ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸದಾಶಿವ ಶೆಟ್ಟಿ ಕನ್ಯಾನ ಸಂಕೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಹವಾ ನಿಯಂತ್ರಿತ ಉನ್ನತ ಸೌಲಭ್ಯಗಳನ್ನು ಒಳಗೊಂಡ ಸದಾಶಿವ ಶೆಟ್ಟಿ ಕನ್ಯಾನ ಕನ್ವೆನ್ಷನ್ ಸೆಂಟರ್ ಸಭಾಭವನದ ನಿರ್ಮಾಣ ಕಾಮಗಾರಿಯ ಕುರಿತು ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿ ಶ್ರೀಮತಿ ಬಿಂದಿಯಾ ನಾಯಕ್ ರವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಪಂಚಾಯತ್ ರಾಜ್ ಅಸಿಸ್ಟೆಂಟ್ ಇಂಜಿನಿಯರ್ ಪ್ರಶಾಂತ್ ಆಳ್ವ ಕಾವೂರು, ಮತ್ತಿತರರು ಉಪಸ್ಥಿತರಿದ್ದರು.









































































































