ಐತಿಹಾಸಿಕ ಮೊಳಹಳ್ಳಿ ಕಂಬಳ ಮಹೋತ್ಸವಕ್ಕೆ ಪಟೇಲರ ಮನೆ ಕಂಬಳಗದ್ದೆ ಸಜ್ಜು…! 40ಕ್ಕೂ ಹೆಚ್ಚು ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ; ಹಗ್ಗ ಮತ್ತು ಹಲಿಗೆಯ ಭಾಗದಲ್ಲಿ ವಿವಿಧ ಸ್ಪರ್ಧೆ…..!”200 ವರ್ಷಗಳ ಇತಿಹಾಸದ ಕಂಬಳಕ್ಕೆ ಕ್ಷಣಗಣನೆ….!
-ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ
ವಿಶ್ಲೇಷಕರು)santhoshmolahalli@gmail.com
ಸುದ್ದಿ @ ಮೊಳಹಳ್ಳಿ:
ಐತಿಹಾಸಿಕ ಪುರಾಣ ಪ್ರಸಿದ್ಧ ಮೊಳಹಳ್ಳಿ ಕಂಬಳ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಸುಮಾರು 200 ವರ್ಷಗಳಕ್ಕಿಂತಲೂ ಹೆಚ್ಚು ಇತಿಹಾಸವನ್ನ ಹೊಂದಿರುವ ಕಂಬಳ ಮಹೋತ್ಸವ ಈ ಬಾರಿ ವಿಜ್ರಮಣೆಯಿಂದ ನಡೆಯಲು ಸಜ್ಜಾಗಿದೆ. ಕುಂದಾಪುರ ತಾಲೂಕಿನ ಬಹುದೊಡ್ಡ ಗ್ರಾಮಗಳಲ್ಲಿ ಮೊಳಹಳ್ಳಿ ಎಂಬ ಊರು ಹೆಸರುವಾಸಿ. ಅಲ್ಲದೆ, ವಿಶಿಷ್ಟವಾದ ಅಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತನೆಯುಳ್ಳ ಗ್ರಾಮವಾಗಿ ಬೆಳೆದಿದೆ. ಮೊಳಹಳ್ಳಿ ಗ್ರಾಮ ‘ಸುವರ್ಣ ಗ್ರಾಮ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದಲ್ಲದೆ ,ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ವಿಶಿಷ್ಟತೆಯನ್ನ ಸಾರುವ ಮೊಳಹಳ್ಳಿ ಗ್ರಾಮ ಇಂದಿಗೂ ಭತ್ತ ,ತೆಂಗು, ಅಡಿಕೆ, ತರಕಾರಿ ಸಸ್ಯ,ಗಳನ್ನ ಬೆಳೆದು ಕೃಷಿಕರಾಗಿಯೇ ಮುಂದುವರಿಯುತ್ತಿರುವುದು ಇನ್ನೊಂದು ಹೆಗ್ಗಳಿಕೆಗೆ ಪಾತ್ರ ವಾಗಿದೆ. ಬ್ರಹ್ಮ ಬಂಟ ಶಿವರಾಯ ನೆಲೆ ಕಂಡ ತವರೂರು ಮೊಳಹಳ್ಳಿ.
ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಳಹಳ್ಳಿ ಕಂಬಳ 12/12/2022 ರಂದು ಸೋಮವಾರ ಮಧ್ಯಾಹ್ನ ಐತಿಹಾಸಿಕ ಕಂಬಳ ಮಹೋತ್ಸವ ಅನಾವರಣಗೊಳ್ಳಲಿದೆ .ಸಹಕಾರಿ ಸಂಘದ ಪಿತಾಮಹ ಮೊಳಹಳ್ಳಿ ಶಿವರಾಯ ರಂತವರ ಗಣ್ಯ ವ್ಯಕ್ತಿಗಳ ನಾಮತೆತ್ತ ಗ್ರಾಮ, ಮೂಲಭೂತ ಸೌಕರ್ಯಗಳು ವಿಶಿಷ್ಟ ಪ್ರಮಾಣದಲ್ಲಿ ಗ್ರಾಮದ ಉನ್ನತಿಕರಣ ಸಾಗುತ್ತಿದ್ದು, ಅದಲ್ಲದೆ ಸಾಂಪ್ರದಾಯಕ ವಾದಂತಹ ಕಾರ್ಯಕ್ರಮಗಳು ಇಂದಿಗೂ ಊರಿನ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನಡೆಯುತ್ತಿದೆ .ಕಂಬಳ ಮಹೋತ್ಸವ, ಜಾತ್ರಾ ಮಹೋತ್ಸವ ಯಕ್ಷಗಾನ ,ಭಜನೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವುದು ಸಹಜ. ಅದೇ ರೀತಿ ಮೊಳಹಳ್ಳಿ ಕಂಬಳ ಮಹೋತ್ಸವ ಈ ಬಾರಿ ವಿಜ್ರಣೆಯಿಂದ ನಡೆಯುವುದಲ್ಲದೆ, ವಿಶಿಷ್ಟ ಪ್ರಕಾರತೆಯನ್ನ ಹೊಂದಿರುವ ಕಂಬಳ ಜರುಗುವ ಕ್ಷಣಗಣನೆ ಪ್ರಾರಂಭವಾಗಿದೆ. ಮೊಳಹಳ್ಳಿ ಕಂಬಳಗೆದ್ದೆ ವಿಸ್ತೀರ್ಣ ಸುಮಾರು 5 ಎಕರೆ ಹೊಂದಿದೆ. ಕಂಬಳದ ಸಮಿತಿಯನ್ನು ರಚಿಸಿ. ಕಂಬಳ ಮಹೋತ್ಸವಕ್ಕೆ ಸಿದ್ಧತೆಯನ್ನ ಮಾಡಿಕೊಂಡಿರುತ್ತಾರೆ.
ಮೊಳಹಳ್ಳಿ ಕಂಬಳದ ಐತಿಹಾಸಿಕ ಹಿನ್ನೆಲೆ:-
ಮೊಳಹಳ್ಳಿ ಕಂಬಳ ಮಹೋತ್ಸವ ಪಾರಂಪರಿಕವಾಗಿ ನಡೆಯುತ್ತಿದ್ದು ,ಮೊಳಹಳ್ಳಿ ಒಂಬತ್ತು ಮನೆಯವರ ಕೃಪಾಕಟಾಕ್ಷದೊಂದಿಗೆ ನಡೆಯುತ್ತಿತ್ತು. ವರ್ಷ ಪ್ರತಿ ವಿಶೇಷ ರೀತಿಯಲ್ಲಿ ಡಿಸೆಂಬರ್ ಮಾಸದಲ್ಲಿ ಕಂಬಳ ನಡೆಯುತ್ತಿತ್ತು. ಕಂಬಳ ಮಹೋತ್ಸವಕ್ಕೆ ಕುಟುಂಬದ ಪರಿವಾರದ ನಿಗದಿಯಂತೆ ಜಾಗವನ್ನು ಕೂಡ ಮೀಸಲಿಡಲಾಗಿತ್ತು. ತದನಂತರದಲ್ಲಿ ಗ್ರಾಮ ಮಟ್ಟದಲ್ಲಿ ಕೋಣಗಳ ಕೊರತೆಯಿಂದಾಗಿ, ಸರ್ಕಾರದ ಕಾನೂನು ಅನ್ವಯ, ಕಂಬಳ ಮಹೋತ್ಸವ ನಿಂತು, ವರ್ಷ ಪ್ರತಿ ಕಂಬಳ ನಡೆಯುವ ದಿನ ಕಂಬಳಗದ್ದೆಗೆ ಪೂಜೆವನ್ನು ಮಾಡಿ ಕೈ ಬಿಡಲಾಗುತ್ತಿತ್ತು. ಮೊಳಹಳ್ಳಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಕುಟುಂಬದ ಸದಸ್ಯರಿಗೆ ಕಂಬಳ ನಿಲ್ಲಿಸಿದ್ದರ ಬಗ್ಗೆ ವಾಗ್ದಾನ ಎದ್ದಿತ್ತು, ನಿರಂತರವಾಗಿ ಕಂಬಳ ಮತ್ತು ನವರಾತ್ರಿ ಮಹೋತ್ಸವವನ್ನು ಆಚರಿಸಲೇಬೇಕೆಂದು ದೇವರ ನುಡಿ ಪ್ರಸಾದ ಬಂದಿತ್ತು. ಈ ಬಾರಿ ಕಂಬಳ ಮಹೋತ್ಸವಕ್ಕೆ 40 ಜೊತೆ ಕಂಬಳ ಬರುವ ಕೋಣಗಳು ಬರುವ ನಿರೀಕ್ಷೆ ಇದೆ. ಹಗ್ಗ ಮತ್ತು ಹಲಗೆ ವಿಭಾಗದಲ್ಲಿ ಸ್ಪರ್ಧೆಗಳು ಏರ್ಪಡಿಸಲಾಗುತ್ತಿದೆ. ಇದರಲ್ಲಿ ಪ್ರಥಮ ಮತ್ತು ದ್ವಿತೀಯ ವಿಭಾಗದಲ್ಲಿ ಆಯ್ಕೆ ಮಾಡಲಾಗುತ್ತದೆ. ಕಿರಿಯ ವಿಭಾಗ ಮತ್ತು ಅತಿ ಕಿರಿಯ ವಿಭಾಗದಲ್ಲಿಯೂ ಕೂಡ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡಲಾಗುತ್ತದೆ. ಒಟ್ಟು ಆರು ಬಹುಮಾನಗಳನ್ನ ಇಟ್ಟಿರುತ್ತಾರೆ ಇದರ ವೆಚ್ಚ 55 ಸಾವಿರಗಳಷ್ಟು ತಗಲುತ್ತದೆ.
ಸ್ಪರ್ಧೆಯ ವಿವರ:
ಹಲಿಗೆಯ ವಿಭಾಗ ಪ್ರಥಮ ಬಹುಮಾನ:10,000.00, ದ್ವಿತೀಯ ಬಹುಮಾನ :7000.00, ಹಗ್ಗ ಹಿರಿಯ ವಿಭಾಗ: ಪ್ರಥಮ ಬಹುಮಾನ :10,000.00,ದ್ವಿತೀಯ ಬಹುಮಾನ:7,000.00 ,ಹಗ್ಗ ಕಿರಿಯ ವಿಭಾಗ ಪ್ರಥಮ ಬಹುಮಾನ :7,000.00 ದ್ವಿತೀಯ ಬಹುಮಾನ :5,000.00,ಅತಿ ಕಿರಿಯ ವಿಭಾಗ : ಪ್ರಥಮ ಬಹುಮಾನ:7,000.00 ದ್ವಿತೀಯ ಬಹುಮಾನ :5,000 ಈ ರೀತಿಯಾಗಿ ಸ್ಪರ್ಧೆಯ ಬಹುಮಾನಗಳನ್ನ ವಿಂಗಡಿಸಲಾಗಿದೆ.
ಮೊಳಹಳ್ಳಿ ಗ್ರಾಮದ ಪಟೇಲರ ಮನೆಯ ಬ್ರಿಟಿಷರ ಕಾಲದಿಂದಲೂ ರಾಮಣ್ಣ ಶೆಟ್ಟಿ ಎನ್ನುವ ವ್ಯಕ್ತಿ ಪಟೇಲರಾಗಿ ಆಳ್ವಿಕೆ ನಡೆಸುತ್ತಿದ್ದರು. ಅವರ ಕಾಲದ ನಂತರ ಅವರ ಅಳಿಯ ಸದಾಶಿವ ಸೇರಿಗಾರ್ ಎನ್ನುವರು ಆಳ್ವಿಕೆ ನಡೆಸುತ್ತಿದ್ದರು. ಸ್ಪರ್ಧೆಗಾಗಿ ಬಂದ ಕೋಣಗಳಿಗೆ ಹರಿವಾಣ, ಎಳನೀರು, ಒಂದು ಕೆಜಿ ಹುರುಳಿ ಯನ್ನು ಗೌರವ ಸೂಚಕವಾಗಿ ನೀಡಲಾಗುತ್ತದೆ. ಕಂಬಳದ ದಿನ ರಾಹುತರ ಮನೆಯಲ್ಲಿ, ಸ್ವಾಮಿ ಮನೆಯಲ್ಲಿ, ನಾಗದೇವತೆ, ನಂದಿಕೇಶ್ವರ ಸನ್ನಿಧಾನದಲ್ಲಿ ವರ್ಷ ಪ್ರತಿಯೆಂತೆ ನಡೆಯುವ ಪೂಜೆ ನಡೆಯಲೇಬೇಕು. ಹಾಗೂ ಅದೇ ದಿನ ರಾತ್ರಿ ಕಂಬಳ ಮಹೋತ್ಸವ ಸಂಪನ್ನಗೊಂಡ ಮೇಲೆ ಉಮಾಮಹೇಶ್ವರ ದೇವಸ್ಥಾನದಲ್ಲಿ ರಂಗ ಪೂಜೆ ನೆರವೇರಬೇಕು. ಈ ರೀತಿಯಾಗಿ ವರ್ಷ ಪ್ರತಿ ಅಂತ ನಡೆಯುವಂತಹ ಕಂಬಳ ವಿಶೇಷವಾಗಿ ಮತ್ತು ವಿಜ್ರಮಣೆಯಿಂದ ಜರುಗುತ್ತದೆ ಎನ್ನುವುದೇ ವಿಶೇಷ…! ಐತಿಹಾಸಿಕ ಕಂಬಳ ಮಹೋತ್ಸವಕ್ಕೆ ಸಮಸ್ತ ಗ್ರಾಮಸ್ಥರು, ಹಾಗೆ ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಂಬಳ ಮಹೋತ್ಸವ ಚಂದಗಾಣಿಸಿ ಕೊಡಬೇಕಾಗಿ, ಪತ್ರಿಕಾ ಪ್ರಕಟಣೆಯಲ್ಲಿ ಪಟೇಲರ ಮನೆ ನಾರಾಯಣ ಶೆಟ್ಟಿಯವರು ತಿಳಿಸಿದ್ದಾರೆ.
Previous Articleಜನ ಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವಲ್ಲಿ ವಕೀಲರ ಪಾತ್ರ
Next Article ಡಿಸೆಂಬರ್ 16 ರಂದು ಲಾಸ್ಟ್ ಬೆಂಚ್ ಕರಾವಳಿಯಾದ್ಯಂತ ತೆರೆಗೆ