ್ ಮಾವಲ್ ಮಾರ್ಥಾ – ಲೋನಾವಲ), ಭಾಸ್ಕರ್ ಕೆ. ಶೆಟ್ಟಿ (ಮಾಲಕರು: ಶಾರದಾ ಕ್ಲಾಸಸ್, ಮೀರಾ ರೋಡ್), ಡಾ. ಹರೀಶ್ ಬಿ ಶೆಟ್ಟಿ (ಜಿಸಿ ಸದಸ್ಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಭಾರತ ಸರ್ಕಾರ), ಸತೀಶ ಗಂಗಾಧರ ತುರಮರಿ (ಕೋಶಾಧಿಕಾರಿ ವಿದ್ಯಾವರ್ಧಕ ಸಂಘ ಧಾರವಾಡ), ಉಮಾ ಕೃಷ್ಣ ಶೆಟ್ಟಿ (ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ, ಬಂಟರ ಸಂಘ ಮುಂಬಯಿ), ಸುಲತಾ ಸತೀಶ್ ಶೆಟ್ಟಿ (ಕಾರ್ಯಾಧ್ಯಕ್ಷೆ ಬಂಟ್ಸ್ ಸಂಘ ಪುಣೆ), ರತ್ನಾ ವಸಂತ ಶೆಟ್ಟಿ (ಮಾಜಿ ಕಾರ್ಯಧ್ಯಕ್ಷೆ ಮುಲುಂಡ್ ಬಂಟ್ಸ್), ಮಂಜುಳಾ ಶೇಖರ್ ಶೆಟ್ಟಿ (ಮಾಜಿ ಕಾರ್ಯಾಧ್ಯಕ್ಷೆ ಬಂಟ್ಸ್ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿ), ಶಶಿಕಾಂತಿ ಆರ್ ಶೆಟ್ಟಿ (ಉನ್ನತ ಶಿಕ್ಷಣ, ಬಂಟ್ಸ್ ಸಂಘ ಸಾಂಸ್ಕೃತಿಕ ವಿಭಾಗದ ಸಹ ಸಂಚಾಲಕಿ ಮುಂಬಯಿ) ಉಪಸ್ಥಿತರಿರುವರು.
ಇದೇ ವೇಳೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಬಿರುದು ಪ್ರಶಸ್ತಿ ನೀಡಿ ಸನ್ಮಾನಿಸಸುವ ಕಾರ್ಯಕ್ರಮವು ಜರಗಲಿದೆ. ಇದರಲ್ಲಿ ಡಾ| ಮಾಲತಿ ಶೆಟ್ಟಿ (ಸಂಪಾದಕರು, ಅಮೃತ ಪ್ರಕಾಶನ ಮಂಗಳೂರು), ರೇವತಿ ಕೊಡೆತ್ತೂರು (ಮಾಜಿ ಅಧ್ಯಕ್ಷೆ ಬ್ರಾಹ್ಮರಿ ಮಹಿಳಾ ಸಮಾಜ ಮೆನ್ನಬೆಟ್ಟು), ಶಶಿಕಲಾ ಶಂಕರ್ ಪೂಂಜ (ಮಾಜಿ ಕಾರ್ಯದರ್ಶಿ, ಬಂಟ್ಸ್ ಸಂಘ ಮುಂಬಯಿ) ಮಧು ಅಶೋಕ್ ವಸ್ತ್ರದ (ಸಾಹಿತಿ. ಸಾಮಾಜಿಕ ಕಾರ್ಯಕರ್ತೆ) ಆರತಿ ವಿಶ್ವನಾಥ ಶೆಟ್ಟಿ (ಎಂ.ಡಿ. ಕಾಲೇಜು ಪರೇಲ್) ಶ್ರೀಧರ್ ಉಚ್ಚಿಲ್ (ವರದಿಗಾರರು, ಕರ್ನಾಟಕ ಮಲ್ಲ ಮುಂಬಯಿ), ಸಮರ್ಥ್ ಸಿ. ರೈ(ರಾಜ್ಯ ಮಟ್ಟದ ಪುಟ್ಬಾಲ್ ಆಟಗಾರ) ಸನ್ಮಾನವನ್ನು ಸ್ವೀಕರಿಸಲಿದ್ದಾರೆ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶೇಷ ಚೇತನ ಮಕ್ಕಳ ವೈವಿಧ್ಯಮಯ ಕಾರ್ಯಕ್ರಮ ಮತ್ತು ಮಕ್ಕಳು ತಯಾರಿಸಿದ ವಸ್ತುಗಳ ಪ್ರದರ್ಶನ ನಡೆಯಲಿದೆ. ವಿವಿಧ ಸಂಘ ಸಂಸ್ಥೆಗಳಿಂದ ಮಹಿಳೆಯರ ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಪನ್ವಿ ಸೃಷ್ಟಿ ಹರೀಶ್ ಶೆಟ್ಟಿ ಎರ್ಮಾಲ್ ನಡೆಸಿಕೊಡುವ “ರಾಗದ ಸ್ವರಕ್ಕೂ ತೆಲಿಕೆದ ನೆಸಲೆ” ಎಂಬ ವಿಶೇಷ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಅಶೋಕ್ ಕೊಡ್ಯಡ್ಕ ಇವರ “ಕುಸಲ್ದ ಯೆಸಲ್” ಎಂಬ ತುಳು ಹಾಸ್ಯಮಯ ನಾಟಕ ನುರಿತ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮವನ್ನು ನಿತ್ಯಾನಂದ ಶೆಟ್ಟಿ ಬೆಳವಾಯಿ ಮತ್ತು ಚಿನ್ಮಯ್ ಸಾಲಿಯಾನ್ ಹೆಜಮಾಡಿಯವರು ನಿರೂಪಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಂಚಿತವಾಗಿ ಬಂದು ಸಹಕರಿಸುವ ಬಂಧುಗಳಿಗೆ ವಿಶೇಷ ಬಂಪರ್ ಬಹುಮಾನವಿದೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತುಳು ಕನ್ನಡಿಗರು ಬಂದು ಸಹರಿಸುವಂತೆ ಶ್ರೀಶಕ್ತಿ ಫೌಂಡೇಶನ್ ವತಿಯಿಂದ ಶಾಲಿನಿ ಎಸ್.ಶೆಟ್ಟಿ ಸಚ್ಚೇರಿಗುತ್ತು ಅಧ್ಯಕ್ಷೆ, ನಯನಾ ಆರ್ ಉಪಾಧ್ಯಕ್ಷೆ, ರಂಜನಾ ಎಸ್. ಕತಾವಟೆ ಗೌ. ಕಾರ್ಯದರ್ಶಿ, ರೇಖಾ ಎಸ್ ಪೂಜಾರಿ ಜೊತೆ ಕಾರ್ಯದರ್ಶಿ, ಖುಷಿ ಸಿ.ರೈ ಖಜಾಂಚಿ, ಸುನೀತಾ ಎಸ್.ಶೆಟ್ಟಿ ಜೊತೆ ಖಜಾಂಚಿ, ಸೌಮ್ಯಾ ಪಿ. ಕಯ್ಯಾ (ಕ್ರೀಡಾ ವಿಭಾಗ), ವೀಣಾಕ್ಷಿ ಎಸ್.ಶೆಟ್ಟಿ (ಸಾಂಸ್ಕೃತಿಕ ವಿಭಾಗ), ಸುಜಾತಾ ಜಿ.ಶೆಟ್ಟಿ (ಸಮಾಜ ಕಲ್ಯಾಣ ಮತ್ತು ಆರೋಗ್ಯ ವಿಭಾಗ) ಶೋಭಾ ಆರ್. ಕರ್ಕೇರ (ಭಜನಾ ಸಮಿತಿ), ಮೀರಾ ಸಂತೋಷ್ ಶೆಟ್ಟಿ (ಮ್ಯಾರೇಜ್ ಸೆಲ್ ವಿಭಾಗ) ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಸಲಹೆಗಾರರು, ಪ್ರಿಯಾ ರಾಜೇಂದ್ರ ಶೆಟ್ಟಿ ಸಲಹೆಗಾರರು ಮತ್ತು ಎಲ್ಲಾ ಸದಸ್ಯ ಬಾಂಧವರು ವಿನಂತಿಸಿ ಕೊಂಡಿದ್ದಾರೆ .
ಲೇಖನ: ವಾಣಿ ರಘುನಾಥ್ ಕಣ್ವತೀರ್ಥ