ಪುಣೆ ;ಶ್ರೀ ಗುರುದೇವ ಸೇವಾಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಪ್ರತಿ ವರ್ಷದಂತೆ ನಡೆಯುವ ಪುಣ್ಯ ಜ್ಯೋತಿರ್ಲಿಂಗ ದರ್ಶನ ಮತ್ತು ಪುಣ್ಯ ಕ್ಷೇತ್ರಗಳ ದರ್ಶನದ ತೀರ್ಥಯಾತ್ರೆಯು ಈ ಬಾರಿ ಉತ್ತರಖಂಡದ ದೇವಭೂಮಿಯ ಹೃಷಿಕೇಶ್,ಹರಿದ್ವಾರ್ ,ಕೇದಾರನಾಥ್ ಜ್ಯೋತಿರ್ಲಿಂಗ ,ಬದ್ರಿನಾಥ್ ನರ ನಾರಾಯಣ ದೇವರ ದರ್ಶನದೊಂದಿಗೆ ಜರಗಿತು. ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರ ಶುಭಾಶಿರ್ವಾದದೊಂದಿಗೆ , ಪುಣೆ ಶ್ರೀ ಗುರುದೇವ ಸೇವಾ ಬಳಗದ ಅದ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ, ಪ್ರ ಕಾರ್ಯದರ್ಶಿ ರೋಹಿತ್ ಶೆಟ್ಟಿ ಯವರ ಮು೦ದಾಳತ್ವದಲ್ಲಿ ಸುಮಾರು 44 ಜನ ಯಾತ್ರಾರ್ಥಿಗಳು 8 ದಿನದ ಈ ಯಾತ್ರೆಯಲ್ಲಿ ಪಾಲ್ಗೊಂಡರು , ಈ ಬಾರಿ ಬಾರತದ ಪವಿತ್ರವಾದ 12 ಜ್ಯೋತಿರ್ಲಿಂಗಗಳ ಪೈಕಿ ಹಿಮಾಲಯ ಪರ್ವತ ತಪ್ಪಲಿನ ಕೇದಾರನಾಥ್ ಕೆಧಾರೆಶ್ವರನರ ದರ್ಶನ ಗೈದು ದೇವಾಲಯದಲ್ಲಿ ಭಕ್ತರು ಪೂಜೆ ಸಲ್ಲಿಸಿ ಪುನಿತರಾದರು ,ಪುಣೆ ಶ್ರೀ ಗುರುದೇವ ಸೇವಾ ಬಳಗವು ಈ ಬಾರಿ 12ನೆ ಜ್ಯೋತಿರ್ಲಿಂಗ ದರ್ಶನ ಮಾಡುವ ಮೂಲಕ ಭಾರತದ 12 ಜ್ಯೋತಿರ್ಲಿಂಗಳ ದರ್ಶನ ಮಾಡಿದ ಪುಣ್ಯ ಕಾರ್ಯವನ್ನು ಮಾಡಿದಂತೆ ಆಯಿತು .
ಮೊದಲನೇ ದಿನ ಹರಿದ್ವಾರ ದಲ್ಲಿ ಗಂಗಾ ಸ್ಥಾನ ಮಾಡಿ ಗಂಗಾರಾತಿ ವೀಕ್ಷಿಸಿ ಪುನೀತರಾದರು ನಂತರ ಹೃಷಿಕೇಶ್ ನ ಪುಣ್ಯ ಸ್ಥಳಗಳ ದರ್ಶನ ಅಲಕಾನಂದ ನದಿ ತಿರದ ಧಾರಿಮಾ ದೇವಿ ದರ್ಶನ ಪಡೆದು , ಆಸುಪಾಸಿನ ವಿವಿದ ದೇವಾಲಯಗಳ ದರ್ಶನ ಮಾಡಲಾಯಿತು, ನಂತರ ಎರಡು ದಿನಗಳ ಕಾಲ ಕೆಧಾರ ನಾಥದಲ್ಲಿದ್ದು ಜ್ಯೋತಿರ್ಲಿಂಗ ಕೆಧಾರೇಶ್ವರ ದರ್ಶನ ,ಹಿಮಾಲಯದ ತಪ್ಪಲಿನ ಪುಣ್ಯ ಕ್ಷೇತ್ರಗಳ ದರ್ಶನ ಮಾಡಲಾಯಿತು .ನಂತರ ಬದರಿನಾಥ ನರ ನಾರಾಯಣ ಪುಣ್ಯ ಕ್ಷೇತ್ರ ದರ್ಶನ ಮಾಡಲಾಯಿತು .ಪ್ರಕತಿಯ ಸೋಭಗಿನ ಜೊತೆ ಪವಿತ್ರವಾದ ಪುಣ್ಯ ಕ್ಷೇತ್ರ ದರ್ಶನ ಮಾಡುವ ಮೂಲಕ ದೇವ ಭೂಮಿಯ ಸೊಬಗನ್ನು ಭಕ್ತರು ಕಣ್ತುಂಬಿಕೊಂಡರು. ಪುಣೆ ಶ್ರೀ ಗುರುದೇವ ಸೇವಾ ಬಳಗದ ಉಸ್ತುವಾರಿಯಲ್ಲಿ ಮತ್ತು ಮಾರ್ಗದರ್ಶನದಲ್ಲಿ ಭಾರತದ 12 ಜ್ಯೋತಿರ್ಲಿಂಗ ದರ್ಶನದ ಯಾತ್ರೆ ಮತ್ತು ಪುಣ್ಯ ಕ್ಷೇತ್ರಗಳ ಯಾತ್ರೆಗಳನ್ನು ಕೈಗೊಳ್ಳುವ ಸಂಕಲ್ಪವನ್ನು ಮಾಡಲಾಗಿದ್ದು ,ಪ್ರತಿವರ್ಷವೂ ಜ್ಯೋತಿರ್ಲಿಂಗ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತಿದ್ದು, ಸೌರಾಷ್ಟ್ರ ಸೋಮನಾಥ ,ಶ್ರೀಶೈಲ ಮಲ್ಲಿಕಾರ್ಜುನಾಥೆಶ್ವರ ,ಉಜ್ಜೈನಿ ಮಹಾಂಕಲೇಶ್ವರ ,ಮತ್ತು ಓಂಕಾರೇಶ್ವರ ,ಪಾರ್ಲಿ
ವೈದ್ಯನಾಥೆಶ್ವರ ,ಭೀಮಶಂಕರ್ ಜ್ಯೋತಿರ್ಲಿಂಗ ,ರಾಮೇಶ್ವರಂನ ರಾಮೇಶ್ವರ ಜ್ಯೋತಿರ್ಲಿಂಗ ,ನಾಗೇಶ್ವರ ಜ್ಯೋತಿರ್ಲಿಂಗ ,,ತ್ರಿಂಭಕೇಶ್ವರ ಜ್ಯೋತಿರ್ಲಿಂಗ ನಾಸಿಕ್ ,ಗ್ರಿಷ್ನೆಶ್ವೇರ ಜ್ಯೋತಿರ್ಲಿಂಗ ಎಲ್ಲೋರಾ, ಕಾಶಿ ವಿಶ್ವನಾಥೇಶ್ವರ ಹಾಗೂ ಈ ಬಾರಿ ಕೆಧಾರ ನಾಥೆಶ್ವರ ಜ್ಯೋತಿರ್ಲಿಂಗ ಸೇರಿದಂತೆ 12 ಜ್ಯೋತಿರ್ಲಿಂಗ ದರ್ಶನ ಪೂರ್ತಿ ಗೊಲಿಸಿದಂತೆ ಆಗಿದೆ ಅಲ್ಲದೆ ವಿವಿದ ಪುಣ್ಯ ಕ್ಷೇತ್ರಗಳ ದರ್ಶನವನ್ನು ವನ್ನು ಮಾಡಲಾಗಿದೆ. ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ,ಕಾರ್ಯದರ್ಶಿ ರೋಹಿತ್ ಶೆಟ್ಟಿ ,ಕೋಶಾಧಿಕಾರಿ ಹರೀಶ್ ಮೂಡಬಿದ್ರಿ ,ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಕಾರ್ಯದರ್ಶಿ ವೀಣಾ ಪಿ .ಶೆಟ್ಟಿ ಸೇರಿದಂತೆ ಪ್ರಮುಖರು ಯಾತ್ರೆಯ ಜವಬ್ದಾರಿಯನ್ನು ವಹಿಸಿಕೊಂಡು ಆಯೋಜಿಸುವಲ್ಲಿ ಸಹಕರಿಸಿದರು ಬಳಗದ ಪ್ರಮುಖರೆಲ್ಲರೂ ಸರ್ವ ರೀತಿಯಿಂದಲೂ ಸಹಕಾರ ನೀಡಿ ಸಹಕರಿಸಿದರು ,ಹೆಚ್ಚಿನ ಸಂಖ್ಯೆಯ ದಂಪತಿಗಳು ಮತ್ತು ಮಹಿಳೆಯರು ಈ ಯಾತ್ರೆಯಲ್ಲಿ ಬಾಗವಹಿಸಿದ್ದು ವಿಶೇಷವಾಗಿತ್ತು.
ಚಿತ್ರ ವರದಿ –ಹರೀಶ್ ಮೂಡಬಿದ್ರಿ