ಕಾವೂರು ಬಂಟರ ಭವನಕ್ಕೆ ಶಿಲಾನ್ಯಾಸ, ಸಂಘದ ಆಡಳಿತ ಕಚೇರಿ ಮತ್ತು ಬಯಲು ರಂಗ ಮಂದಿರದ ಉದ್ಘಾಟನೆ ಫೆಬ್ರವರಿ 21 ರಂದು ಪೂರ್ವಹ್ನ 11 ಗಂಟೆಗೆ ಕೂಳೂರು ಕಾವೂರು ರಸ್ತೆಯ ಮಾಲಾಡಿ ಕೋರ್ಟ್ ಮುಖ್ಯ ರಸ್ತೆಯಲ್ಲಿರುವ ಕಾವೂರು ಬಂಟರ ಸಂಘದ ನಿವೇಶನದಲ್ಲಿ ಜರಗಲಿದೆ ಎಂದು ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಟರ ಭವನವು ಒಟ್ಟು 33,000 ಚದರ ವಿಸ್ತೀರ್ಣದ ಸುಮಾರು 1,000 ಆಸನಗಳ ಸಭಾಭವನ, ಭೋಜನಾಲಯ, 100 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಹಾಸ್ಟೆಲ್ ಹಾಗೂ ನಿತ್ಯಾನಂದ ಗುರುಗಳ ಪ್ರತಿಮೆಯನ್ನು ಒಳಗೊಂಡಿರುತ್ತದೆ ಎಂದರು.
ಪ್ರತಿಕಾಗೋಷ್ಠಿಯಲ್ಲಿ ಕಟ್ಟಡ ಸಮಿತಿಯ ಅಧ್ಯಕ್ಷ ಡಿ.ಸುಧಾಕರ ಶೆಟ್ಟಿ ಮುಗ್ರೋಡಿ, ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಕಾವೂರು, ಸಂಚಾಲಕ ಎಂ.ಎಸ್. ಶೆಟ್ಟಿ ಸರಪಾಡಿ, ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯ ಎಸ್. ಶೆಟ್ಟಿ ಉಪಸ್ಥಿತರಿದ್ದರು.