ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಹಳೆಮನೆ ಪೆರ್ಡೂರು ನಿವಾಸಿ ಶತಾಯುಷಿ ರುದ್ರಮ್ಮ ಹೆಗ್ಡೆ (102 ವರ್ಷ) ಮೇ 6 ರಂದು ನಿಧನರಾದರು. ಮುಂಬಯಿ ಬಂಟರ ಸಂಘದ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಸಹಿತ 4 ಗಂಡು, 6 ಹೆಣ್ಣು ಹಾಗೂ ಸಹೋದರಿಯರು, ಸಹೋದರು, ಅಳಿಯಂದಿರು, ಸೊಸೆಯರು, ಮೊಮ್ಮಕ್ಕಳು, ಮರಿ ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರುದ್ರಮ್ಮ ಹೆಗ್ಡೆ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು, ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ, ಉದ್ಯಮಿ ರವೀಂದ್ರನಾಥ್ ಭಂಡಾರಿಯವರು ದುಃಖ ಸಂತಾಪ ಸೂಚಿಸಿದ್ದಾರೆ.