ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಮಂಗಳೂರು ಇವರ ವತಿಯಿಂದ ಮಂಗಳೂರಿನ ಕೊಟ್ಟಾರ ಅಬ್ಬಕ್ಕ ನಗರದಲ್ಲಿರುವ ನಿಗಮದ ಕಚೇರಿಯಲ್ಲಿ ಜೂನ್ 7 ರಂದು ರೈತರ ತರಬೇತಿ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ತಾಲೂಕಿನ ವೈಜ್ಞಾನಿಕ ಗೇರು ಕೃಷಿಕ, ಗೇರು ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿರುವ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಮ್ಮ ಗೇರು ಕೃಷಿಯ ಬಗ್ಗೆ ಅನುಭವದ ಬಗ್ಗೆ ಮಾತನಾಡಲಿದ್ದಾರೆ.ಸಮಾರಂಭದ ಅಧ್ಯಕ್ಷತೆಯನ್ನು ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ಡಿಸಿಆರ್ ನ ನಿರ್ದೇಶಕ ಡಾ. ದಿನಕರ ಅಡಿಗ ಮತ್ತು ಡಿಸಿಆರ್ ವಿಜ್ಞಾನಿ ಟಿ.ಎನ್. ರವಿಪ್ರಸಾದ್ ರವರಿಂದ ತಾಂತ್ರಿಕ ತರಬೇತಿ ನಡೆಯಲಿದೆ. ಅಪರಾಹ್ನ ‘ಮಾನವ ಸಂಪನ್ಮೂಲ’ ಮತ್ತು ‘ಮಾನಸಿಕ ಒತ್ತಡ ಮತ್ತು ನಿವಾರಣೆ’ ವಿಷಯಗಳಲ್ಲಿ ತರಬೇತಿ ನಡೆಯಲಿದೆ.
Previous Articleಜೂನ್ 7, 8ರಂದು ಮೂಡುಬಿದಿರೆಯಲ್ಲಿ “ಆಳ್ವಾಸ್ ಪ್ರಗತಿ-2024 ಉದ್ಯೋಗ ಮೇಳ”
Next Article ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತ್ರಿಶೂಲ್ ಶೆಟ್ಟಿಗೆ ಚಿನ್ನ