ಬಂಟ್ವಾಳ ತಾಲೂಕಿನ ಇರ್ವತ್ತೂರು ಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ರಕ್ತದಾನ ಶಿಬಿರ ಮೂಡುಪಡುಕೋಡಿ ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆಯಿತು. ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಒಬ್ಬ ವ್ಯಕ್ತಿ ನೀಡುವ ರಕ್ತದಾನದಿಂದ ಮೂರು ಜನರ ಜೀವ ಉಳಿಸಬಹುದು. ಪವಿತ್ರ ಕಾರ್ಯವಾದ ರಕ್ತದಾನದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮೂಡಾಯೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ.ಕ್ಷೇ.ಧ.ಗ್ರಾ ಯೋಜನೆ ಬಿ.ಸಿ ಟ್ರಸ್ಟ್ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಬಿ.ಮೂಡ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಅವರು ಶುಭ ಹಾರೈಸಿದರು.


ಹರೀಂದ್ರ ಟಿ ಪೈ, ಸಿಲ್ವಿಸ್ಟರ್ ಪಿಂಟೊ, ಡೆನಿಸ್ ಫೆರ್ನಾಂಡಿಸ್ ದೇರೊಟ್ಟು, ನವೀನ್ ಚಂದ್ರ ಶೆಟ್ಟಿ, ಮಂಜಪ್ಪ ಮೂಲ್ಯ ಅತ್ತಾಜೆ, ಉದ್ಯಮಿ ಶೇಖರ ಪೂಜಾರಿ ಅಗಲ್ದೋಡಿ, ಶಾಲಿನಿ ಕಜೆಕೋಡಿ, ಶಂಕರ ಶೆಟ್ಟಿ ಬೆದ್ರಮಾರ್, ಮೋಹನ್ ಸಾಲ್ಯಾನ್, ಚಂದ್ರಶೇಖರ್, ಅಶ್ವಿನಿ, ಅಬ್ದುಲ್ ನಜೀರ್ ಸಾಹೇಬ್, ರಂಜಿತ್ ಶೆಟ್ಟಿ ಅರ್ಕೆದೊಟ್ಟು, ಜಹೀರ್ ಇರ್ವತ್ತೂರು, ಸತೀಶ ಕರ್ಕೇರಾ, ಹರೀಶ್ ಶೆಟ್ಟಿ ಕುಮೇರ್, ಇಬ್ರಾಹಿಂ ಇರ್ವತ್ತೂರು, ಸತೀಶ್ ಪೂಜಾರಿ ಬೆನಕ, ಸುಪ್ರೀತ್ ಜೈನ್, ಉಮೇಶ ಆಚಾರ್ಯ ಉಪಸ್ಥಿತರಿದ್ದರು. ರಕ್ತದಾನಿಗಳಿಗೆ ರಕ್ತ ಚಂದನ ಗಿಡಗಳನ್ನು ವಿತರಿಸಲಾಯಿತು. ಅಮೃತಾ ಎಸ್ ಪ್ರಾರ್ಥಿಸಿದರು. ಡಾ. ರಾಮಕೃಷ್ಣ ಎಸ್ ಸ್ವಾಗತಿಸಿ, ಪ್ರಸ್ತಾಪಿಸಿದರು. ದಯಾನಂದ ಎರ್ಮೆನಾಡು ನಿರೂಪಿಸಿದರು. ಶಿಬಿರದಲ್ಲಿ 110 ಮಂದಿ ರಕ್ತದಾನ ಮಾಡಿದರು.




















































































































