ಕಣಂಜಾರು ಪಟೇಲರು ಶೇಖರ್ ಹೆಗ್ಡೆಯವರ ಜನ್ಮ ಶತಾಬ್ದ ವರ್ಷ 2026ರ ಪ್ರಯುಕ್ತ ಮಡಿಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಯೋಜಿಸಲಾಯಿತು. ಶಾಲೆ ಪ್ರಾರಂಭವಾಗಿನಿಂದಲೂ ಪ್ರಸ್ತುತವಾಗಿ ಸೇವೆ ಸಲ್ಲಿಸಿದ, ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಶಿಕ್ಷಕಿಯರು, ಗೌರವ ಶಿಕ್ಷಕ ಶಿಕ್ಷಕಿಯರು, ಅಂಗನವಾಡಿ ಶಿಕ್ಷಕಿಯರು ಹಾಗೂ ಕಾರ್ಯಕರ್ತರು, ಬೋಧಕೇತರ ಸಿಬ್ಬಂದಿಯನ್ನು ಈ ಸುಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಬ್ರಹ್ಮಲಿಂಗೇಶ್ವರ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶಿವಪ್ರಸಾದ್ ಹೆಗ್ಡೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಯಪ್ರಸಾದ್ ಹೆಗ್ಡೆ, ನ್ಯಾಯವಾದಿ ಬಿ.ಎನ್ ಪೂಜಾರಿ ಹಾಗೂ ಚಂದ್ರಮತಿ ಬಿ.ಎನ್ ಪೂಜಾರಿ, ಟ್ರಸ್ಟ್ ನ ಉಪಾಧ್ಯಕ್ಷ ಮಂಜುನಾಥ ನಾಯಕ್, ಕಾರ್ಕಳ ವಲಯ ಶಿಕ್ಷಣ ಸಂಯೋಜಕ ಉಮೇಶ್ ನಾಯಕ್ ಪೆರ್ಣಂಕಿಲ, ಮುಖ್ಯ ಭಾಷಣಕಾರರಾಗಿ ಹರೀಶ್ಚಂದ್ರ ಶೆಟ್ಟಿ, ಶಾಲಾ ಸಂಚಾಲಕ ಸಿಎ ಚಂದನ್ ಕುಮಾರ್ ಹೆಗ್ಡೆ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಅಶ್ವತ್ಥ್ ಭಾರದ್ವಾಜ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟ್ರಸ್ಟಿ ವಿಕ್ರಂ ಹೆಗ್ಡೆ ಪ್ರಾಸ್ತಾವಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಕೆ ಹರಿದಾಸ ಹೆಗ್ಡೆ, ಸುಧೀರ್ ಹೆಗ್ಡೆ, ಶಿವಪ್ರಸಾದ ಹೆಗ್ಡೆ, ಸತೀಶ್ ಪೂಜಾರಿ ಪೆಲತ್ತೂರು, ಶಿವಪ್ರಸಾದ್ ರಾವ್, ಮಹೇಶ್ ಹೆಗ್ಡೆ, ಟ್ರಸ್ಟ್ ನ ಕೋಶಾಧಿಕಾರಿ ಪ್ರಕಾಶ್ ಪ್ರಭು, ನಿವೃತ್ತ ಮುಖ್ಯೋಪಾಧ್ಯಾಯರಾದ ಹರಿದಾಸ ನಾಯಕ್ ಮತ್ತು ದಿನೇಶ್ ಯು ಎಸ್ ಭಾಗವಹಿಸಿದ್ದರು. ಶಾಲಾ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿಗಳು, ಪೋಷಕರು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ರಮೇಶ್ ಶೆಟ್ಟಿ ಕಲ್ಲೊಟ್ಟೆ ನೆರವೇರಿಸಿದರು.















































































































