ಸಹಕಾರಿ ಕ್ಷೇತ್ರದ ಮೂಲಕ ಸರಕಾರದ ಅನೇಕ ಅನುದಾನಗಳು ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಸಹಕಾರ ಸಂಘಗಳು ರೈತರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತವೆ. ಆದ್ದರಿಂದ ಸಹಕಾರ ಕ್ಷೇತ್ರ ಗ್ರಾಮೀಣ ಜನರ ಭರವಸೆಯ ಕ್ಷೇತ್ರವಾಗಿದೆ ಎಂದು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಸೆಪ್ಟೆಂಬರ್ 1 ರಂದು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಡಿಯಾಲ ಶಾಖಾ ಕಟ್ಟಡದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೊಡಿಯಾಲ ಶಾಖೆಗೆ ಸ್ಥಳ ಮಂಜೂರಾತಿ ಮಾಡಿಸಿದ ಹಿರಿಯ ಸಹಕಾರಿ ಧುರೀಣ ದಿವಂಗತ ಪಿ. ಭಾಸ್ಕರ ರೈಯವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಸಂಘದ ನೂತನ ಸಭಾಂಗಣವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಎನ್. ಮನ್ಮಥ ಉದ್ಘಾಟಿಸಿದರು. ಗ್ರಾಹಕ ಸೇವಾ ಕೇಂದ್ರವನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್. ರೈ ಉದ್ಘಾಟಿಸಿದರು. ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಿ. ವಿಜಯ ರೈ ವರದಿ ಮಂಡಿಸಿದರು.
ಸಂಘದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ, ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ನಿರ್ದೇಶಕ ಬಿ. ಕರುಣಾಕರ ಆಳ್ವ, ಅನಿಲ್ ಕುಮಾರ್ ರೈ ಸಿ., ಎಂ. ರಮೇಶ ಮಾರ್ಲ, ವಿಠಲದಾಸ್ ಎನ್. ಎಸ್. ಡಿ, ನಿರ್ಮಲ ರೈ, ಶಾರದಾ ರೈ, ಸಾವಿತ್ರಿ, ಲಕ್ಷ್ಮಣ ಬಿ.ಜಿ, ಹರೀಶ ಬಿ., ಸುಂದರ ಕೆ.ಜೆ, ವಲಯ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ ಇದ್ದರು. ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ ಸ್ವಾಗತಿಸಿ, ನಿರ್ದೇಶಕ ಅನಿಲ್ ರೈ ಚಾವಡಿಬಾಗಿಲು ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ನಿರ್ವಹಿಸಿದರು.