ಇನ್ನಂಜೆಯ ಎಸ್. ವಿ. ಎಚ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೇಘನಾ ಆರ್. ಶೆಟ್ಟಿಗೆ 600 ಅಂಕದಲ್ಲಿ 549 ಅಂಕಗಳನ್ನು ಪಡೆದು ಶೇ. 91.5 ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಈಕೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಭಿವಂಡಿ ಹೋಟೆಲ್ ಉದ್ಯಮಿ ಕುರ್ಕಾಲು ಕುಲೇದು ರಮೇಶ್ ಶೆಟ್ಟಿ ಮತ್ತು ನಿಟ್ಟೆ ಪರಪ್ಪಾಡಿ ವಿಮಲಾ ಶೆಟ್ಟಿ ದಂಪತಿಯ ಪುತ್ರಿ.