ಹುಬ್ಬಳ್ಳಿ ಧಾರವಾಡದ ಕೆಸಿಡಿ ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಆರ್ ಎಸ್ ಸಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಬುಧವಾರ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಜೀ ಜಯಂತಿ ಅಂಗವಾಗಿ ದಿ. ಅಕ್ಕಮ್ಮ ಶೆಟ್ಟಿ ಸ್ಮರಣಾರ್ಥ ಆಯೋಜಿಸಲಾಗಿದ್ದ 30 ಯಾರ್ಡ್ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಯಲ್ಲಿ ದುರ್ಗಾ ನಿವಾಸ ತಂಡ ಚಾಂಪಿಯನ್ ಆಗಿ ಹಾಗೂ ಓಜೋನ್ ತಂಡ ರನ್ನರ್ ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದುರ್ಗಾನಿವಾಸ ತಂಡ 6 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 66 ರನ್ ಗಳಿಸಿತು. ಈ ಗುರಿ ಬೆನ್ನು ಹತ್ತಿದ ಓಜೋನ್ ತಂಡ 3 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿತು. ಇದರಿಂದ ದುರ್ಗಾನಿವಾಸ ತಂಡ 18 ರನ್ ಗಳಿಂದ ಜಯಗಳಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ಆರ್ ಎಸ್ ಸಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ನ ಅಧ್ಯಕ್ಷ, ಹೋಟೆಲ್ ಉದ್ಯಮಿ ರತ್ನಾಕರ ಶೆಟ್ಟಿ ಮಾತನಾಡಿ, ಇಂದಿನ ಯುವ ಜನಾಂಗ ಉತ್ತಮ ಜೀವನ ಶೈಲಿ, ಆರೋಗ್ಯ ಪೂರ್ಣ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು. ಯಾಂತ್ರಿಕ ಜೀವನ ಶೈಲಿಯಿಂದ ಎಂದು ಆರೋಗ್ಯದ ತೊಂದರೆಗಳು ಅನಿರೀಕ್ಷಿತವಾಗಿ ಬಂದೆರಗುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಯುವಕರು ಜೂಜು, ಮಧ್ಯಪಾನ, ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳದೇ ವಿವಿಧ ತಮಗಿಷ್ಟವಾದ ಕ್ರೀಡೆಗಳು, ಆರೋಗ್ಯಕಾರಿಯಾದಂತಹ ಹವ್ಯಾಸಗಳನ್ನು ಬೆಳೆಸಿಕೊಂಡು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಅದೇ ಉದ್ದೇಶದಿಂದ ಇಂದು ಹೋಟೆಲ್ ಮಾಲೀಕರು ಹಾಗೂ ಕಾರ್ಮಿಕರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಎಲ್ಲರೂ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿದ್ದು ಸಂತಸದ ವಿಷಯವಾಗಿದೆ ಎಂದರು.
ಉದ್ಯಮಿಗಳಾದ ಮಹೇಶ್ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸಂತೋಷ ಶೆಟ್ಟಿ, ಅಶೋಕ್ ಶೆಟ್ಟಿ, ಶರದ ಶೆಟ್ಟಿ, ಶಂಕರ ಕೊಟ್ಯಾನ್ ಅವರು ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಜಗದೀಶ್ ಶೆಟ್ಟಿ, ರಾಘು ಶೆಟ್ಟಿ, ಉಪಾಧ್ಯಕ್ಷ ಚಂದ್ರು ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕೋಟ್ಯಾನ, ಖಜಾಂಚಿ ಶ್ರೀಧರ ಶೆಟ್ಟಿ, ಸಹಕಾರ್ಯದರ್ಶಿ ಶ್ರೀ ರಾಘು ಶೆಟ್ಟಿ, ಮಹೇಶ ಶೆಟ್ಟಿ, ಗಿರೀಶ ಶೆಟ್ಟಿ, ಕಿರಣ ಶೆಟ್ಟಿ, ಅಶೋಕ ಶೆಟ್ಟಿ, ದಿನೇಶ ಶೆಟ್ಟಿ, ರತ್ನಾಕರ ಶೆಟ್ಟಿ ಕರಾವಳಿ ಕ್ಯಾಟರರ್ಸ್, ಹರೀಶ ಶೆಟ್ಟಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಹೋಟೆಲ್ ಉದ್ಯಮಿಗಳು ಕಾರ್ಮಿಕರು ಉಪಸ್ಥಿತರಿದ್ದರು.