ದಕ್ಷ ನಾಯಕತ್ವ ಹಾಗೂ ನಿಸ್ವಾರ್ಥ ಸಮಾಜ ಸೇವೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿರುವ ಮುಂಬಯಿ ಮೀರಾರೋಡಿನ ಶಾಲಿನಿ ಎಸ್ ಶೆಟ್ಟಿ ಸಚ್ಚೇರಿಗುತ್ತು ಅವರಿಗೆ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಸ್ಮರಣಾರ್ಥ ಬೆಂಗಳೂರಿನ ಹೆಸರಾಂತ ‘ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ’ ವತಿಯಿಂದ ಆಗಸ್ಟ್ 9 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರದಾನಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜೆ.ಕೆ ರಷ್ಟಿ ಐಪಿಎಸ್, ಪೋಲೀಸ್ ಉಪಮಹಾ ನಿರೀಕ್ಷಕರು (ರೈಲ್ವೇಸ್) ಬೆಂಗಳೂರು ಇವರು ನೆರವೇರಿಸಿದರು.




ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ| ಶಾಂತರಾಜು (ಅಧ್ಯಕ್ಷರು, ಡಾ| ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕರ ಒಕ್ಕೂಟ), ಎಲ್. ಶ್ರೀನಿವಾಸ (ಅಧ್ಯಕ್ಷರು, ರಾಜ್ಯ ವಕ್ಕಲಿಗರ ಸಂಘ), ಡಾ| ಶರವಣ, (ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ಕರ್ನಾಟಕ ಸರ್ಕಾರ), ಗರಕಪಾಟಿ ಜಯಲಕ್ಷ್ಮಿ, ವೆಂಕಟ್ (ಖ್ಯಾತ ಗಾಯಕರು ಮತ್ತು ಸಮಾಜ ಸೇವಕರು) ಎಂ ತಿಮ್ಮಯ್ಯ (ಅಧ್ಯಕ್ಷರು, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡಪರ ಸಂಘಟನೆಗಳ ಒಕ್ಕೂಟ), ಬಿ ಶೃಂಗೇಶ್ವರ (ಸಾಹಿತಿ, ಸಂಘಟಕರು), ಎಸ್.ಆರ್ ವಿಜಯ ಸಮರ್ಥ (ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು) ಮೊದಲಾದವರು ಉಪಸ್ಥಿತರಿದ್ದರು.






















































































































