ಮಣಿಪುರ ಕುಂತಳನಗರದ ಸ್ಕಿಲ್ ಡೆವಲೆಪ್ಮೆಂಟ್ ಸೆಂಟರ್ ನಲ್ಲಿ ಡಿಜಿಟಲ್ ಲಿಟರೆಸಿ ಯೋಜನೆಯಡಿ ಆಲ್ ಕಾರ್ಗೋ ವತಿಯಿಂದ ನಡೆದಿದ್ದ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ ಸರ್ಟಿಫಿಕೇಟ್ ವಿತರಣೆ ಮತ್ತು ಒರಿಯೆಂಟೇಶನ್ ಸಮಾರಂಭ ನಡೆಯಿತು. ನಿಟ್ಟೆ ಜಸ್ಟಿಸ್ ಕೆ. ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಇದರ ಪ್ಲೇಸ್ ಮೆಂಟ್ ಅಡ್ಮಿಶನ್ಸ್ ಮುಖ್ಯಸ್ಥರಾದ ಗುರುಪ್ರಶಾಂತ್ ಭಟ್ ಕೆ. ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಅವರು ಪ್ರಸ್ತಾವಿಸಿದರು. ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಇದರ ಅಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಶುಭವನ್ನು ಹಾರೈಸಿದರು.
ವೇದಿಕೆಯಲ್ಲಿ ಮುಂಬಯಿ ಶಿವಿಕಾ ಪ್ಲಾಸ್ಟಿಕ್ಸ್ ಪ್ರೈ. ಲಿ. ಇದರ ಮ್ಯಾನೇಜಿಂಗ್ ಡೈರೆಕ್ಟರ್ ಮಧುಕರ್ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷರಾದ ಡಾ. ಎಚ್. ಬಿ. ಶೆಟ್ಟಿ, ಟ್ರಸ್ಟಿಯವರಾದ ಪದ್ಮನಾಭ ಹೆಗ್ಡೆ, ಗೋಪಾಲ ಶೆಟ್ಟಿ, ಹರೀಂದ್ರ ಹೆಗ್ಡೆ, ದಯಾನಂದ ಶೆಟ್ಟಿ ಕಲ್ಮಂಜೆ, ರಂಜಿನಿ ಹೆಗ್ಡೆ, ರಮೇಶ್ ಶೆಟ್ಟಿ ನಿಂಜೂರು, ಅಶೋಕ್ ಶೆಟ್ಟಿ ಕೆಮ್ತೂರು, ಹ್ಯುಮ್ಯಾನಿಟಿ ಚಾರಿಟೇಬಲ್ ಟ್ರಸ್ಟ್ ನ ನವೀನ್ ಬೆಳ್ಮಣ್, ಮೈಸ್ ಸಂಸ್ಥೆಯ ಆಡಳಿತಾಧಿಕಾರಿ ಗಾಯತ್ರೀ ಉಪಾಧ್ಯಾಯ, ಟ್ರೈನರ್ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಕಾರ್ಯದರ್ಶಿ ವಿಜಿತ್ ಶೆಟ್ಟಿ ವಂದಿಸಿದರು. ನಿಟ್ಟೆ ಜಸ್ಟಿಸ್ ಕೆಎಸ್ ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಇದರ ಪ್ರೋ. ದಿವ್ಯಾರಾಣಿ ಪ್ರದೀಪ್ ನಿರೂಪಿಸಿದರು.