ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಮಾಜಿ ನಿರ್ದೇಶಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಪುತ್ತೂರು ಮೂಲದ ಡಾ| ಅಗರಿ ನವೀನ್ ಭಂಡಾರಿಯವರು ಬಿಳೇಕಹಳ್ಳಿಯಲ್ಲಿರುವ ಶ್ರೀ ಆಯ್ಯಪ್ಪ ದೇವಾಲಯದ ಶಿವನ ಗುಡಿ ಸ್ಥಾಪನೆಗೆ 10 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಡಾ| ಅಗರಿ ನವೀನ್ ಭಂಡಾರಿಯವರ ಪುತ್ರಿ ಅನುಷ್ಕಾ ಶೆಟ್ಟಿ, ಸಹೋದರ 2024 ರ ಸಾಲಿನ ಬಂಟರತ್ನ ಪ್ರಶಸ್ತಿ ಪುರಸ್ಕೃತ ಕರ್ನಲ್ ಜಗಜೀವನ್ ಭಂಡಾರಿ ಉಪಸ್ಥಿತರಿದ್ದರು.
ಡಾ| ಅಗರಿ ನವೀನ್ ಭಂಡಾರಿಯವರು ಈಗಾಗಲೇ ಬೆಂಗಳೂರು ನಗರದ ಬಿಳೇಕಹಳ್ಳಿಯಲ್ಲಿ ಸುಸಜ್ಜಿತವಾದ ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇದು ಬೆಂಗಳೂರಿನಲ್ಲೇ ಮಾದರಿ ಬಡಾವಣೆಯಾಗಿ ಬೆಳೆದಿದೆ. ಇದರ ಬೆಳವಣಿಗೆ, ಅಭಿವೃದ್ಧಿ ಹಿಂದೆ ಡಾ| ಅಗರಿ ನವೀನ್ ಭಂಡಾರಿ ಮತ್ತವರ ತಂಡದ ಸದಸ್ಯರ ಪರಿಶ್ರಮವಿದೆ. ಇಲ್ಲಿ ಅಯ್ಯಪ್ಪ ದೇವಸ್ಥಾನ ನಿರ್ಮಿಸಲು ಮತ್ತು ಇದರ ಅಭಿವೃದ್ಧಿಗೆ ಇವರ ಕೊಡುಗೆ ಹಿರಿದಾದದು. ಆಧುನಿಕ ಜೀವನ ಶೈಲಿಯ ಅತ್ಯಾಧುನಿಕತೆಯ ರೂಪವನ್ನು ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆಗೆ ನೀಡಿದ್ದಾರೆ.