2023-24ನೇ ಸಾಲಿಗೆ ರೂ. 12.01 ಕೋಟಿ ಲಾಭ, ಶೇ. 25 ಡಿವಿಡೆಂಡ್: ಕೆ. ಜೈರಾಜ್ ಬಿ. ರೈ, ಆಧ್ಯಕ್ಷರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 30ನೇ ವಾರ್ಷಿಕ ಮಹಾಸಭೆ, ಸ0ಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮ0ಗಳೂರಿನ ಉರ್ವ ಸೆ0ಟನರಿ ಚರ್ಚ್ ಹಾಲ್ನಲ್ಲಿ ದಿನಾ0ಕ 01.09.2024ರ0ದು ಜರಗಿತು.
ಸ0ಘವು 31.03.2024ಕ್ಕೆ ಅ0ತ್ಯವಾದ, 2023-24ನೇ ಸಾಲಿನಲ್ಲಿ ರೂ.12.01 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25 ಡಿವಿಡೆ0ಡ್ನ್ನು ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ.
ಸಂಘದ ಅಧ್ಯಕ್ಷರಾದ ಶೀ ಕೆ. ಜೈರಾಜ್ ಬಿ. ರೈಯವರು 2023-24ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮಂಡಿಸಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಠೇವಣಾತಿ ಮತ್ತು ಸಾಲ ಸೇರಿದಂತೆ ಒಟ್ಟು ಸಾರ್ವಕಾಲಿಕ ದಾಖಲೆಯ ರೂ. 151 ಕೋಟಿ ವೃದ್ಧಿಯನ್ನು ದಾಖಲಿಸಿ, 31/03/2024ಕ್ಕೆ ರೂ.533 ಕೋಟಿ ಠೇವಣಾತಿ, ರೂ.453 ಕೋಟಿ ಸಾಲ, ರೂ.986 ಕೋಟಿ ಮೀರಿದ ಒಟ್ಟು ವ್ಯವಹಾರ, ರೂ.12.01 ಕೋಟಿ ನಿವ್ವಳ ಲಾಭ ಹಾಗೂ ರೂ. 3974 ಕೋಟಿ ಒಟ್ಟು ವಹಿವಾಟನ್ನು ಸಾಧಿಸಿದೆ. ಸಂಘದ ಸಾಧನೆಯ ಪ್ರಮುಖ ಮತ್ತೊಂದು ಅಂಶವೆಂದರೆ ಒಟ್ಟು ಅನುತ್ಪಾದಕ ಆಸ್ತಿಯು ಹೊರಬಾಕಿ ಸಾಲದ ಶೇ. 0.07ಗೆ ಸೀಮಿತವಾಗಿದ್ದು, ಕಳೆದ 17 ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ.
ಸಂಘದ ಕೇಂದ್ರ ಕಛೇರಿ ಕಟ್ಟಡದ ನಿರ್ಮಾಣ ಕಾರ್ಯವನ್ನು ಮಾರ್ಚ್ 2025ರೊಳಗೆ ಪೂರ್ತೀಕರಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ 5 ಹೊಸ ಶಾಖೆಗಳನ್ನು ಆರಂಭಿಸಲು ಮತ್ತು ಸದಸ್ಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಕೋರ್ ಬ್ಯಾಂಕಿಂಗ್ ಸೌಲಭ್ಯವನ್ನು ಅಳವಡಿಸಿಕೊಳ್ಳಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.
ಪ್ರಸ್ತುತ ರೂ.534 ಕೋಟಿ ಹೊರಬಾಕಿ ಸಾಲ ರೂ.474 ಕೋಟಿ, ಒಟ್ಟು ವ್ಯವಹಾರ ರೂ.1008 ಕೋಟಿಯನ್ನು ಮೀರಿದ್ದು ತನ್ನ “ವಿಶನ್ 2025”ರ ರೂ. 1,000 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಬಹಳ ಮುಂಚಿತವಾಗಿಯೇ ಅಂದರೆ 2024-25ರ ಸಾಲಿನ ಮೊದಲ ತ್ರೈಮಾಸಿಕ ಅವಧಿ 30.06.2024ರೊಳಗೆ ಸಾಧಿಸಿರುವುದು ಹೆಮ್ಮೆಯ ವಿಷಯ.
ಸ0ಘದ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿಯವರ ಉಪಸ್ಥಿತಿಯಲ್ಲಿ ಅವರ ಸಂದೇಶವನ್ನು ವಾಚಿಸಲಾಯಿತು. ನಿರ್ದೇಶಕರುಗಳಾದ ಶ್ರೀಮತಿ ಎ. ರತ್ನಕಾ0ತಿ ಶೆಟ್ಟಿ, ಶ್ರೀ ಕೆ. ಸೀತಾರಾಮ ರೈ ಸವಣೂರು, ಡಾ ಕೆ. ಸುಭಾಶ್ಚ0ದ್ರ ಶೆಟ್ಟಿ, ಶ್ರೀ ಪಿ.ಎಸ್. ಅಡ್ಯ0ತಾಯ, ಶ್ರೀ ವಿಠಲ ಪಿ. ಶೆಟ್ಟಿ,ಶ್ರೀ ಯಂ. ರಾಮಯ ಶೆಟ್ಟಿ, ಶ್ರೀ ಅರುಣ್ ಕುಮಾರ್ ಶೆಟ್ಟಿ, ಶ್ರೀ ಪಿ.ಬಿ. ದಿವಾಕರ ರೈ, ಶ್ರೀ ರವೀ0ದ್ರನಾಥ ಜಿ. ಹೆಗ್ಡೆ, ಶ್ರೀ ಕುಂಬ್ರ ದಯಾಕರ್ ಆಳ್ವ, ಶ್ರೀ ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ| ಎ0. ಸುಧಾಕರ ಶೆಟ್ಟಿ ಮತ್ತು ಶ್ರೀ ಅರಿಯಡ್ಕ ಚಿಕ್ಕಪ್ಪ ನಾೈಕ್ ಉಪಸ್ಥಿತರಿದ್ದರು.
ಮಹಾಪ್ರಬ0ಧಕರಾದ ಶ್ರೀ ಗಣೇಶ್ ಜಿ. ಕೆ. ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿ0ಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮ0ಡಿಸಿದರು. 2023-24ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು.
ನಿರ್ದೇಶಕರುಗಳಾದ, ಶ್ರೀ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿದರು, ಶ್ರೀ ಯ0. ರಾಮಯ ಶೆಟ್ಟಿ ವ0ದಿಸಿದರು. ಸಿಬ್ಬ0ದಿ ಶ್ರೀಮತಿ ಕಾವ್ಯಶ್ರೀ ಪ್ರಾರ್ಥಿಸಿದರು, ಶ್ರೀ ಧನಂಜಯ್ ಕುಮಾರ್ ಮತ್ತು ಶ್ರೀಮತಿ ಅಕ್ಷತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಬಹು ಸಂಖ್ಯೆಯಲ್ಲಿ ಸಂಘದ ಸದಸ್ಯರು ಮಹಾಸಭೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.