ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ದೇಶ ಮತ್ತು ಧರ್ಮ ಎರಡು ಕಣ್ಣುಗಳಿದ್ದಂತೆ. ಈ ಎರಡೂ ದೃಷ್ಟಿಕೋನವಿದ್ದರೆ ಸನಾತನ ಧರ್ಮ ಮತ್ತು ದೇಶ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಅವರು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ, ಹಿಂದು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ವತಿಯಿಂದ ಶ್ರೀ ಜಾರಂದಾಯ ಕೇಶವ ಶಿಶುಮಂದಿರದ ನೂತನ 3 ಅಂತಸ್ತಿನ ಕಟ್ಟಡ ಸಾರ್ಥಕ್ಯ ಎಂ.ಅರ್.ಪಿ.ಎಲ್ ಸಿ.ಎಸ್.ಅರ್ ವಿಭಾಗದ ಅನುದಾನದಿಂದ 40 ಲಕ್ಷ ಮಂಗಳೂರು ಮಹಾನಗರ ಪಾಲಿಕೆಯ ಅನುದಾನದಿಂದ 22 ಲಕ್ಷ ಮತ್ತು ದಾನಿಗಳ ಸಹಕಾರದಿಂದ 68 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಅದನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರ ಮತ್ತು ಧರ್ಮದ ಬಗ್ಗೆ ಎಲ್ಲರೂ ಶ್ರದ್ಧೆ ರೂಡಿಸಿಕೊಳ್ಳಬೇಕು. ಮೂಲ ಪರಂಪರೆಯಿಂದ ಬಂದಿರುವ ಆಚರಣೆಗಳನ್ನು ರೂಢಿಸಿಕೊಂಡು ಧರ್ಮವನ್ನು ಬಲಪಡಿಸಬೇಕು ಎಂದರಲ್ಲದೆ ಈ ನಿಟ್ಟಿನಲ್ಲಿ ನಮ್ಮ ಹಿಂದೂ ಸಂಸ್ಕೃತಿಗಳ ಬಗ್ಗೆ ಚಿಕ್ಕ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಶಿಶುಮಂದಿರವನ್ನು ನಿರ್ಮಾಣ ಮಾಡಿದ್ದಕ್ಕಾಗಿ ಸಮಿತಿಗೆ ಅಭಿನಂದನೆ ಸಲ್ಲಿಸಿದರು. ಇದು ಇತರರಿಗೆ ಮಾದರಿಯಾಗಲಿ ಎಂದರು.
ವೇದಿಕೆಯಲ್ಲಿ ಕಟೀಲು ಕ್ಷೇತ್ರದ ಅನುವಂಶಿಯ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮೇಯರ್ ಮನೋಜ್ ಕುಮಾರ್, ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಮುಂಬಯಿ ವಿ.ಕೆ,ಸಮೂಹ ಸಂಸ್ಥೆಯ ಅಧ್ಯಕ್ಷರು ಮತ್ತು ಅಡಳಿತ ನಿರ್ದೇಶಕರಾದ ಕರುಣಾಕರ ಎಂ ಶೆಟ್ಟಿ ಮದ್ಯಗುತ್ತು, ಮುಂಬಯಿ ಉದ್ಯಮಿ ರಾಜೇಂದ್ರ ಶೆಟ್ಟಿ ಕುಡ್ತಿಮಾರು ಗುತ್ತು, ಮುಂಬಯಿ ಹೇರಂಭಾ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಎಂ.ಅರ್.ಪಿ.ಎಲ್ ಮ್ಯಾನೇಜ್ಮೆಂಟ್ ಸ್ಟಾಪ್ ಎಸೋಸಿಯೇಷನ್ ಅಧ್ಯಕ್ಷ ಸಂಪತ್ ರೈ, ಜ್ಯೋತಿಷಿ ನಾಗೇಂದ್ರ ಭಾರದ್ವಾಜ್ ಸುರತ್ಕಲ್, ಪ್ರದ್ಯುಮ್ನ ರಾವ್ ಶಿಬರೂರು, ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಕಾಟಿಪಳ್ಳ ತಣ್ಣೀರುಬಾವಿ, ಜಾರಂದಾಯ ದೈವಸ್ಥಾನದ ಮೊಕ್ತೇಸರರಾದ ಕೇಶವ ಸನೀಲ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಕಾರ್ಯವಾಹಕ ಪ್ರಕಾಶ್ ಪಿ ಎಸ್, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಗಣೇಶಪುರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೆಂದ್ರ ಗಣೇಶಪುರ, ಮಂಗಳೂರು ಸೇವಾ ಲೈಪ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಉದ್ಯಮಿ ವಿನೀತ್ ಶೆಟ್ಟಿ ಪರ್ಲಬೈಲ್ ಶಿಬರೂರು, ಉದ್ಯಮಿ ಸತೀಶ್ ಮುಂಚೂರು, ಗುಜರಾತ್ ಉದ್ಯಮಿ ವಿಕಾಸ್ ಪೈ ಚಾಂಗ, ಮಂಗಳಪೇಟೆ ಶಾರದ ಭಜನಾ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಕಾಟಿಪಳ್ಳ ನಿತ್ಯಾನಂದ ಭಜನಾ ಮಂದಿರ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿಗಾರ್, ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ ಅಧ್ಯಕ್ಷ ಜಯಕುಮಾರ್, ಜಾರಂದಾಯ ಕೇಶವ ಶಿಶು ಮಂದಿರದ ನೂತನ ಕಟ್ಟಡ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಕೇಶವ ಶಿಶುಮಂದಿರದ ಅಧ್ಯಕ್ಷ ಮಧುಸೂದನ್ ರಾವ್, ಸುರತ್ಕಲ್ ವಿಶ್ವಹಿಂದು ಪರಿಷತ್ ಅಧ್ಯಕ್ಷ ಭಾಸ್ಕರ್ ರಾವ್ ಬಾಳ, ವರಮಹಾಲಕ್ಷ್ಮಿ ಪೂಜನ ಸಮಿತಿ ಅಧ್ಯಕ್ಷೆ ರೇಷ್ಮಾ ಪ್ರಸನ್ನ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ವಹಿಸಿದ್ದರು. ಕಾಟಿಪಳ್ಳ ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಸೂರಿಂಜೆ ಸ್ವಾಗತಿಸಿದರು. ಅಶೋಕ್ ಕೃಷ್ಣಾಪುರ ನಿರೂಪಿಸಿದರು. ಲೋಕನಾಥ್ ಭಂಡಾರಿ ವಂದಿಸಿದರು.