ಯಕ್ಷಧ್ರುವ ಪಟ್ಲ ಪೌಂಡೇಶನ್ ವತಿಯಿಂದ ತೋಕೂರು ರಾಮಣ್ಣ ಶೆಟ್ಟಿ ಮೆಮೋರಿಯಲ್ ಶಾಲೆಯಲ್ಲಿ ನಡೆದ ಯಕ್ಷದ್ರುವ ಯಕ್ಷ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಈ ಸಂದರ್ಭ ಶಾಲೆಯ ಪ್ರಾಂಶುಪಾಲರನ್ನು ಪಟ್ಲ ಫೌಂಡೇಶನ್ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯಕ್ಷದ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ವಾಸುದೇವ ಐತಾಳ್, ಮೀನಾಕ್ಷಿ ಐತಾಳ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಶಾಲಾ ಪ್ರಾಂಶುಪಾಲೆ ಶ್ರೀ ಲತಾ ರಾವ್, ಸತೀಶ್ ಶೆಟ್ಟಿ ಎಕ್ಕಾರು, ಉಪಸ್ಥಿತರಿದ್ದರು. ಅಜಿತ್ ಕೆರೆಕಾಡು ಸ್ವಾಗತಿಸಿ ಶಿಕ್ಷಕಿ ವಾಣಿ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಸುರೇಖ ನಿರೂಪಿಸಿದರು.