ಸೆಪ್ಟೆಂಬರ್ 28 ರಂದು ಬಂಟರ ಯಾನೆ ನಾಡವರ ಮಾತೃ ಸಂಘ ಬಂಟ್ಸ್ ಹಾಸ್ಟೆಲ್ ಇದರ ಆಶ್ರಯದಲ್ಲಿ ಗಣೇಶೋತ್ಸವದ ಪ್ರಯುಕ್ತ ನಡೆದ “ಬಂಟ ಕ್ರೀಡೋತ್ಸವ – 2024” ರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಂಜೇಶ್ವರ ಬಂಟರ ಸಂಘವು ಪುರುಷರ ವಿಭಾಗದಲ್ಲಿ ಜಯಗಳಿಸಿ ಸತತ ಎರಡನೇ ಬಾರಿಗೆ ಪ್ರಥಮ ಬಹುಮಾನ ಪಡೆದು ಇತಿಹಾಸವನ್ನು ದಾಖಲಿಸಿತು.
ಮಂಜೇಶ್ವರ ಹಗ್ಗ ಜಗ್ಗಾಟದ ಪುರುಷರ ಹಾಗೂ ಮಹಿಳಾ ತಂಡಗಳಿಗೆ ಉತ್ತಮ ತರಬೇತಿಯನ್ನು ನೀಡಿ ಬಲಿಷ್ಠ ತಂಡ ರಚನೆಯಲ್ಲಿ ಸಹಕರಿಸಿದ ಆಂಜನೇಯ ಕ್ಲಬ್, ಕಣ್ವತೀರ್ಥ ಅಧ್ಯಕ್ಷರು ಮತ್ತು ಸರ್ವ ಸದಸ್ಯರಿಗೆ ಈ ಸಂಧರ್ಭದಲ್ಲಿ ಬಂಟರ ಸಂಘದ ಪರವಾಗಿ ಧನ್ಯವಾದಗಳನ್ನು ಸಮರ್ಪಿಸಿದರು.