‘ಪುರಾತನ ದೇವಸ್ಥಾನದ ಹಿನ್ನೆಲೆಯನ್ನು ಯುವ ಜನರಿಗೆ ತಿಳಿಯಪಡಿಸುವ ಕಾರ್ಯಗಳ ಜತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸುವ ಕಾರ್ಯ ಮಾಡಬೇಕಾಗಿದೆ. ಆಲ್ಬಮ್ ಹಾಡುಗಳ ಜೊತೆ ಚಲನಚಿತ್ರ ಕೂಡ ನಿರ್ಮಾಣವಾಗಲಿ’ ಎಂದು ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ ಹೇಳಿದರು. ಪಡುಬಿದ್ರಿ ಭಾರತ್ ಸಿನಿಮಾದಲ್ಲಿ ನಡೆದ ‘ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ’ ಕನ್ನಡ ವೀಡಿಯೋ ಆಲ್ಬಮ್ ಹಾಡುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ವಂದನಾ ರೈ, ಕಾಪು ರಕ್ಷಣಾಪುರ ಜವನೆರ್ ಅಧ್ಯಕ್ಷ ನವೀನ್ ಎನ್ ಶೆಟ್ಟಿ, ವಿಶ್ವಾಸ್ ವಿ. ಅಮೀನ್, ಪತ್ರಕರ್ತ ಸುರೇಶ್ ಎರ್ಮಾಳ್, ಗಣ್ಯರಾದ ಶೇಖರ್ ಹೆಜಮಾಡಿ, ಕರುಣಾಕರ್ ಪೂಜಾರಿ, ಗೀತಾ ಅರುಣ್, ಸುನಿಲ್ ಕುಮಾರ್, ಯಶೋಧ ಪಡುಬಿದ್ರಿ, ರಚನ್ ಸಾಲ್ಯಾನ್, ನಮೃತಾ ಮಹೇಶ್, ಶರತ್ ಎಸ್ ಪೂಜಾರಿ ಪಡುಬಿದ್ರಿ, ನಾಯಕಿ ನಟಿ ಸುಪ್ರೀತಾ ಪೂಜಾರಿ ಪಾಂಗಾಳ, ಗಾಯಕಿ ನಮಿತಾ ಕಾರ್ಕಳ, ಭಜನಾ ಗಾಯಕ ಸುರೇಶ್ ಪಲಿಮಾರ್ ಉಪಸ್ಥಿತರಿದ್ದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.