ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯು ಸೆಪ್ಟೆಂಬರ್ 10 ಬೆಳಿಗ್ಗೆ ಗಂಟೆ 10.00ಕ್ಕೆ ಮೂಡಬಿದಿರೆಯ ಸೃಷ್ಠಿ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ. ನೂತನ ಕಂಬಳ ಜಿಲ್ಲಾ ಸಮಿತಿ ರಚನೆ ಹಾಗೂ 2023-24 ನೇ ಋತುವಿನ ವಿವಿಧ ಕಂಬಳದ ದಿನಾಂಕಗಳನ್ನು ಅದೇ ದಿನ ನಿರ್ಧರಿಸಲಾಗುವುದು.
ಕಂಬಳ ವ್ಯವಸ್ಥಾಪಕರು, ಕೋಣಗಳ ಯಜಮಾನರು, ತೀರ್ಪುಗಾರರು, ಓಟಗಾರರು, ಕಂಬಳ ಸಹಕಾರಿ ವರ್ಗದವರು ಭಾಗವಹಿಸುವಂತೆ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.