ತನ್ನ ಭಿನ್ನ ವಿಭಿನ್ನ ಸೇವಾ ಚಟುವಟಿಕೆಗಳ ಮೂಲಕ ಮನೆ ಮಾತಾಗಿರುವ ಶಿವಾಯ ಫೌಂಡೇಶನ್ ಮುಂಬಯಿ ವತಿಯಿಂದ ಡೊಂಬಿವಲಿ ಉಪನಗರದ ಅಂಕುರ್ ಬಾಲ ಸೇವಾ ಗೃಹದಲ್ಲಿರುವ ಹೆತ್ತವರಿಂದ ತಿರಸ್ಕೃತರಾದ, ಪಾಲಕರ ಪ್ರೀತಿಯಿಂದ ವಂಚಿತರಾದ ಮುದ್ದು ಮಕ್ಕಳ ಜೊತೆ ದೀಪಾವಳಿ ಸಂಭ್ರಮವನ್ನು ಆಚರಿಸಲಾಯಿತು.
ಸುಮಾರು 39 ಮಂದಿ ಮಕ್ಕಳಿಗೆ ಹೊಸ ಬಟ್ಟೆ, ಮಕ್ಕಳ ಕಲಿಕೆಗೆ ಬೇಕಾಗುವ ಮೈಕ್, ಸ್ಪೀಕರ್, ಮಕ್ಕಳ ಆರೈಕೆಗೆ ಬೇಕಾಗುವ ತಿಂಗಳ ರೇಷನ್ ನೀಡಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನದ ಜೊತೆಗೆ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಮಕ್ಕಳ ಪಾಲನೆ ಮಾಡುತ್ತಿರುವ ಮತ್ತು ಬಾಲಗೃಹದ ಸಂಸ್ಥಾಪಕಿ ಅಕ್ಷತಾ ಭೋಸ್ಲೆ ಮತ್ತು ಅವರ ಪುತ್ರಿಯನ್ನು ಸನ್ಮಾನಿಸಿ, ಉತ್ತಮ ಕಾರ್ಯದ ಜೊತೆ ಸಂಸ್ಥೆ ಸದಾ ಇರಲಿದೆ ಎಂದು ಧೈರ್ಯ ತುಂಬಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸಂಸ್ಥೆಯ ಸದಸ್ಯರಾದ ಲೀಲಾಧರ ಶೆಟ್ಟಿಗಾರ್ ಶಕುಂತಳಾ ಲೀಲಾಧರ ದಂಪತಿ, ಸಿಎ ಸಂದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಪಲಿಮಾರು, ಪ್ರಶಾಂತ್ ಶೆಟ್ಟಿ ಪಂಜ, ವಿನೋದ್ ದೇವಾಡಿಗ, ಸತೀಶ್ ರೈ ಪುತ್ತೂರು, ರಾಜೇಶ್ ಹೆಜಮಾಡಿ, ಪ್ರಶಾಂತ್ ಎ. ಶೆಟ್ಟಿ, ಸಂಸ್ಥೆಯ ವೈದ್ಯಕೀಯ ಸಲಹೆಗಾರ್ತಿ ಡಾ. ಸ್ವರ್ಣಲತಾ ಶೆಟ್ಟಿ, ರಕ್ಷಾ ಶೆಟ್ಟಿ, ಶ್ವೇತಾ ಶೆಟ್ಟಿ ಅವರಾಲ್ ಕಂಕಣ ಗುತ್ತು, ಸಂಗೀತಾ ಶೆಟ್ಟಿ, ಪ್ರಿಯಾ ಶೆಟ್ಟಿ, ಬೇಚು ರಾಮ್ ನರೇಶ್ ಗುಪ್ತಾ, ಪ್ರವೀಣ್ ಬಂಗೇರ ಮತ್ತಿತರರಿದ್ದರು.