ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಹಿರ್ಗಾನದ ಸಿರಿಯಣ್ಣ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉದ್ಯಮಿ, ಪ್ರಗತಿಪರ ಕೃಷಿಕರಾಗಿರುವ ಸಿರಿಯಣ್ಣ ಶೆಟ್ಟಿಯವರು ಕಳೆದ ಸಾಲಿನಲ್ಲೂ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಆ ಮೊದಲು ಸಂಘದ ನಿರ್ದೇಶಕರಾಗಿ, ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಜನವರಿ 8ರಂದು ಸಂಘದ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಚುನಾವಣಾ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಜಯಂತಿ ಎಸ್. ಕಾರ್ಯ ನಿರ್ವಹಿಸಿದರು. ಈ ಸಂದರ್ಭ ಉದ್ಯಮಿ ಚೇತನ್ ಶೆಟ್ಟಿ, ವಾಸು ಶೆಟ್ಟಿ, ಸಂಘದ ಮಾಜಿ ನಿರ್ದೇಶಕ ಎಂ. ರತ್ನಾಕರ ರಾವ್, ಸಂಘದ ನಿರ್ದೇಶಕರಾದ ಶಂಕರ ನಾಯಕ್, ಹರೀಶ್ ಶೆಟ್ಟಿ, ತಾರನಾಥ ಶೆಟ್ಟಿ, ಉಮೇಶ್ ನಾಯ್ಕ್, ಪ್ರಕಾಶ್ ಗೋಕುಲ್ ನಾಯ್ಕ್, ಕಲ್ಯಾಣಿ ಶೆಟ್ಟಿ, ರತ್ನಾವತಿ ಎನ್. ನಾಯಕ್, ಅನಿಲ್ ಪೂಜಾರಿ ಉಪಸ್ಥಿತರಿದ್ದರು. ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಜಯಂತ್ ಕುಮಾರ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ವಾಘಲೆ ಕಾರ್ಯಕ್ರಮ ನಿರ್ವಹಿಸಿದರು.