ದೇವದಾಸ್ ಕಾಪಿಕಾಡ್ ಕಥೆ ಸಂಭಾಷಣೆ ಬರೆದು ಅರ್ಜುನ್ ಕಾಪಿಕಾಡ್ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿದ “ರಾಪಟ” ತುಳು ಚಿತ್ರದ ಯುಎಇ ರಾಷ್ಟ್ರದಲ್ಲಿ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು. ದುಬೈನ ಮಾರ್ಕೊ ಪೋಲೊ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಯುಎಇಯ ಉದ್ಯಮಿಗಳು, ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿ ಪ್ರಮುಖರು ಉಪಸ್ಥಿತರಿದ್ದರು.
ದೀಪ ಬೆಳಗಿಸುವ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ನಾಯಕ ನಟ ಅರ್ಜುನ್ ಕಾಪಿಕಾಡ್, ಸಚಿನ್ ಶೆಟ್ಟಿ (ಶಟರ್ ಬಾಕ್ಸ್ ಫಿಲ್ಮ್ಸ್), ಸಂದೀಪ್ ಕುಮಾರ್ (Production Manger) ಉಪಸ್ಥಿತರಿದ್ದರು.
ಅರ್ಜುನ್ ಕಾಪಿಕಾಡ್ ಮಾತನಾಡುತ್ತಾ “ಹಿರಿಯವರ ಆರ್ಶಿವಾದೊಂದಿಗೆ ಒಂದು ಒಳ್ಳೆಯ ಚಿತ್ರವನ್ನು ನಿರ್ದೇಶನ ಮಾಡಿ ತುಳುನಾಡಿನ ಜನರಿಗೆ ನೀಡಲಿದ್ದೇವೆ. ಒಳ್ಳೆಯ ಚಿತ್ರವನ್ನು ತುಳುವರು ಕೈ ಬಿಡಲ್ಲ ಎಂಬ ಧೈರ್ಯದಿಂದ ರಾಪಟ ಎಂಬ ಚಿತ್ರವನ್ನು ಸಪ್ಟೆಂಬರ್ 9 ಮತ್ತು 10 ರಂದು ಯುಎಇಯ ತುಳುವರಿಗೆ ಪ್ರದರ್ಶಿಸಲಿದ್ದೇವೆ. ಎಲ್ಲರೂ ಚಿತ್ರವನ್ನು ನೋಡಿ ಈ ಚಿತ್ರವನ್ನು ಗೆಲ್ಲಿಸಬೇಕೆಂದು” ವಿನಂತಿಸಿದರು. ಮುಖ್ಯ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಉದ್ಯಮಿ ಚಿತ್ರ ನಿರ್ಮಾಪಕರಾದ ರೊನಾಲ್ಡೊ ಮಾರ್ಟಿಸ್, ಫ್ರಾಂಕ್ ಫರ್ನಾಂಡೀಸ್, ಜೊಸೆಫ್ ಮಥಾಯಿಸ್, ಹರೀಶ್ ಶೇರಿಗಾರ್, ಹರೀಶ್ ಬಂಗೇರ, ಈಶ್ವರಿದಾಸ್ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ, ದುಬೈ ಕರ್ನಾಟಕ ಸಂಘದ ಪದಾಧಿಕಾರಿಗಳಾದ ಮನೋಹರ ಹೆಗ್ಡೆ, ದಯಾ ಕೀರೊಡಿಯನ್, ಶಶಿಧರ್ ನಾಗರಾಜಪ್ಪ, ಬಿಲ್ಲವಾಸ್ ಅಬುಧಾಬಿಯ ಮನೋಹರ ತೋನ್ಸೆ, ಬ್ರಾಹ್ಮಣ ಸಮಾಜದ ಸುಧಾಕರ ರಾವ್ ಪೇಜಾವರ, ಮೊಗವಿರ ಸಮಾಜದ ಬಾಲ ಸಾಲಿಯಾನ್, ಉದ್ಯಮಿ ಜೇಮ್ಸ್ ಮೆಂಡೋನ್ಸ, ವಿನೋದ್ ಉಳ್ಳಾಲ್, ಗಮ್ಮತ್ ಕಲಾವಿದರು ದುಬೈಯ ವಿಶ್ವನಾಥ ಶೆಟ್ಟಿ, ಶ್ರೀಮತಿ ಸುವರ್ಣ ಸತೀಶ್ ಪೂಜಾರಿ, ಶ್ರೀಮತಿ ಜಯಶ್ರೀ ಶೆಟ್ಟಿ, ರವಿ ಕೋಟ್ಯಾನ್, ವರದರಾಜ್ ಶೆಟ್ಟಿಗಾರ್, ಮಲ್ಲಿಕಾರ್ಜುನ ಗೌಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತಿಥಿಗಳ ಸಹಭಾಗಿತ್ವದಲ್ಲಿ ಟಿಕೆಟ್, ಹಾಡಿನ ಸಿಡಿ, ಪೊಸ್ಟರ್ ಬಿಡುಗಡೆಗೊಳಿಸಲಾಯಿತು. ರಾಪಟ ಚಿತ್ರದ ನಿರ್ಮಾಪಕರಲ್ಲಿ ಒರ್ವರಾದ ಶ್ರೀಮತಿ ಶೈಲ ರಾಜ್ ಪೂಜಾರಿ ಮತ್ತು ದೇವಿಕ ಆಚಾರ್ಯರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಯುಎಇಯ ಪ್ರತಿಭಾವಂತ ಗಾಯಕ ಗಾಯಕಿಯರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಕರಾವಳಿಯ ಪ್ರಬುದ್ಧ ಚಿತ್ರ ನಟರನ್ನೊಳಗೊಂಡ ರಾಪಟ ತುಳು ಚಿತ್ರದಲ್ಲಿ ಕಾಪಿಕಾಡ್ ಅವರ ಕಥೆ ನಿರೀಕ್ಷೆ ಮೂಡಿಸಿ ಕಲಾ ರಸಿಕರನ್ನು ಕಾತರದಿಂದ ಕಾಯುವಂತಾಗಿಸಿದೆ. ದುಬೈಯ Star Galleria Cinimas Deira, Nova Cinimas Ibnbatuta mall, ಅಬುಧಾಬಿಯ Star ಸಿನಿಮಾಸ್, ಶಾರ್ಜಾದ Cini Polis Oasis Mall ಮತ್ತು Nova Cinimas Sahara Center ಶಾರ್ಜಾದಲ್ಲಿ ಪ್ರಿಮಿಯರ್ ಪ್ರದರ್ಶನಗೊಳ್ಳಲಿದೆ.
ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ : 0503911719,0569136773,0527601947,0529157825
ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)