ಬಂಟರ ಸಂಘ ಬಂಟ್ವಾಳ ಬಿ.ಸಿ ರೋಡು ವಲಯದ ಆಟಿದ ಕೂಟ ಕಾರ್ಯಕ್ರಮವು ಆಗಸ್ಟ್ 9 ರಂದು ಭಾನುವಾರ ನಡೆಯಿತು. ಹಿರಿಯ ಪ್ರಗತಿಪರ ಕೃಷಿಕ ಮಂಜಯ್ಯ ಶೆಟ್ಟಿ ನುಂಗೂರು ಗುತ್ತು ಅವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಮುಖ್ಯ ಭಾಷಣಗಾರರಾದ ಶ್ರೀಮತಿ ವಿಂದ್ಯಾ ಸುಂದರ ರೈ ಮಾತನಾಡಿ, ಜಡಿ ಮಳೆಯ ಸಮಯದಲ್ಲಿ ಬರುವ ರೋಗರುಜಿನಗಳಿಗೆ ನಮ್ಮ ಹಿರಿಯರು ಮನೆ ಮದ್ದು ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಈಗ ಕಾಲ ಬದಲಾವಣೆ ಆಗಿದೆ ಅಂದರು. ನಮ್ಮ ಮಕ್ಕಳನ್ನು ಕೇವಲ ದುಡ್ಡು ಮಾಡುವ ಯಂತ್ರಗಳನ್ನಾಗಿ ಮಾಡದೆ ಅವರು ಜವಾಬ್ದಾರಿಯುತ ನಾಗರಿಕರಾಗಿ ಸಮಾಜಮುಖಿ ಕೆಲಸ ಮಾಡುವ ಹಾಗೆ ತಯಾರು ಮಾಡುವ ಜವಾಬ್ದಾರಿ ತಂದೆ ತಾಯಿಗಳದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಜಯ್ಯ ಶೆಟ್ಟಿಯವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕ್ರೀಡೆಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಲಯದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವರಾದ ರಮಾನಾಥ ರೈ ಬೆಳ್ಳಿಪಾಡಿ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ, ಉಪಾಧ್ಯಕ್ಷರಾದ ಐತಪ್ಪ ಆಳ್ವ ಸುಜೀರುಗುತ್ತು, ಕಾರ್ಯದರ್ಶಿ ಸದಾನಂದ ಆಳ್ವ ಕಂಪ, ಮಹಿಳಾ ಅಧ್ಯಕ್ಷೆ ಸುಜಾತಾ ಪಿ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಗುತ್ತು ಶುಭ ಕೋರಿದರು.






ಬಂಟ್ವಾಳ ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ನಗ್ರಿ ಸಜಿಪ, ಜತೆ ಕೋಶಾಧಿಕಾರಿ ಶ್ರೀಮತಿ ಶ್ರೀವಿದ್ಯಾ ಎ ರೈ, ಯುವ ವಿಭಾಗದ ಅಧ್ಯಕ್ಷರಾದ ಗೋಕುಲ್ ಭಂಡಾರಿ ಬೀಜಂದಾರುಗುತ್ತು, ತಾಲೂಕಿನ ವಿವಿಧ ವಲಯಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು ಆಗಮಿಸಿದ್ದರು. ವಲಯದ ಸದಸ್ಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸದಸ್ಯರಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು. ಬಿ.ಸಿ ರೋಡು ವಲಯ ಬಂಟರ ಸಂಘದ ಅಧ್ಯಕ್ಷರಾದ ಶಂಕರ ಶೆಟ್ಟಿ ನಡ್ಯೋಡಿಗುತ್ತು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಗನ್ನಾಥ ರೈ ಮೇರಾವು ಸ್ವಾಗತ ಕೋರಿದರು. ಯುವ ವಿಭಾಗದ ಅಧ್ಯಕ್ಷ ನಿಶಿಲ್ ಆಳ್ವ ವಂದನಾರ್ಪಣೆ ಮಾಡಿದರು. ವಲಯದ ಸದಸ್ಯರು ತಯಾರಿ ಮಾಡಿ ತಂದ ವಿವಿಧ ಕಜ್ಜಾಯ, ಆಟಿ ತಿಂಗಳ ವಿಶೇಷ ತಿನಿಸುಗಳ ಜತೆಗೆ ಸಹ ಭೋಜನ ನಡೆಯಿತು.






















































































































