ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಇದರ ಆಶ್ರಯದಲ್ಲಿ ಮೂಲ್ಕಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ| ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಸಭಾಭವನ ಕಾಮಗಾರಿಯ ಕುರಿತು ಹಾಗೂ ಡಿಸೆoಬರ್ 31 ರ ಒಳಗೆ ಸಭಾಭವನವನ್ನು ಸಂಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಕುರಿತು ಸಮಾಲೋಚನಾ ಸಭೆಯು ಬಂಟರ ಸಂಘ ಮುಂಬಯಿಯ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ಸಭಾಂಗಣ ಅನೆಕ್ಸ್ ಕಟ್ಟಡ ಬಂಟರ ಭವನ ಕುರ್ಲಾ ಮುಂಬಯಿ ಇಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ವಹಿಸಿದ್ದರು. ಸಭೆಯಲ್ಲಿ ಹಾಜರಿದ್ದ ದಾನಿಗಳು ಹಾಗೂ ಸದಸ್ಯರುಗಳಿಗೆ ಸಭಾಭವನ ನಿರ್ಮಾಣದ ಸಾಕ್ಷ್ಯ ಚಿತ್ರವನ್ನು ಪ್ರಾಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು. ಸಭಾಭವನದ ಬಗ್ಗೆ ದಾನಿಗಳ ಹಾಗೂ ಸದಸ್ಯರುಗಳು ಅನಿಸಿಕೆಗಳನ್ನು ಈ ಸಂಧರ್ಭದಲ್ಲಿ ತಿಳಿಸಿದರು.




ಸಭೆಯಲ್ಲಿ ದಾನಿಗಳಾದ ತೋನ್ಸೆ ಆನಂದ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ರಾಜೇಶ್ ಎನ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ ದಂಪತಿಗಳು, ಶಶಿಧರ್ ಶೆಟ್ಟಿ ಇನ್ನಂಜೆ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಶಂಕರ್ ಶೆಟ್ಟಿ ವಿರಾರ್, ಹರೀಶ್ ಶೆಟ್ಟಿ ಪಡುಕುಡೂರು, ಗಿರೀಶ್ ಶೆಟ್ಟಿ ತೆಳ್ಳಾರು, ಸಿಎ ಸದಾಶಿವ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಚಂದ್ರಶೇಖರ ಎಸ್ ಶೆಟ್ಟಿ, ಡಾ. ಸದಾನಂದ್ ಶೆಟ್ಟಿ, ಅನಿಲ್ ಶೆಟ್ಟಿ ಏಳಿoಜೆ, ಸುಬ್ಬಯ್ಯ ಶೆಟ್ಟಿ, ಮಂಜುನಾಥ ಶೆಟ್ಟಿ ಕೊಡ್ಲಾಡಿ, ಆನಂದ್ ಡಿ ಶೆಟ್ಟಿ ಎಕ್ಕಾರು, ವಾಸು ಶೆಟ್ಟಿ ಬಿವಂಡಿ, ಜಯಂತ್ ಶೆಟ್ಟಿ ಥಾಣೆ, ಕೃಷ್ಣ ವಿ ಶೆಟ್ಟಿ ಸಯನ್, ರತ್ನ ಪಿ ಶೆಟ್ಟಿ, ಮನೋರಮ ಎನ್.ಬಿ ಶೆಟ್ಟಿ, ಚಿತ್ರಾ ಆರ್ ಶೆಟ್ಟಿ, ಲತಾ ಪಿ ಶೆಟ್ಟಿ, ವಜ್ರಾಕ್ಷಿ ಪೂಂಜ ಮತ್ತು ಚಂದ್ರಿಕಾ ಐಕಳ ಹರೀಶ್ ಶೆಟ್ಟಿ, ಪದಾಧಿಕಾರಿಗಳಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಉಳ್ತೂರು ಮೋಹನದಾಸ ಶೆಟ್ಟಿ, ಚಂದ್ರಹಾಸ ಡಿ. ಶೆಟ್ಟಿ, ಕೊಲ್ಲಾಡಿ ಬಾಲಕೃಷ್ಣ ರೈ, ಸಭಾಭವನ ನಿರ್ಮಾಣದ ಉಸ್ತುವಾರಿ ಇಂಜಿನಿಯರ್ ಗೋಪಾಲ್ ಭಟ್, ಒಕ್ಕೂಟದ ಲೆಕ್ಕಪರಿಶೋಧಕರಾದ ಸಿ.ಎ. ದಯಶರಣ್ ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ. ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಶೆಟ್ಟಿ, ಕಾರ್ಯದರ್ಶಿ ಶೇಖರ್ ಶೆಟ್ಟಿ, ಬಂಟ್ಸ್ ಪೋರಂ ಮೀರಾ ರೋಡ್ ನ ಅಧ್ಯಕ್ಷ ಉದಯ ಶೆಟ್ಟಿ ಮಲಾರಬೀಡು, ಕಳತ್ತೂರು ವಿಶ್ವನಾಥ್ ಶೆಟ್ಟಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ಥಾಣೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಸುನಿಲ್ ಜೆ. ಶೆಟ್ಟಿ, ಸಂತೋಷ್ ಶೆಟ್ಟಿ, ದಿವಾಕರ್ ಶೆಟ್ಟಿ ಇಂದ್ರಾಳಿ, ವಿಜಯ್ ಶೆಟ್ಟಿ ಕುತ್ತೆತ್ತೂರು, ನವನೀತ್ ಶೆಟ್ಟಿ ಕದ್ರಿ, ಪ್ರವೀಣ್ ಶೆಟ್ಟಿ ವರಂಗ, ಶ್ರೀಶಕ್ತಿ ಫೌಂಡೇಶನ್ ಅಧ್ಯಕ್ಷೆ ಶಾಲಿನಿ ಶೆಟ್ಟಿ, ಜಯಂತಿ ಶೆಟ್ಟಿ ನವಿ ಮುಂಬಯಿ, ಜ್ಯೋತಿ ಶೆಟ್ಟಿ ನವಿ ಮುಂಬಯಿ, ಚೇತನಾ ಸುರೇಶ್ ಶೆಟ್ಟಿ, ಸರೋಜ ಶೆಟ್ಟಿ, ಜಯಶ್ರೀ ಶೆಟ್ಟಿ, ಮಮತಾ ಭಂಡಾರಿ, ಶೋಭಾ ಶೆಟ್ಟಿ, ಅರುಣಾ ಶೆಟ್ಟಿ, ಉಷಾ ಶ್ರೀಧರ್ ಶೆಟ್ಟಿ, ಅನಿತಾ ಅಶೋಕ್ ಶೆಟ್ಟಿ, ಹರೀಶ್ ಶೆಟ್ಟಿ ಕಲ್ಯಾಣ್, ರವಿ ಶೆಟ್ಟಿ ಕಲ್ಯಾಣ್, ಸಿ.ಎ ರಮೇಶ್ ಶೆಟ್ಟಿ, ಸಿ.ಎ ಸುಕುಮಾರ್ ಶೆಟ್ಟಿ, ನವಿ ಮುಂಬಯಿ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ದಯಾನಂದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪೂನಾ, ಭಾಸ್ಕರ್ ಶೆಟ್ಟಿ ಸಿಬಿಡಿ ಪನ್ವೆಲ್, ರಂಜನ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಪಾಡಿ, ರವೀಂದ್ರ ಶೆಟ್ಟಿ ಪಡುಬಿದ್ರಿ, ನಾಗೇಶ್ ಶೆಟ್ಟಿ ಐರೋಳಿ, ವಿಠ್ಠಲ್ ಆಳ್ವ, ಜಯ ಎ ಶೆಟ್ಟಿ, ಧನಂಜಯ ಪಿ ಶೆಟ್ಟಿ, ವನಿತಾ ನೋಂಡ, ಬಾಬಣ್ಣ ಶೆಟ್ಟಿ ಅನ್ನೇದಗುತ್ತು, ಸುಕೇಶ್ ಶೆಟ್ಟಿ ಅನ್ನೇದಗುತ್ತು, ಅಡ್ವೋಕೇಟ್ ಆರ್.ಜಿ ಶೆಟ್ಟಿ, ಚಂದ್ರಶೇಖರ ಪಾಲೆತ್ತಾಡಿ, ವೈ.ಟಿ ಶೆಟ್ಟಿ, ದಿನೇಶ್ ಕುಲಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಭೆಯ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಭೋಜನದ ಪ್ರಾಯೋಜಕತ್ವವನ್ನು ಗಿರೀಶ್ ಶೆಟ್ಟಿ ತೆಳ್ಳಾರು ಮತ್ತು ಶಶಿಧರ್ ಶೆಟ್ಟಿ ಇನ್ನಂಜೆಯವರು ವಹಿಸಿದ್ದರು.




















































































































