ಅಂತರ್ಜಾಲ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ ಮಾತ್ರವಲ್ಲ, ಸಹಸ್ರಾರು ಬಂಟರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸಿದ ‘ಬಂಟ್ಸ್ ನೌ’ ಅಂತರ್ಜಾಲ ಸುದ್ದಿ ಮಾಧ್ಯಮ ಸಂಸ್ಥೆಯ ವತಿಯಿಂದ ಅನುಬಂಧ – 2024 ಕಾರ್ಯಕ್ರಮ ಮೇ 19 ರಂದು ಮಂಗಳೂರು ಪುರಭವನದಲ್ಲಿ ಅಪರಾಹ್ನ 3 ರಿಂದ ರಾತ್ರಿ 10 ರ ತನಕ ನಡೆಯಲಿದೆ.
ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಅರ್ಥಪೂರ್ಣ, ಸಮಾಜ ಹಿತ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಫದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ, ಹಿರಿಯ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಸಾಂಕೇತಿಕವಾಗಿ ತುಳುನಾಡಿನ ಸಂಪ್ರದಾಯದಂತೆ ವಿವಿಧ ಆಕರ್ಷಕ ಶೈಲಿಗಳಲ್ಲಿ ಉದ್ಘಾಟಿಸಲಿದ್ದಾರೆ.
ಈ ಸಂಭ್ರಮದಲ್ಲಿ ಗೌರವ ಅತಿಥಿಗಳಾಗಿ ಜಸ್ಟಿಸ್ ಸಂತೋಷ್ ಹೆಗ್ಡೆ, ಡಾ. ಎಚ್. ಎಸ್ ಬಲ್ಲಾಳ್, ಡಾ. ಎ.ಜೆ. ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ವಿಜಯ್ ಶೆಟ್ಟಿ ಕಾರ್ಕಳ, ಅಜಿತ್ ಹೆಗ್ಡೆ ಶಾನಾಡಿ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಶಕುಂತಳಾ ಶೆಟ್ಟಿ ಪುತ್ತೂರು, ಮಧುಕರ ಶೆಟ್ಟಿ ಬೆಂಗಳೂರು, ವಸಂತ್ ಶೆಟ್ಟಿ ಬೆಳ್ಳಾರೆ, ಹರಿಪ್ರಸಾದ್ ರೈ, ಚಂದ್ರಹಾಸ್ ಶೆಟ್ಟಿ ರಂಗೋಲಿ, ಜಗನ್ನಾಥ ಶೆಟ್ಟಿ ಬಾಳ, ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಚೇತನ್ ಶೆಟ್ಟಿ ಬೆಳಗಾವಿ, ಗಣೇಶ್ ಶೆಟ್ಟಿ ಡೊಂಬಿವಲಿ, ಜಯರಾಮ್ ಶೆಟ್ಟಿ ಬೆಳ್ತಂಗಡಿ, ಲೋಕಯ್ಯ ಶೆಟ್ಟಿ ಮುಂಚೂರು, ಭವ್ಯ ಎ. ಶೆಟ್ಟಿ ಸುರತ್ಕಲ್, ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಆರೂರು ಜಗದೀಶ್ ಶೆಟ್ಟಿಯವರು ಉಪಸ್ಥಿತರಿರುವರು.
ಈ ವಿಶೇಷ ಅದ್ಧೂರಿಯ ಸಮಾರಂಭದಲ್ಲಿ ಡಾ. ಎಂ. ಮೋಹನ್ ಆಳ್ವ, ಕರುಣಾಕರ ಎಂ ಶೆಟ್ಟಿ, ಕಿಶೋರ್ ಹೆಗ್ಡೆ ಮೊಳಹಳ್ಳಿ, ಡಾ ಆರ್ ಕೆ ಶೆಟ್ಟಿ, ಮಿತ್ರಂಪಾಡಿ ಜಯರಾಮ ರೈ, ಸೀತಾರಾಮ್ ರೈ, ಪ್ರವೀಣ್ ಶೆಟ್ಟಿ ಪುತ್ತೂರು ಮತ್ತು ಕರ್ನಲ್ ಜಗಜೀವನ್ ಭಂಡಾರಿ ಇವರಿಗೆ ಬಂಟ ರತ್ನ -2024 ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಅಂತೆಯೇ ರಾಜೇಂದ್ರ ವಿ. ಶೆಟ್ಟಿ, ಮುರಳಿ ಮೋಹನ್ ಶೆಟ್ಟಿ ಗೋವಾ, ರಾಕೇಶ್ ಶೆಟ್ಟಿ ಬೆಳ್ಳಾರೆ, ಎಂ.ಬಿ. ಉಮೇಶ್ ಶೆಟ್ಟಿ, ವಿಶು ಶೆಟ್ಟಿ ಅಂಬಲಪಾಡಿ ಮತ್ತು ಪ್ರಭಾಕರ್ ವಿ.ಶೆಟ್ಟಿಯವರಿಗೆ ಬಂಟ ವಿಭೂಷಣ -2024 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಸಮಾರಂಭದಲ್ಲಿ 2024 ರ ಸಾಲಿನ ಯುವ ಬಂಟ ರತ್ನ ಪ್ರಶಸ್ತಿಯನ್ನು ಆದರ್ಶ್ ಶೆಟ್ಟಿ ಹಾಲಾಡಿ, ಮಂದರ ಶೆಟ್ಟಿ ಹೊನ್ನಾಳ, ಎಚ್. ಪ್ರಸನ್ನಚಂದ್ರ ಶೆಟ್ಟಿ, ಡಾ. ಹರ್ಷ ಕುಮಾರ್ ರೈ ಮಾಡಾವು ಇವರಿಗೆ ನೀಡಲಾಗುವುದು. ಮಕ್ಕಳ ಆರೋಗ್ಯ ಮತ್ತು ಜೀವನ ಶೈಲಿಯ ಬಗ್ಗೆ ಬಂಟರ ಸಂಘ ಆಂದ್ರಪ್ರದೇಶ ಇದರ ಮಾಜಿ ಅಧ್ಯಕ್ಷ ರತ್ನಾಕರ ರೈ ದಿಕ್ಸೂಚಿ ಭಾಷಣ ನೀಡಲಿದ್ದಾರೆ.
ರಕ್ಷಣ್ ಶೆಟ್ಟಿ ಮಾಡೂರು ಮತ್ತು ಬಳಗದವರಿಂದ ಸಂಗೀತ ರಸಸಂಜೆ, ಯಕ್ಷ ಯುವರತ್ನ ಧೀರಜ್ ರೈ ಸಂಪಾಜೆ ಇವರ ಭಾಗವತಿಕೆಯಲ್ಲಿ ಕಡಬ ದಿನೇಶ್ ರೈ ಸಾರಥ್ಯದ ಯಕ್ಷಗಾನ ನಾಟ್ಯ – ಹಾಸ್ಯ ವೈಭವ ಮತ್ತು ಶಾರದಾ ಆರ್ಟ್ಸ್ ತಂಡದವರ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ತುಳು ಪೌರಾಣಿಕ ಭಕ್ತಿಪ್ರಧಾನ ಸಾಮಾಜಿಕ ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಅರ್ಥಪೂರ್ಣ, ಸಮಾಜ ಹಿತ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾಗಬೇಕು ಎಂದು ಬಂಟ್ಸ್ ನೌ ಸುದ್ಧಿ ಸಂಸ್ಥೆಯ ಗೌರವ ಸಂಪಾದಕ ಅರುಣ್ ಶೆಟ್ಟಿ ಎರ್ಮಾಳ್, ಸ್ಥಾಪಕ ರಂಜಿತ್ ಶೆಟ್ಟಿ, ಸ್ವಾಗತ ಸಮಿತಿಯ ಸಂಚಾಲಕ ದಿವಾಕರ ಸಾಮಾನಿ, ಪ್ರಚಾರ ಸಮಿತಿಯ ಸಂಚಾಲಕ ಸಂಕಬೈಲು ಮಂಜುನಾಥ ಅಡಪ ವಿನಂತಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ರಂಜಿತ್ ಶೆಟ್ಟಿ, ವಿಶ್ವನಾಥ್ ದೊಡ್ಡಮನೆ, ಸುಕೇಶ್ ಭಂಡಾರಿ, ರಾಜೇಶ್ ಉಪಸ್ಥಿತರಿದ್ದರು.