ಸಾಮಾನ್ಯವಾಗಿ ಮಕ್ಕಳು ಉದ್ಯೋಗ ಪಡೆದು ಉನ್ನತ ಮಟ್ಟದಲ್ಲಿ ಇರಬೇಕೆಂಬುದು ಸಾಧರಣ ಎಲ್ಲಾ ತಂದೆ ತಾಯಂದಿರ ಬಯಕೆ. ಅನಿವಾಸಿ ಭಾರತೀಯರಿಗೆ ತಂದೆ ತಾಯಿ ಕುಟುಂಬ ಬಂಧು ಮಿತ್ರರೊಂದಿಗೆ ಕೂಡಲು ಸಮಯ ಸಿಗುವುದೇ ವಿರಳ. ಹಾಗೆಂದು ಮಕ್ಕಳನ್ನು ಕಾಣಲು- ಕೂಡಲು ಸ್ವತಃ ತಂದೆ ತಾಯಂದಿರು ವಿದೇಶಕ್ಕೆ ಹೋಗಿ ಬರುವುದಿದೆ. ಅಂತಹ ಒಂದು ಸಮಯವನ್ನು ಅವಿಸ್ಮರಣೀಯನ್ನಾಗಿಸಿದ ವಿಶಿಷ್ಟ ಕಾರ್ಯಕ್ರಮವೊಂದು ಬರ್ ದುಬೈಯಲ್ಲಿ ನಡೆಯಿತು. ಮಗಳನ್ನು ಕಾಣಲೆಂದು ಊರಿಂದ ಬಂದ ತಂದೆ ಈ ಸಂಸಾರದ ಹಾಗೂ ನಾಡಿನ ಅಂದ ಚಂದ ನೋಡಿ ಮೈಮರೆಯುವುದರೊಳಗೆ ತನ್ನ ತಂದೆಗೆ ಗೊತ್ತಿಲ್ಲದಂತೆ ಬಂಧು ಮಿತ್ರರನ್ನು ಒಂದೆಡೆ ಸೇರಿಸಿಕೊಂಡು ಆಪ್ತ ಸನ್ಮಾನ ಏರ್ಪಡಿಸಿದ ವಿಶೇಷ ಕಾರ್ಯಕ್ರಮವೊಂದು ಇತ್ತೀಚೆಗೆ ಜರಗಿ ವೈಶಿಷ್ಟತೆ ಮೆರೆಯಿತು. ನಗರದ ಬರ್ ದುಬೈನಲ್ಲಿ ನೆಲೆಸಿರುವ ಶ್ರೀಮತಿ ಅಶ್ವಿನಿ ಪುರಂದರ ಶೆಟ್ಟಿಯವರು ತನ್ನ ಏಳಿಗೆಗೆ ಕಾರಣೀಭೂತರಾದ ತಂದೆಗೆ ಅಚಾನಕ್ ಒಂದು ಗೌರವಾರ್ಪಣೆ ಏರ್ಪಡಿಸಿದ ಕಾರ್ಯಕ್ರಮಕ್ಕೆ ಹಲವಾರು ಬಂಧು ಬಾಂಧವರು ಸಾಕ್ಷಿಯಾದರು.
ಕಳೆದ 34 ವರ್ಷಗಳಿಂದ ಬೆಳಗಾಂ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಅಶ್ವಿನಿ ಟೀ ಬಾರ್ ಎಂಬ ಹೋಟೆಲ್ ಉದ್ಯಮವನ್ನು ನಡೆಸಿಕೊಂಡು ಬರುತ್ತಿರುವ ರಮೇಶ್ ರಾಜು ಶೆಟ್ಟಿ ಮತ್ತು ಶ್ರೀಮತಿ ಶಕುಂತಲಾ ರಮೇಶ್ ಶೆಟ್ಟಿಯವರು ಇತ್ತೀಚೆಗೆ ನಗರದ ಬರ್ ದುಬೈನಲ್ಲಿ ಇರುವ ಮಗಳು ಶ್ರೀಮತಿ ಅಶ್ವಿನಿ ಪುರಂದರ ಶೆಟ್ಟಿ ಮತ್ತು ಅಳಿಯ ಪುರಂದರ ಶೆಟ್ಟಿಯವರ ಮನೆಯಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಮರಳುಗಾಡಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದ ಬಳಿಕ ಸ್ವತಃ ಮಗಳು ಅಶ್ವಿನಿ ಪುರಂದರ ಶೆಟ್ಟಿಯವರು ಅತ್ಯಂತ ಆಪ್ತತೆ ಹಾಗೂ ಗೌರವದಿಂದ ದುಬೈಯಲ್ಲಿ ನೆಲೆಸಿರುವ ಹಲವಾರು ಸಹೃದಯರನ್ನು ಮನೆಗೆ ಕರೆದು ಉಪಚರಿಸಿ ತಂದೆಗೆ ಗೌರವ ಸನ್ಮಾನಕ್ಕೆ ಸಾಕ್ಷಿಯಾಗಿಸಿರುವುದು ನೆರೆದವರನ್ನು ಮೂಕ ವಿಸ್ಮಿತಗೊಳಿಸಿತು. ಈ ಸಂದರ್ಭದಲ್ಲಿ ಯುಎಇ ಬಂಟ್ಸ್ ಸಂಘದ ಅಧ್ಯಕ್ಷ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ತಕ ಸಂಘಟಕ ಸರ್ವೋತ್ತಮ ಶೆಟ್ಟಿ, ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಅಧ್ಯಕ್ಷ ದಿನೇಶ್ ಶೆಟ್ಟಿ ಕೊಟ್ಟಿಂಜ, ಯಕ್ಷಗಾನ ಗುರು ಶೇಖರ ಶೆಟ್ಟಿಗಾರ್, ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಸದಸ್ಯರು, ರವೀಂದ್ರ ಶೆಟ್ಟಿ (Toyota Al- Futtaim motors Corporate Sales Manager), ಅಕ್ಷತ ರವೀಂದ್ರ ಶೆಟ್ಟಿ, ಸಾಯಿನಾಥ್ ಶೆಟ್ಟಿ, ಪ್ರತಿಮಾ ಸಾಯಿನಾಥ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಕಾರ್ಪೋರೇಟ್ ಸೆಲ್ಸ್ ಮೇನೆಜರ್ ರವೀಂದ್ರ ಶೆಟ್ಟಿ ಪರಿಚಯಿಸಿದರು. ಅನ್ವಿ ರವಿ ಶೆಟ್ಟಿ ಅವರು ಪ್ರಪ್ರಥಮವಾಗಿ ನೃತ್ಯ ಗೈಯುವ ಮೂಲಕ ಚಾಲನೆ ನೀಡಲಾಯಿತು. ನವೊಮಿ ಸಾಯಿನಾಥ್ ಶೆಟ್ಟಿ ಮತ್ತು ಆಶ್ವಿನಿ ಶೆಟ್ಟಿ ಅವರಿಂದ ಜಾನಪದ ನೃತ್ಯ ಪ್ರದರ್ಶನಗೊಂಡಿತು.
ಹೋಟೆಲ್ ಉದ್ಯಮಿ ರಮೇಶ್ ರಾಜು ಶೆಟ್ಟಿ ಮತ್ತು ಶ್ರೀಮತಿ ಶಕುಂತಲಾ ರಮೇಶ್ ಶೆಟ್ಟಿಯವರು ಹಿರಿಯ ಪುತ್ರ ಡಾ.ಅಕ್ಷಯ್ ಶೆಟ್ಟಿ, ಸೊಸೆ ಸ್ವಾತಿ ಅಕ್ಷಯ್ ಶೆಟ್ಟಿ, ಪುತ್ರಿ ಆಶ್ವಿನಿ ಪುರಂದರ ಶೆಟ್ಟಿ, ಅಳಿಯ ಪುರಂದರ ಶೆಟ್ಟಿ, ಮೊಮ್ಮಗ ಜಯ್ ಪುರಂದರ ಶೆಟ್ಟಿ, ಕಿರಿಯ ಪುತ್ರ ಅಮೃತ್ ಶೆಟ್ಟಿ ಅವರೊಂದಿಗೆ ಸಂತೃಪ್ತ ಸಂಸಾರ ಹೊಂದಿದ್ದಾರೆ. ಗೌರವಾನ್ವಿರನ್ನು ಗಣ್ಯರು ಅಭಿನಂದಿಸಿದರು.
ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)