ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾ ನಗರದಲ್ಲಿ
ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಉಡುಪಿಯ ಪ್ರಖ್ಯಾತ ವಕೀಲರಾದ ಶ್ರೀ
ಬೈಕಾಡಿ ಸುಪ್ರಸಾದ್ ಶೆಟ್ಟಿ ಧ್ವಜಾರೋಹಣಗೈದರು.ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು
ಯುವಜನತೆ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿತು,ಸ್ವಾತಂತ್ರ್ಯ ಹೋರಾಟಕ್ಕಾಗಿ ಮಡಿದ ವೀರರ ತ್ಯಾಗ
ಬಲಿದಾನವನ್ನು ಸ್ಮರಿಸಿ ಜೀವನದಲ್ಲಿ ಅಳವಡಿಸುವಂತಾಗಬೇಕು. ದೇಶಪ್ರೇಮವನ್ನು ಮೈಗೂಡಿಸಿ,ಕೌಟುಂಬಿಕ
ಮೌಲ್ಯಗಳಿಗೂ ಗೌರವಿಸುವ ಮನೋಭಾವವನ್ನು ಬೆಳೆಸಬೇಕು ಎಂದರು.
ಈ ಸಂದರ್ಭದಲ್ಲಿಎನ್.ಸಿ.ಸಿ ಕೆಡೆಟ್ ಗಳು ಗೌರವ ವಂದನೆಯನ್ನು ಸಲ್ಲಿಸಿದರು. ಮಣಿಪಾಲ ಜ್ಞಾನಸುಧಾದ
ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಉಪ ಪ್ರಾಂಶುಪಾಲರುಗಳಾದ ರವಿ ಜಿ, ಹೇಮಂತ ಮತ್ತು ನವೀನ್ ಎ
ಉಪಸ್ಥಿತರಿದ್ದರು.ಕನ್ನಡ ಉಪನ್ಯಾಸಕಿ ಕು.ಮಂಜುಳ ಕಾರ್ಯಕ್ರಮ ನಿರ್ವಹಿಸಿದರು.

















































































































