ಕರಾವಳಿಯ ಬಹುಮುಖ ಪ್ರತಿಭೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಹೊಸ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹೊಸ ಸಿನಿಮಾವೆಂದರೆ ಇದು ಪಕ್ಕಾ ರಾಜ್ ಬಿ ಶೆಟ್ಟಿ ಅಭಿಮಾನಿಗಳು ಇಷ್ಟಪಡುವ ಜಾನರ್ ವುಳ್ಳ ಚಿತ್ರ. ‘ಗರುಡ ಗಮನ ವೃಷಭ ವಾಹನʼ ಸಿನಿಮಾ ಹಿಟ್ ಆಗಿತ್ತು. ಸಿನಿಮಾದ ಕೆಂಟೆಂಟ್ ಭಿನ್ನವಾಗಿತ್ತು. ಕರಾವಳಿಯ ಹುಲಿವೇಷ, ವಾತಾವರಣ ಭಾಷಾ ಸೊಗಡು ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೇ ತಂಡವನ್ನಿಟ್ಟುಕೊಂಡು ರಾಜ್ ಬಿ ಶೆಟ್ಟಿ ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡುವುದರ ಬಗ್ಗೆ ಇತ್ತೀಚೆಗಷ್ಟೇ ಹೇಳಿದ್ದರು.
ರಾಜ್ ಬಿ ಶೆಟ್ಟಿ ಅವರ ʼ ಲೈಟರ್ಸ್ ಬುದ್ಧ ಫಿಲ್ಮ್ʼ ʼ ಅಗಸ್ತ್ಯ ಫಿಲ್ಮ್ಸ್ʼ ಅವರೊಂದಿಗೆ ಜಂಟಿಯಾಗಿ ಬರುತ್ತಿರುವ ಸಿನಿಮಾಕ್ಕೆ “ಟೋಬಿ “ ಟೈಟಲ್ ಇಡಲಾಗಿದೆ. ಪೋಸ್ಟರ್ ನಲ್ಲಿ ಮೊದಲು ತಿಳಿಸಿದಂತೆ ಇದೊಂದು ಆ್ಯಕ್ಷನ್ ಜಾನರ್ ವುಳ್ಳ ಸಿನಿಮಾವಾಗಿರಲಿದೆ.
ʼಟೋಬಿ” ಸಿನಿಮಾದ ಟೈಟಲ್ ನ್ನು ಈ ಹಿಂದೆಯೇ ಫಿಕ್ಸ್ ಮಾಡಲಾಗಿತ್ತು. ಇದೀಗ ಸಿನಿಮಾದ ರಿಲೀಸ್ ಡೇಟ್ ನ್ನು ರಿವೀಲ್ ಮಾಡಿದೆ. ವಿಶೇಷವೆಂದರೆ ಈ ಸಿನಿಮಾವನ್ನು ʼ ಲೈಟರ್ಸ್ ಬುದ್ಧ ಫಿಲ್ಮ್ʼ ಹಾಗೂ ರವಿ ರೈ ಕಳಸ ಅವರ ʼ ಅಗಸ್ತ್ಯ ಫಿಲ್ಮ್ಸ್ʼ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ರಾಜ್ ರಾಜ್ ಶೆಟ್ಟಿ ಅವರು ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ರೋಷದಲ್ಲಿರುವ ಕುರಿಯ ಮುಖವನ್ನು ತೋರಿಸಿ ಹಿನ್ನೆಲ್ಲೆಯಲ್ಲಿ “ಮಾರಿ.. ಮಾರಿ.. ಮಾರಿಗೆ ದಾರಿ” ಹಾಡು ಪ್ಲೇ ಆಗಿದೆ. ಫೋಟೋ ಹಿಂದೆ ಮಿಸ್ಸಿಂಗ್ ಎಂದು ಬರೆದಿದ್ದಾರೆ. ಪುಟ್ಟ ಟೀಸರ್ ನಲ್ಲಿ ಸಿನಿಮಾ ಆಗಸ್ಟ್ 25 ರಂದು ರಿಲೀಸ್ ಆಗಲಿದೆ ಎಂದು ಅನೌನ್ಸ್ ಮಾಡಿದ್ದಾರೆ. ಟೀಸರ್ ಮೂಲಕ ಸಿನಿಮಾದ ಮೇಲಿನ ಕುತೂಹವನ್ನು ಹೆಚ್ಚಿಸಿದ್ದಾರೆ. ಅಂದಹಾಗೆ ಈ ಸಿನಿಮಾವನ್ನು ಬಾಸಿಲ್ ಅಲ್ಚಕ್ಕಲ್ ಅವರು ನಿರ್ದೇಶನ ಮಾಡಿದ್ದಾರೆ.
ಸದ್ಯ ರಾಜ್ ಬಿ ಶೆಟ್ಟಿ ಅವರು ನಟಿ ರಮ್ಯಾ ಅವರ ಆ್ಯಪರ್ ಬಾಕ್ಸ್ ನಿರ್ಮಾಣ ಮಾಡುತ್ತಿರುವ ʼಸ್ವಾತಿ ಮುತ್ತಿನ ಮಳೆ ಹನಿಯೇ” , “ರಾಮನ ಅವತಾರ” ಸೇರಿದಂತೆ ಇತರ ಕೆಲ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ.