ಇಡ್ಯಾ ಗೋವಿಂದ ದಾಸ್ ಕಾಲೇಜ್ ಬಳಿಯ ಕೇಶವ ಚೌಟ ಕಂಪೌಂಡ್ ನಿವಾಸಿ ಡಾ. ಜಿ ಮಂಜಯ್ಯ ಶೆಟ್ಟಿ (76) ಅವರು ಜುಲೈ 11 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರು ಕೃಷಿಕರಾಗಿದ್ದು, ವೈದ್ಯಕೀಯ ಸೇವೆ, ರಾಜಕೀಯ ಸೇವೆ ಮತ್ತು ಇನ್ನಿತರ ಸೇವಾ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸುರತ್ಕಲ್ ಕರ್ನಾಟಕ ಸೇವಾ ವೃಂದದಲ್ಲಿ ಉಪಾಧ್ಯಕ್ಷರಾಗಿ, ಸುರತ್ಕಲ್ ಬಂಟರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಜನತಾದಳದಲ್ಲಿ ಪಕ್ಷ ಸಂಘಟಿಸಿ ಡಾ. ಜೀವರಾಜ ಆಳ್ಚ, ರಾಮಕೃಷ್ಣ ಹೆಗಡೆ, ರಾಮಯ್ಯ ನಾಯ್ಕ್, ಎಂ ಲೋಕಯ್ಯ ಶೆಟ್ಟಿ ಮೊದಲಾದವರೊಡನೆ ಒಡನಾಟ ಇರಿಸಿಕೊಂಡವರು. ತನ್ನ ತತ್ವ ಸಿದ್ದಾಂತದಲ್ಲಿ ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ಪ್ರಸ್ತುತ ಸುರತ್ಕಲ್ ಬಂಟರ ಸಂಘದ ನಿರ್ದೇಶಕರಾಗಿ ಸಂಘದ ಚಟುವಟಿಕೆಗಳಲ್ಲಿ ನಿರಂತರ ತನ್ನನ್ನು ತೊಡಗಿಸಿಕೊಂಡಿದ್ದರು.
ಡಾ. ಮಂಜಯ್ಯ ಶೆಟ್ಟಿ ಶ್ರೀ ಮಲರಾಯ ಜುಮಾದಿ ಬಂಟ ದೈವಸ್ಥಾನ ಮಲ್ಲೂರು ಇದರ ಒಂದನೇ ಗುತ್ತಿನವರು. ಶ್ರೀ ಈಶ್ವರ ದೇವಸ್ಥಾನ ಮಲ್ಲೂರು ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಜಿ ಮಂಜಯ್ಯ ಶೆಟ್ಟಿಯವರ ಅಂತ್ಯಕ್ರಿಯೆಯು ಜುಲೈ 13 ರಂದು ಶನಿವಾರ ಬೆಳಿಗ್ಗೆ 8:00 ಗಂಟೆಗೆ ಸುರತ್ಕಲ್ ಸ್ವಗೃಹದಲ್ಲಿ ವಿಧಿ-ವಿಧಾನಗಳು ನಡೆದು, ಮಧ್ಯಾಹ್ನ 11 ಗಂಟೆಗೆ ಗುಂಡಿಲ ಗುತ್ತಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಡಾ. ಜಿ ಮಂಜಯ್ಯ ಶೆಟ್ಟಿ ಗುಂಡಿಲ ಗುತ್ತು ಅವರ ನಿಧನಕ್ಕೆ ಸುರತ್ಕಲ್ ಬಂಟರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.