ಬಿ ಸಿ ರೋಡು ವಲಯ ಬಂಟರ ಸಂಘದ ಆಯೋಜನೆಯಲ್ಲಿ “ಕೆಸರ್ದ ಕಂಡೊಡು ಬಂಟರೆ ಕೂಟ” ಕಾರ್ಯಕ್ರಮ ಸ್ಪರ್ಶ ಕಲಾ ಮಂದಿರದ ಹಿಂದಿನ ಗದ್ದೆಯಲ್ಲಿ ತಾ 1-10-2023 ರಂದು ನಡೆಯಿತು. ಬಂಟ್ವಾಳ ತಾಲೂಕು ಮಟ್ಟದ ಬಂಟರ ಹಗ್ಗಜಗ್ಗಾಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತು. ಹಿರಿಯ ಕೃಷಿಕ ಮಾಡ್ಯಾರುಗುತ್ತು ವಿಶ್ವನಾಥ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ತಾ. ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ, ತಾ. ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ತಾ. ಬಂಟರ ಮಹಿಳಾ ವಿಭಾಗ ಅಧ್ಯಕ್ಷೆ ರಮಾ ಭಂಡಾರಿ, ತಾಲೂಕು ಯುವ ವಿಭಾಗ ಅಧ್ಯಕ್ಷ ನಿಶಾನ್ ಆಳ್ವ, ಖ್ಯಾತ ವಕೀಲ ಅಶ್ವನಿ ಕುಮಾರ್ ರೈ, ಮಾಜಿ ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಪ್ರತಿಷ್ಠಿತ ಉದ್ಯಮಿಗಳಾದ ಐತಪ್ಪ ಆಳ್ವ, ಹರೀಶ್ ಶೆಟ್ಟಿ ತುಂಬೆ ಮತ್ತು ಜಯಂತ್ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.
ಬಿ ಸಿ ರೋಡು ವಲಯ ಬಂಟರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಪರಾರಿಗುತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಡೆದ ಹಗ್ಗ ಜಗ್ಗಾಟ ಪಂದ್ಯ ಕೂಟದಲ್ಲಿ ಪುರುಷರ ವಿಭಾಗದಲ್ಲಿ ಸಜಿಪ ವಲಯ ಪ್ರಥಮ ಸ್ಥಾನ ಪಡೆದರೆ, ವಿಟ್ಲಾ ವಲಯ ಬಂಟರ ಸಂಘ ದ್ವಿತೀಯ ಸ್ಥಾನ ಪಡೆದರು. ಅದೇ ರೀತಿ ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಫರಂಗಿಪೇಟೆ ವಲಯ ಪ್ರಥಮ ಸ್ಥಾನ ಪಡೆದು ಮಾಣಿ ವಲಯ ದ್ವಿತೀಯ ಸ್ಥಾನ ಪಡೆದರು. ಬಿ ಸಿ ರೋಡು ವಲಯ ಬಂಟರ ಸಂಘದ ಕಾರ್ಯದರ್ಶಿ ಯಶವಂತ ಶೆಟ್ಟಿ, ಕೋಶಾಧಿಕಾರಿ ಕರುಣಾಕರ ಶೆಟ್ಟಿ ಮಡ್ಯಾರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.