ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಮಂಗಳೂರು ಅರ್ಪಿಸುವ ವೀಣಾ ಟಿ ಶೆಟ್ಟಿಯವರ ಲೇಖನಗಳ ಸಂಗ್ರಹ “ಗೋಡೆಯ ಮೇಲಿನ ಚಿತ್ತಾರ” ಪುಸ್ತಕ ಬಿಡುಗಡೆ ಸಮಾರಂಭವು ಜುಲೈ 8 ರಂದು ಸೋಮವಾರ ಸಂಜೆ 5 ಗಂಟೆಗೆ ಕೆನರಾ ಪದವಿ ಕಾಲೇಜು ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ರಂಗ ಸಂಗಾತಿಯ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ವಹಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ಖ್ಯಾತ ಬರಹಗಾರ್ತಿ, ಅನುವಾದಕರಾದ ಡಾ ಪಾರ್ವತಿ ಜಿ ಐತಾಳ್ ಮಾಡಲಿದ್ದಾರೆ. ಚಿಂತಕ, ವಾಗ್ಮಿ ಡಾ| ಅರುಣ್ ಉಳ್ಳಾಲ್ ಪುಸ್ತಕ ಪರಿಚಯ ಮಾಡಲಿದ್ದಾರೆ. ರಂಗಕರ್ಮಿ, ಸಾಹಿತಿ ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ.