ಬಂಟರ ಯಾನೆ ನಾಡವರ ಸಂಘ ಬೈಂದೂರು ಇದರ ವತಿಯಿಂದ ಆಯೋಜಿಸಲಾದ ಬಂಟರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆ, ಪ್ರತಿಭಾ ಸಂಭ್ರಮ -2025 ಬೈಂದೂರು ಬಂಟರ ಭವನದಲ್ಲಿ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆಯವರ ನೇತೃತ್ವದಲ್ಲಿ ಜರುಗಿತು. ಉದ್ಯಮಿ ಗಾಯಾಡಿ ಗೋಕುಲ ಶೆಟ್ಟಿ ಉಪ್ಪುಂದ ದೀಪ ಬೆಳಗಿಸಿ ಉದ್ಘಾಟಿಸಿದರು.
ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸುತ್ತಾ, ಎಳೆಯ ಪ್ರತಿಭೆಗಳಿಂದ ಗ್ರಾಮೀಣ ಮಹಿಳೆಯರಲ್ಲಿ ಅಂತರ್ಗತವಾದ ಸೂಕ್ತ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಿದ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಶ್ಲಾಘಿಸಿದರು. ವೇದಿಕೆಯಲ್ಲಿ ಉದ್ಯಮಿ ನೆಲ್ಯಾಡಿ ದಿವಾಕರ ಶೆಟ್ಟಿ, ಕುದ್ರುಕೊಡು ಜಗದೀಶ್ ಶೆಟ್ಟಿ, ಶ್ರೀಮತಿ ಚಂದ್ರಕಲಾ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಆಲೂರು ಸಂತೋಷ್ ಶೆಟ್ಟಿ, ಗೌರವ ಗಾರ್ಮೆಂಟ್ಸ್ ಸತೀಶ್ ಶೆಟ್ಟಿ ಸೂರ್ಕುಂದ, ಮನೋಹರ ಶೆಟ್ಟಿ ಉಪ್ಪುಂದ, ಜಯರಾಮ ಶೆಟ್ಟಿ ಗಂಟಿಹೊಳೆ, ಶಿಲ್ಪಾ ಶೆಟ್ಟಿ, ಮಮತಾ ಶೆಟ್ಟಿ ಉಪ್ಪುಂದ, ಖಜಾಂಚಿ ಜಯರಾಮ ಶೆಟ್ಟಿ, ಬಿಜೂರು ರಾಜಿವ ಶೆಟ್ಟಿ, ಕುರ್ಸಿ ಪ್ರಭಾಕರ ಶೆಟ್ಟಿ, ಉಪ್ಪುಂದ ಶಾಮ್ ಶೆಟ್ಟಿ, ನ್ಯಾಯವಾದಿ ವಿಶ್ವನಾಥ್ ಶೆಟ್ಟಿ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಾ ಸಂಭ್ರಮದ ಸಂಚಾಲಕ ನೆಲ್ಯಾಡಿ ಕರುಣಾಕರ್ ಶೆಟ್ಟಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ನಿತಿನ್ ಬಿ ಶೆಟ್ಟಿ ಸ್ವಾಗತಿಸಿದರು. ಪ್ರದೀಪ್ ಶೆಟ್ಟಿ ಕಾರಿಕಟ್ಟೆ ವಂದನಾರ್ಪಣೆಗೈದರು. ಶಿಕ್ಷಕ ಸುನಿಲ್ ಕುಮಾರ್ ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ ಹಾಗೂ ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರಥಮ ಪ್ರಯತ್ನದಲ್ಲಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಗಣೇಶ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ನಿವೃತ್ತ ಶಿಕ್ಷಕ ಅಣ್ಣಪ್ಪ ಶೆಟ್ಟಿ, ಶಿಕ್ಷಕ ಶಂಕರ್ ಶೆಟ್ಟಿ, ಉದಯ ಶೆಟ್ಟಿ, ಮಂಜುನಾಥ್ ಶೆಟ್ಟಿ, ಸಿ.ಆರ್.ಪಿ ಸತೀಶ್ ಶೆಟ್ಟಿ, ನೆಲ್ಯಾಡಿ ದಿವಾಕರ ಶೆಟ್ಟಿ ಮತ್ತು ಜಯಶೀಲ ಶೆಟ್ಟಿ ಸಹಕರಿಸಿದರು.ಒಟ್ಟು ನಾಲ್ಕು ವಿಭಾಗಗಳಲ್ಲಿ 28 ಸ್ಪರ್ಧೆಗಳು ನಡೆದು ಸುಮಾರು 250ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಬೈಂದೂರು ವಲಯದ ಆಯ್ದ ಅನುಭವಿ ಶಿಕ್ಷಕರು ಕಾರ್ಯನಿರ್ವಾಹಕರಾಗಿ ತೀರ್ಪುಗಾರರಾಗಿ ಸಹಕರಿಸಿದರು.