
ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 20 ರಂದು ಸಂಜೆ ಮುಂಬಯಿ, ನವಿ ಮುಂಬಯಿಯ ಪ್ರಸಿದ್ಧ ಭಜನೆ ಗಾಯಕಿ ಹೇಮಲತಾ ಸುರೇಂದ್ರ ಶೆಟ್ಟಿ ಅವರಿಂದ ಪ್ರತಿ ಶುಕ್ರವಾರದ ಶ್ರೀ ದುರ್ಗಾ ರಾಘವೇಂದ್ರ ಭಜನಾ ಮಂಡಳಿಯ ಭಜನೆಯ ಸಂದರ್ಭ ಭಕ್ತಿ ಭಜನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಕೋರಿಬೆಟ್ಟುಗುತ್ತು ಸುರೇಂದ್ರ ಶೆಟ್ಟಿ, ಹೇಮಲತಾ ಸುರೇಂದ್ರ ಶೆಟ್ಟಿ, ಸುಜಾತ ಶೆಟ್ಟಿ, ಉಷಾ ಶೆಟ್ಟಿ, ಸುಹಾಸಿನಿ ಶೆಟ್ಟಿ ಮತ್ತು ಇತರ ಭಜಕರೊಂದಿಗೆ ಶ್ರೀ ದುರ್ಗಾ ರಾಘವೇಂದ್ರ ಭಜನಾ ಮಂಡಳಿಗಳ ರೂವಾರಿ ಗುರುದತ್ ಪೂಂಜ ಮುಂಡ್ಕೂರು ಉಪಸ್ಥಿತರಿದ್ದರು.




























































































































