



ಬಂಟರ ಸಂಘ ಪಳ್ಳಿ ನಿಂಜೂರು ವಲಯ (ರಿ) ವತಿಯಿಂದ ಕಾರ್ಕಳ, ಕಾಪು ಹಾಗೂ ಹೆಬ್ರಿ ತಾಲೂಕು ಬಂಟರ ಸಂಘಗಳ ಸಹಯೋಗದೊಂದಿಗೆ ಮೇ 16 ರಂದು ನಡೆದ ಹೊನಲು ಬೆಳಕಿನ ಬಂಟರ ಕ್ರೀಡೋತ್ಸವ -2026 ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಮಂಜುನಾಥ ಭಂಡಾರಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಳ್ಳಿ ನಿಂಜೂರು ವಲಯ ಬಂಟರ ಸಂಘದ ಬಂಟರ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು, ಉಡುಪಿ ಜಿಲ್ಲಾ ಅತ್ಲೇಟಿಕ್ಸ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ, ಕಾರ್ಕಳ ಬಂಟರ ಸಂಘದ ಸಂಚಾಲಕ ವಿಜಯ ಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು, ಬೆಳ್ಮಣ್ ಬಂಟರ ಸಂಘದ ಅಧ್ಯಕ್ಷ ಶೋಧನ್ ಶೆಟ್ಟಿ, ಗೋವಾ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಜಯಕರ ಶೆಟ್ಟಿ, ತುಳು ಕೂಟ ಗೋವಾದ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ ಸೇರಿದಂತೆ ಅನೇಕ ಬಂಟ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.



























































































































