ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಶಿಕ್ಷಣ ತಜ್ಞ, ಉದ್ಯಮಿ, ವಕೀಲರಾದ ಆದರ್ಶ್ ಶೆಟ್ಟಿಯವರು ನೇಮಕಗೊಂಡಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರ ಉಪಸ್ಥಿತಿಯಲ್ಲಿ, ರಾಜ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಈ ನೇಮಕಾತಿ ಕಾರ್ಯಕ್ರಮವು ನಡೆದಿದೆ.



ಸಮಾಜಮುಖಿ ಚಿಂತನೆ ಹೊಂದಿರುವ ನಾಯಕರಾದ ಆದರ್ಶ್ ಶೆಟ್ಟಿಯವರು ಹಲವು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ಜೆಸಿಐ ಗಣೇಶಪುರದ ಅಧ್ಯಕ್ಷರಾಗಿ ಹಾಗೂ ಜೆಸಿಐ ಇಂಡಿಯಾ ವಲಯ 15 ರ ಜೋನ್ ಆಫೀಸರ್ ಆಗಿಯೂ ಅತ್ಯುತ್ತಮ ನಾಯಕತ್ವ ಪ್ರದರ್ಶಿಸಿದ್ದಾರೆ. ಸಮಾಜದ ಅಭಿವೃದ್ಧಿ, ಶಿಕ್ಷಣ, ಯುವಜನರ ಸಬಲೀಕರಣ ಹಾಗೂ ಅಗತ್ಯವಿರುವವರಿಗೆ ನೆರವಾಗುವ ಅನೇಕ ಸೇವಾ ಕಾರ್ಯಗಳಲ್ಲಿ ಅವರ ಕೊಡುಗೆ ಶ್ಲಾಘನೀಯ.




















































































































