
ರೋಟರಿ ಕ್ಲಬ್ ಕಾರ್ಕಳ ಇಲ್ಲಿಗೆ ರೋಟರಿ ಜಿಲ್ಲೆ, 3182 ರ ಜಿಲ್ಲಾ ಗವರ್ನರ್ Mphf ಕೆ. ಪಾಲಾಕ್ಷರವರು ಅಧಿಕೃತ ಭೇಟಿ ನೀಡಿದರು. ಕಾಬೆಟ್ಟು ಅಂಬೇಡ್ಕರ್ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷ ರೋ. Phf ಕೆ.ನವೀನ್ ಚಂದ್ರ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ಸಮಾರಂಭದ ಮುಖ್ಯ ಅತಿಥಿ ಜಿಲ್ಲಾ ಗವರ್ನರ್ ರೋ. Mphf ಕೆ.ಪಾಲಾಕ್ಷ ರವರು ಮಾತನಾಡುತ್ತಾ, ಕಾರ್ಕಳ ರೋಟರಿ ಕ್ಲಬ್ಬಿನ ಸಮುದಾಯ ಸೇವಾ ಕಾರ್ಯಕ್ರಮಗಳು, ಶಿಕ್ಷಣಕ್ಕೆ ನೀಡುತ್ತಿರುವ ಸೇವೆಗಳು, ಪರಿಸರ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಖ್ಯಾತ ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿ ಮತ್ತು ಚಲನಚಿತ್ರ ನಟ, ನಿರ್ದೇಶಕ ಮತ್ತು ಪ್ರಸಿದ್ಧ ಪ್ರಶಂಸ ನಾಟಕ ತಂಡದ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಇವರನ್ನು ಸನ್ಮಾನಿಸಲಾಯಿತು.


ರೋಟರಿ ಗೃಹ ಪತ್ರಿಕೆ “ಸರ್ವಿಸ್”ಅನ್ನು ಗವರ್ನರ್ ಬಿಡುಗಡೆಗೊಳಿಸಿದರು. ಸಹಾಯಕ ಗವರ್ನರ್ ರೋ. Phf ವಿಘ್ನೇಶ್ ಶೆಣೈ, ವಲಯ ಸೇನಾನಿ ರೋ. Mphf ಜಾನ್ ಆರ್. ಡಿಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ರೋ. ಸುಬ್ರಹ್ಮಣ್ಯ ದೇವಾಡಿಗ ಅತಿಥಿಗಳನ್ನು ಪರಿಚಯಿಸಿದರು. ರೋ. Mjd ಸುವರ್ಣ ನಾಯಕ್ ರೋಟರಿ ನಿಧಿಗೆ TRF ಮೂಲಕ ದೇಣಿಗೆ ನೀಡಿದವರನ್ನು ಗುರುತಿಸಿದರು. ಕಾರ್ಯದರ್ಶಿ ರೋ. ಚೇತನ್ ನಾಯಕ್ ವಾರ್ಷಿಕ ವರದಿ ವಾಚಿಸಿದರು. ಜಿಲ್ಲಾ ಗವರ್ನರ್ ರೋ. Mphf ಕೆ ಪಾಲಾಕ್ಷರವರು ರೋಟರಿ ಕ್ಲಬ್ ವತಿಯಿಂದ ಮಾಡಿದ ವಿವಿಧ ಯೋಜನೆಗಳನ್ನು ವೀಕ್ಷಿಸಿ ಅವುಗಳ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯವನ್ನು ನೆರವೇರಿಸಿದರು.
ತೆಲ್ಲಾರ್ ಮತ್ತು ಮುಂಡ್ಲಿ ಶಾಲೆಗಳಿಗೆ 40,000 ವೆಚ್ಚದ 2 ಶುದ್ಧ ಕುಡಿಯುವ ನೀರಿನ ಘಟಕ, ಕಾಬೆಟ್ಟು ಸ. ಹಿ. ಪ್ರಾ. ಶಾಲೆಗೆ ಸುಮಾರು 80,000 ವೆಚ್ಚದ ಬೆಂಚ್ ಮತ್ತು ಡೆಸ್ಕುಗಳು, ಕಲ್ಲಂಬಡಿ ಪದವು ಶಾಲೆಗೆ 45,000 ವೆಚ್ಚದ ಪ್ರೊಜೆಕ್ಟರ್, 60,000 ವೆಚ್ಚದಲ್ಲಿ 6 ಸೂಚನಾ ಫಲಕಗಳು, ಶಿರ್ಲಾಲು ಶಾಲೆಗೆ 10,000 ವೆಚ್ಚದ ಧ್ವನಿವರ್ಧಕ, ಬಸ್ರಿ ಬೈಲೂರ್ ಶಾಲೆಗೆ 2 ಕಪಾಟುಗಳು, ವಿಜೇತ ಶಾಲೆಗೆ 12,000 ವೆಚ್ಚದ ಪ್ಯಾಡ್ ಬರ್ನಿಂಗ್ ಯಂತ್ರ, ಬಜಗೋಳಿ ಶಾಲೆಗೆ 40,000 ವೆಚ್ಚದಲ್ಲಿ ಮೇಲ್ಚಾವಣಿ , ಕಲ್ಲಂಬಾಡಿ ಪದವು ಅಂಗನವಾಡಿಗೆ 15,000 ವೆಚ್ಚದ ಪೀಠೋಪಕರಣ, ಪುಲ್ಕೆರಿ ಅಂಗನವಾಡಿ ಪುಟಾಣಿಗಳಿಗೆ 10,000 ವೆಚ್ಚದ ಸೈಕಲ್, ಚೈರ್, ಚಾಪೆಗಳನ್ನು ಹಸ್ತಾಂತರಿಸಲಾಯಿತು. Ann. ಗಾಯತ್ರಿ ವಿಜೇಂದ್ರ ಪ್ರಾರ್ಥಿಸಿದರು. ರೋ ಚೇತನ್ ನಾಯಕ್ ವಂದಿಸಿದರು.

























































































































