ಸ್ವಾತಂತ್ರ್ಯ ಹೋರಾಟಗಾರ ದಿ. ಶ್ರೀ ಕುಳಾಲು ಅಣ್ಣಪ್ಪ ಭಂಡಾರಿ ಮತ್ತು ಅವರ ಸಹಧರ್ಮಿಣಿ ದಿ. ಅಗರಿ ಲೀಲಾವತಿ ಭಂಡಾರಿ ಅವರ ಸ್ಮರಣಾರ್ಥ ಅಸೈಗೋಳಿಯಲ್ಲಿರುವ ಅಭಯಾಶ್ರಮದವರಿಗೆ ಮಧ್ಯಾಹ್ನದ ಊಟವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ತೋಡಾರ್ ಆನಂದ ಶೆಟ್ಟಿ (ನಿವೃತ್ತ ಸ್ಟೇಷನ್ ಮ್ಯಾನೇಜರ್ ಮಂಗಳೂರು, ಆಗಿನ ಇಂಡಿಯನ್ ಏರ್ ಲೆಯಿನ್ಸ್) ಮತ್ತು ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಎ ಶೆಟ್ಟಿ (ಕುಳಾಲು ಅಣ್ಣಪ್ಪ ಭಂಡಾರಿಯವರ ಪುತ್ರಿ) ಅವರ ವೈವಾಹಿಕ ಸ್ವರ್ಣ ಮಹೋತ್ಸವದ ಅಂಗವಾಗಿ ಅಭಯಾಶ್ರಮದ ಅಧ್ಯಕ್ಷ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ ಶ್ರೀ ಶ್ರೀನಾಥ ಹೆಗ್ಡೆಯವರ ಸಮ್ಮುಖದಲ್ಲಿ ಆಶ್ರಮಕ್ಕೆ ಆರ್ಥಿಕ ಸಹಾಯ ಮಾಡಿದರು.