ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇಳದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ದಿನಾಂಕ 27-02-2023 ರಂದು ಸಂಜೆ 6 ಗಂಟೆಯಿಂದ ಹಿರಿಯಡ್ಕ ಕೋಟ್ನಕಟ್ಟೆ ಗಾಂಧಿ ಮೈದಾನದಲ್ಲಿ ಶ್ರೀಮತಿ ಪುಷ್ಪಲತಾ ಶೆಟ್ಟಿ ಹಾಗೂ ಗುಂಡಿಬೈಲು ಬಾಲಕೃಷ್ಣ ಶೆಟ್ಟಿಯವರ ಸೇವಾ ಬಯಲಾಟವು ನಡೆಯಲಿದೆ. ಅದೇ ದಿನ ಬೆಳಗ್ಗೆ ಅವರ ಸ್ವಗೃಹ ಸಾಯಿದೀಪದಲ್ಲಿ 10 ಗಂಟೆಗೆ ಗಣಹೋಮ, ಮದ್ಯಾಹ್ನ 12 ಗಂಟೆಯಿಂದ ಓಂಕಾರ ಮ್ಯೂಸಿಕಲ್ ಸ್ಟಾರ್ಸ್ ಕುಂದಾಪುರ ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ ಅನ್ನಸಂತರ್ಪಣೆಯೂ ನಡೆಯಲಿದೆ. ಸಮಾಜ ಬಾಂಧವರು ಈ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಬಾಲಕೃಷ್ಣ ಶೆಟ್ಟಿ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ.
ಸೌಮ್ಯ ಸ್ವಭಾವದ ಶ್ರೀ ಗುಂಡಿಬೈಲು ಬಾಲಕೃಷ್ಣ ಶೆಟ್ಟಿಯವರು ಓರ್ವ ಯಶಸ್ವೀ ಉದ್ಯಮಿಯಾಗಿ, ಹಲವಾರು ವರ್ಷಗಳಿಂದ ಸಮಾಜಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಕೊರೋನ ಸಂಧರ್ಭದಲ್ಲಿ ಹಲವಾರು ಬಂಟ ಕುಟುಂಬಗಳಿಗೆ ಆಸರೆಯಾಗಿ ನಿಂತ ಶ್ರೀಯುತರು ಧಾರ್ಮಿಕ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವು ನೀಡುತ್ತಾ ಬರುತ್ತಿದ್ದಾರೆ. ಇವರಿಗೆ ದೇವರು ಆರೋಗ್ಯ ಭಾಗ್ಯ ಕೊಟ್ಟು ಇನ್ನಷ್ಟು ಸಮಾಜಸೇವೆ ಮಾಡುವ ಯೋಗ ಭಾಗ್ಯ ಕರುಣಿಸಲಿ ಎಂದು ನಾವೆಲ್ಲರೂ ಹಾರೈಸೋಣ.