ಬ್ರಹ್ಮಾವರ ಜಿ.ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಸಂಸ್ಥೆಯ ಅಧ್ಯಕ್ಷರ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಜಿ ಎಮ್ ಸಮೂಹ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಕೇಕ್ ಕತ್ತರಿಸಿ ತಮ್ಮ ಪೋಷಕರನ್ನು ಸ್ಮರಿಸಿ ಮಾತನಾಡಿ ನನ್ನಂತಹ ಸಾಮಾನ್ಯ ವ್ಯಕ್ತಿಗೆ ನೀವೆಲ್ಲರೂ ಅಪಾರ ಪ್ರೀತಿ, ಗೌರವವನ್ನು ನೀಡಿದ್ದೀರಿ. ನನ್ನ ಸೋಲು ಗೆಲುವಿನಲ್ಲಿ ಜೊತೆಗಿದ್ದು ಪ್ರೋತ್ಸಾಹಿಸಿದ್ದೀರಿ ಇದಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ. ಮಕ್ಕಳೆಲ್ಲರೂ ಮುಂದೆ ದೇಶದ ಉತ್ತಮ ಪೌರರಾಗಿ ಜವಾಬ್ದಾರಿಯುತವಾಗಿ ಬಾಳಿ
ಸಾರ್ಥಕತೆಯ ಬದುಕನ್ನು ನಡೆಸಬೇಕೆಂಬುದು ನನ್ನ ಕನಸಾಗಿದೆ ಎಂದರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನಮ್ಮ ಅಧ್ಯಕ್ಷರ ನಾಯಕತ್ವದ ಗುಣ ಸರಳತೆ ನಮಗೆಲ್ಲರಿಗೂ ಸ್ಫೂರ್ತಿ ಮತ್ತು ಆದರ್ಶವೆಂದರು. ಶಾಲಾ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ತಾವೇ ರಚಿಸಿದ ಶುಭಾಶಯ ಪತ್ರ, ಪುಷ್ಪಗಳನ್ನು ನೀಡಿ ಅಧ್ಯಕ್ಷರಿಗೆ ಶುಭಹಾರೈಸಿದರು. ಶಾಲಾ ಅಧ್ಯಕ್ಷರು ಹುಟ್ಟುಹಬ್ಬದ ಸವಿನೆನಪಿಗಾಗಿ ಸಂಸ್ಥೆಯ ಸಿಬ್ಬಂದಿವರ್ಗದವರಿಗೆ ಗಿಡವನ್ನು ವಿತರಿಸಿದರು. ನಂತರ ಮಕ್ಕಳು ಶಾಲಾ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಮನೋರಂಜನ ಕಾರ್ಯಕ್ರಮ ಮತ್ತು ವಿಶೇಷ ಭೋಜನವನ್ನು ಸವಿದು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಜಿ ಎಮ್ ಗ್ಲೋಬಲ್ ಸ್ಕೂಲ್ನ ಟ್ರಸ್ಟಿ ಪ್ರಣವ್ ಶೆಟ್ಟಿ, ತ್ಯಾಗೀಶ್ಚಂದ್ರ ಶೆಟ್ಟಿ, ಸಮೀರ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

























































































































