ನಮ್ಮ ತುಳುನಾಡ ಪದ್ಧತಿ, ಸಂಸ್ಕ್ರತಿ ಅಚಾರ ವಿಚಾರಗಳ ಬಗ್ಗೆ ಅರಿತು ಜೀವನದಲ್ಲಿ ಮುನ್ನಡೆಯುವ ನಾವು ಇನ್ನೊಮ್ಮೆ ತುಳುನಾಡಲ್ಲೆ ಹುಟ್ಟಿ ಬರಬೇಕು ಎಂದು ಆಶಿಸುತ್ತೇವೆ, ಆದರೆ ನಮ್ಮ ಜೀವನ ಧರ್ಮ ಅಧರ್ಮದ ನಡುವೆ ನಾವು ಮಾಡಿದ ಕರ್ಮ ಪಲ ಎನಿದೆಯೋ ಅದರ ಲೆಕ್ಕಾಚಾರದಂತೆ ನಡೆಯುತ್ತದೆ ಹುಟ್ಟು ಮತ್ತು ಬದುಕು. ಸಮಾಗಾರಿಕೆಯಲ್ಲಿ ಜವಾಬ್ದಾರಿಯನ್ನು ಅರಿತು ಮಾಡುವ ಕೆಲಸದಿಂದ ನಮ್ಮ ಯೋಗ್ಯತೆ ತಿಳಿಯುತ್ತದೆ .ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಈ ಯುಗಗಳಲ್ಲಿ ನಡೆದ ಸಂಘರ್ಷವನ್ನು ಅರಿತಾಗ ನಾವಿರುವ ಈ ಕಲಿಯುಗದಲ್ಲಿ ನಮಗೆ ನಾವೇ ಮಿತ್ರರೂ ಹೌದು ಶತ್ರುಗಳು ಹೌದು. ಅಂದರೆ ಜನ್ಮ ಜನ್ಮಾಂತರಗಳಿಂದ ನಾವು ಮಾಡಿದ ಕರ್ಮ ಪಲಗಳ ಪ್ರಾರಬ್ದ ಏನಿದೆಯೋ ಅನುಭವಿಸಲೇ ಬೇಕು, ತಲೆಗೆ ಹೊಯ್ದ ನೀರು ಕಾಲಿಗೆ ಇಳಿದ ಹಾಗೆ. ನಮ್ಮ ತುಳುನಾಡ ಜಾನಪದ ಸಂಸ್ಕ್ರತಿ ದೈವಾರಾಧನೆ, ನಾಗಾರಾಧನೆ ಅಚಾರ ವಿಚಾರ ಸಂಸ್ಕಾರ ಇವೆಲ್ಲವನ್ನು ಅರಿತವರು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಮಾಡಬೇಕು ಹಾಗು ಮಕ್ಕಳಲ್ಲಿ ತಿಳಿದುಕೊಳ್ಳುವ ಮನಸ್ಸು ಮೂಡಿ ಬರಬೇಕು. ಬಂಗಾರದಂತ ಹೃದಯವಂತರು ಮನುಷ್ಯರು ತುಳುವರು, ಎಲ್ಲೇ ಇದ್ದರೂ ನಮ್ಮ ತುಳುನಾಡ ಅಚಾರ ವಿಚಾರಗಳನ್ನು ಮರೆತವರಲ್ಲ. ಒಳ್ಳೆಯ ಮನಸ್ಸು ಎಂಬುದು ನಮ್ಮೂಳಗಿರುತ್ತದೆ ಅದನ್ನು ತಿಳಿದು ವ್ಯವಹರಿಸುವ ಕಾರ್ಯ ಮಾಡಬೇಕು. ಹುಟ್ಟು ಬದುಕಿನ ಜೀವನದಲ್ಲಿ ನಿಸ್ವಾರ್ಥ ಸೇವೆ ಮಾಡಿ ಜೀವನವನ್ನು ಶೃಂಗಾರ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡವರನ್ನು ಸನ್ಮಾನಿಸಿದ ತುಳುಕೂಟದ ಕೆಲಸ ಅದ್ಬುತವಾದುದು. ಜವಾಬ್ದಾರಿಯನ್ನು ಅರಿತು ಮಾಡುವ ಕೆಲಸದಿಂದ ಪುಣೆ ತುಳುಕೂಟದ ಎಲ್ಲರ ಪರಿಶ್ರಮಕ್ಕೆ ಈ ಅದ್ಬುತ ಕಾರ್ಯಕ್ರಮವೇ ಸಾಕ್ಷಿ. ತುಳುಬಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಖ್ಯಾತ ಭಾಷಣಕಾರರು,ನಮ್ಮ ಕುಡ್ಲ ಚಾನೆಲ್ ನ ಸುದ್ದಿ ವಾಚಕರು ಅದ ಡಾ. ಪ್ರಿಯಾ ಹರೀಶ್ ಶೆಟ್ಟಿ ನುಡಿದರು.
ಪುಣೆ ತುಳು ಕೂಟದ 24ನೇ ವಾರ್ಷಿಕೋತ್ಸವ ಮತ್ತು ರಜತ ವರ್ಷದ ಶುಭಾರಂಭದ ಉದ್ಘಾಟನಾ ಸಮಾರಂಭವು ಅ 15 ರಂದು ಪುಣೆಯ ಬಾಣೇರ್ ನಲ್ಲಿಯ, ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಬಂಟರ ಭವನದಲ್ಲಿ ಜರಗಿತು. ಪುಣೆ ತುಳು ಕೂಟದ ಅಧ್ಯಕ್ಷ ಶ್ರೀ ಮೋಹನ್ ಶೆಟ್ಟಿ ಎಣ್ಣೆಹೊಳೆಯವರ ಅಧ್ಯಕ್ಷತೆಯಲ್ಲಿ, ಜರಗಿದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಮುಂಬಯಿ ಬಿಲ್ಲವರ ಅಸೋಸಿಯೇಷನ್ ನ ಅಧ್ಯಕ್ಷರಾದ ಹರೀಶ್ ಜಿ.ಅಮೀನ್, ಡೊಂಬಿವಿಲಿ ಕನ್ನಡ ಸಂಘದ ಅಧ್ಯಕ್ಷ, ಮಂಜುನಾಥ ಕಾಲೇಜ್ ಆಫ್ ಕಾಮರ್ಸ್ ನ ವ್ಯವಸ್ಥಾಪಕ ನಿರ್ದೇಶಕ ದಿವಾಕರ್ ಶೆಟ್ಟಿ ಇಂದ್ರಾಳಿ, ಗೌರವ ಅತಿಥಿಗಳಾದ ಪುಣೆಯ ಹಿರಿಯ ಕೈಗಾರಿಕೊಧ್ಯಮಿ ಶ್ರೀ ಸದಾಶಿವ ಅರ್.ಬಂಜನ್, ಖ್ಯಾತ ಭಾಷಣಕಾರರು, ನಮ್ಮ ಕುಡ್ಲ ಚಾನೆಲ್ ನ ಸುದ್ದಿ ವಾಚಕರು ಅದ ಡಾ.ಪ್ರಿಯಾ ಹರೀಶ್ ಶೆಟ್ಟಿ. ಸನ್ಮಾನ ಸ್ವೀಕರಿಸಿದ ಅಪತ್ಭಾಂದವ ಜೀವ ರಕ್ಷಕ, ಖ್ಯಾತ ಮುಳುಗು ತಜ್ಞ ಶ್ರೀ ಈಶ್ವರ್ ಮಲ್ಪೆ , ಕಲಾಜಗತ್ತು ಮುಂಬಯಿ ಸ್ಥಾಪಕಾಧ್ಯಕ್ಷರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು, ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆ ಪುರಷ್ಕ್ರತರಾದ ತೋನ್ಸೆ ವಿಜಯಕುಮಾರ್ ಶೆಟ್ಟಿ, ಹಾಗೂ ಗೋಖಲೆ ನಗರದ ಶ್ರೀ ದುರ್ಗಾ ಕಾಳಿ ದೇವಿ ದೇವಸ್ಥಾನದ ಸ್ಥಾಪಕರಾದ ಶ್ರೀ ಲಿಂಗಪ್ಪ ಪೂಜಾರಿ, ಪುಣೆ ತುಳುಕೂಟ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ತುಳುಕೂಟದ ಸ್ಥಾಪಕಾಧ್ಯಕ್ಷ ಜಯ ಕೆ .ಶೆಟ್ಟಿ, ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಕೊಶಾಧಿಕಾರಿ ದಿವಾಕರ್ ಶೆಟ್ಟಿ ಮಾಣಿಬೆಟ್ಟು , ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಡಿ.ಶೆಟ್ಟಿ ,ಯುವ ವಿಭಾಗದ ಅಧ್ಯಕ್ಷ ಅಭಿಜಿತ್ ಶೆಟ್ಟಿ ಯವರು ಉಪಸ್ಥಿತರಿದ್ದರು . ಅತಿಥಿ ಗಣ್ಯರನ್ನು ತುಳುನಾಡ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಲಾಯಿತು.
ವೇದಿಕೆಯಲ್ಲಿದ್ದ ಗಣ್ಯರು, ಅತಿಥಿಗಳು,ತುಳುಕೂಟದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ 24ನೆ ವಾರ್ಷಿಕೋತ್ಸವ ಹಾಗೂ ರಜತ ಮಹೋತ್ಸವದ ವರ್ಷಾರಂಭಕ್ಕೆ ಚಾಲನೆ ನೀಡಿದರು. ಗೀತಾ ಡಿ.ಪೂಜಾರಿ ,ನಮಿತಾ ಪೂಜಾರಿ, ಸರಸ್ವತಿ ಕುಲಾಲ್ ಪ್ರಾರ್ಥನೆ ಗೈದರು, ಪ್ರ .ಕಾರ್ಯದರ್ಶಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ ಯವರು ಅತಿಥಿಗಳನ್ನು ಸ್ವಾಗತಿಸಿ,ತುಳುಕೂಟದ ವಾರ್ಷಿಕ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು. ಅತಿಥಿ ಗಣ್ಯರಿಗೆ ತುಳುಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೂ ಗುಚ್ಚ ನೀಡಿ ಗೌರವಿಸಿದರು. ಹಾಗೂ ಪುಣೆಯ ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಮತ್ತು ಮಹಿಳಾಧ್ಯಕ್ಷರುಗಳನ್ನು ತುಳುಕೂಟದ ಅಧ್ಯಕ್ಷರು ಮಹಿಳಾಧ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪುಣೆ ತುಳುಕೂಟ ಕೊಡಮಾಡುವ ವಾರ್ಷಿಕ ವಿಶೇಷ ಸನ್ಮಾನಿತರಾಗಿ ಅಪತ್ಭಾಂದವ ಜೀವ ರಕ್ಷಕ ಖ್ಯಾತ ಮುಳುಗು ತಜ್ಞ ಶ್ರೀ ಈಶ್ವರ್ ಮಲ್ಪೆ, ಕಲಾಜಗತ್ತು ಮುಂಬಯಿ ಸ್ಥಾಪಕಾಧ್ಯಕ್ಷರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು, ತೋನ್ಸೆ ವಿಜಯಕುಮಾರ್ ಶೆಟ್ಟಿ, ಹಾಗೂ ಗೋಖಲೆ ನಗರದ ಶ್ರೀ ದುರ್ಗಾ ಕಾಳಿ ದೇವಿ ದೇವಸ್ಥಾನದ ಸ್ಥಾಪಕರಾದ ಶ್ರೀ ಲಿಂಗಪ್ಪ ಪೂಜಾರಿಯವರನ್ನು ಶಾಲು ಪಲಪುಷ್ಪ ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಅತಿಥಿ ಗಣ್ಯರು ಸನ್ಮಾನಿಸಿದರು. ಮತ್ತು ವಿವಿದ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು ಹಾಗೂ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸತ್ಕರಿಸಿದರು.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಪುಣೆ ತುಳುಕೂಟ ಸದಸ್ಯರಿಂದ ಮಕ್ಕಳಿಂದ, ವಿವಿದ ನಾಟ್ಯ ತಂಡಗಳಿಂದ ವೈವಿದ್ಯಮಯ ಮನೋರಂಜನಾ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು, ನಂತರ ಕಲಾ ಜಗತ್ತು ಮುಂಬಯಿ ತಂಡದ ವಿಜಯ ಕುಮಾರ್ ಶೆಟ್ಟಿ ತೋನ್ಸೆ ಬರೆದು ನಿರ್ದೇಶಿಸಿದ ಮೊಕೆದ ಜೋಕುಲು ನಾಟಕ ಪ್ರದರ್ಶನ ಗೊಂಡಿತು. ಪುಣೆ ತುಳುಕೂಟ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಕೂಟದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಮಹಿಳಾ ವಿಭಾಗದ ಎಲ್ಲಾ ಸದಸ್ಯರು, ಯುವ ವಿಭಾಗದ ಎಲ್ಲಾ ಸದಸ್ಯರು, ಮತ್ತು ತುಳು ಅಭಿಮಾನಿಗಳು ಶಕ್ತಿ ಮೀರಿ ಸಹಕರಿಸಿದರು. ನಂತರ ತುಳುನಾಡ ಸಾಂಪ್ರದಾಯಕ ಶೈಲಿಯ ಪ್ರೀತಿ ಭೋಜನ ಜರಗಿತು. ನಿತೇಶ್ ಶೆಟ್ಟಿ ಎಕ್ಕಾರು ಮತ್ತು ಅಕ್ಷತಾ ಸುಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
ನಮ್ಮ ತುಳು ಸಂಸ್ಕ್ರತಿಯ ಕಲೆ ಆಚಾರ ವಿಚಾರಗಳ ಬೇರು ಎಲ್ಲೆಡೆ ಹೆಮ್ಮರವಾಗಿ ಬೆಳೆದು ಪಸರಿಸಿ ತುಳುವರ ಮನೆ ಮನೆಯಲ್ಲಿ ಸುಗಂದ ಬಿರಿದಾಗ ಅದರಿಂದ ಸಿಗುವ ಆನಂದವೇ ಬೇರೆ, ಅದೇ ರೀತಿ ಇಲ್ಲಿಯ ತುಳುಕೂಟ ಕೆಲಸ ಮಾಡುತಿದೆ, ಇಲ್ಲಿಯ ತುಳುವರ ಹುರುಪು, ಮಕ್ಕಳ ಸಂಭ್ರಮ ಮಹಿಳೆಯರ ಉತ್ಸಾಹ, ಯುವ ತುಳುವರ ಕರ್ತವ್ಯದ ಪರಿ ನೋಡಿದಾಗ ತುಂಬಾ ಸಂತೋಷವಾಗುತಿದೆ, ಪುಣೆ ತುಳುಕೂಟ ತುಳು ಸಂಸ್ಕ್ರತಿ ಕಲೆಯ ಅಭಿವ್ರದ್ದಿಗೆ ಸಾಕಷ್ಟು ಶ್ರಮಿಸುತಿದೆ. ಸಾವಿರಾರು ಸಂಖ್ಯೆಯಲ್ಲಿ ತುಳುವರ ಹಬ್ಬದ ಆಚರಣೆಯಂತೆ ಕಾರ್ಯಕ್ರಮಗಳು ನಡೆಯುತಿವೆ, ತುಳು ಕೂಟ ಪುಣೆ ಮತ್ತಷ್ಟು ಅಭಿವ್ರದ್ದಿಯ ಪಥದಲ್ಲಿ ಸಾಗಲಿ ಶುಭಾವಾಗಲಿ – ಶ್ರೀ ಹರೀಶ್ ಜಿ ಅಮೀನ್, ಅಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್, ಮುಂಬಯಿ
ಸುಮಾರು ವರ್ಷಗಳ ಹಿಂದೆ ತುಳುನಾಡಲ್ಲಿ ಜನಿಸಿದ ತುಳುವರು ಈಗಿನವರಿಗಿಂತ ತುಂಬಾ ಪುಣ್ಯವಂತರು, ಅಂದಿನ ಜನಪದ ಸಂಪ್ರದಾಯ, ಅಚಾರ ವಿಚಾರಗಳು ಬಹಳಷ್ಟು ವಿಶೇಷತೆಯನ್ನು ಪಡೆದಿತ್ತು ಮನೆ ಮನೆಯಲ್ಲಿ ತುಳುವರ ಕಷ್ಟ ಸುಖ ಏನೇ ಇರಲಿ ಆದರೆ ಆಚರಣೆಗಳ ವೈಭವ ಹೇಳತೀರದು. ಈಗಲೂ ಅದೇ ರೀತಿ ನಡೆಯುತಿದೆ ಆದರೆ ಹಲವಾರು ಬದಲಾವಣೆಯ ಗಾಳಿ ಬಿಸಿದೆ. ನಮ್ಮ ಸಂಸ್ಕ್ರತಿ ನಮ್ಮ ಕಲೆ ನಮ್ಮ ಸಂಪ್ರದಾಯ ಮಕ್ಕಳಿಗೆ ಕಲಿಸುವ ದೊಡ್ಡ ಕಾರ್ಯ ಆಗಬೇಕು, ಇದರಲ್ಲಿ ಮಾತೆಯರ ಪಾತ್ರ ಮುಖ್ಯವಾದುದು. ಪುಣೆಯ ತುಳುನಾಡ ಭಾಂದವರನ್ನು ಒಂದು ಗೂಡಿಸಿಕೊಂಡು ಅಧ್ಯಕ್ಷರಾದ ಮೋಹನ್ ಶೆಟ್ಟಿ ಯವರು ಮಾಡಿದ ಈ ಕಾರ್ಯಕ್ರಮದ ವೈಭವ ಮನ ತುಂಬಿ ಬಂದಿದೆ. ತುಳುಕೂಟದ ಮುಖಾಂತರ ಇನ್ನಷ್ಟು ಅರ್ಥಗರ್ಭಿತವಾದ ಸುಂದರ ಕಾರ್ಯಕ್ರಮ ನಡೆಯಲಿ ಎಂದು ಹಾರೈಸುತ್ತೇನೆ – ಶ್ರೀ ದಿವಾಕರ್ ಶೆಟ್ಟಿ ಇಂದ್ರಾಳಿ -ಅಧ್ಯಕ್ಷರು ಕನ್ನಡ ಸಂಘ
.ವ್ಯವಸ್ಥಾಪಕ ನಿರ್ದೇಶಕರು
ಮಂಜುನಾಥ್ ಕಾಲೇಜ್ ಆಫ್ ಕಾಮರ್ಸ್ ಡೊಂಬಿವಿಲಿ
ನಮ್ಮ ಈ ಬಂಟರ ಭವನ ಎಂದರೆ ತುಳುವರ ಭವನ ಇದ್ದಂತೆ, ಪುಣೆಯಲ್ಲಿರುವ ತುಳುವರೆಲ್ಲರೂ ಬೇದ ಭಾವ ಎನ್ನದೆ ಸಹಕರಿಸಿಕೊಂಡು ಮುನ್ನಡೆದು. ಉತ್ತಮ ಕಾರ್ಯ ಯೋಜನೆಗಳ ಮೂಲಕ ತುಳು ಜನರ ಸೇವಾ ಕಾರ್ಯಗಳಲ್ಲಿ ಸಹಬಾಗಿಳಾಗಬೇಕು. ಪುಣೆ ತುಳುಕೂಟ ಶಕ್ತಿ ಭಕ್ತಿ ಯುಕ್ತಿ ಯಿಂದ ಸಮಾನತೆಯಲ್ಲಿ ಕೆಲಸ ಮಾಡುತಿದೆ. ಪುಣೆಯಲ್ಲಿರುವ ತುಳುವರ ಬೇರೆ ಬೇರೆ ಸಂಘ ಸಂಸ್ಥೆಗಳಿಗೆ ನಮ್ಮ ಬಂಟರ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರವಿದೆ. – ಶ್ರೀ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು -ಅಧ್ಯಕ್ಷರು ,ಬಂಟರ ಸಂಘ ಪುಣೆ
ಸರ್ವ ತುಳು ಭಾಂದವರ ಸಹಕಾರ, ತನು ಮನ ಧನದ ಪ್ರೋತ್ಸಾಹದಿಂದ ತುಳುಕೂಟ ಪುಣೆ ಬೆಳೆದು ನಿಂತಿದೆ. ಸಂಸ್ಥೆ ಹೇಗೆ ಬೆಳೆಯಬೇಕು ಯಾವ ರೀತಿಯಲ್ಲಿ ನಡೆಯಬೇಕು ಎಂಬುದನ್ನು ಅರಿತು ತಿಳಿದು ನಡೆದುದರಿಂದ ತುಳು ಕೂಟ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು, ತುಳುವರಿಗೆ ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆಯ ಸೇವೆಯನ್ನು ಕೂಡಾ ನೀಡಿದ್ದೇವೆ, ಇದೀಗ ರಜತ ಮಹೋತ್ಸವದ ಹೊಸ್ತಿಲಲ್ಲಿ ತುಳುಕೂಟ ನಿಂತಿದೆ, ಪುಣೆಯ ಮಹಾ ದಾನಿ ಪ್ರವೀಣ್ ಶೆಟ್ಟಿ ಯವರ ಸಾರಥ್ಯದಲ್ಲಿ ರಜತ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿದೆ, ಅವರಿಗೆ ನಾವೆಲ್ಲರೂ ಪುಣೆಯ ಸರ್ವ ತುಳುವರು ಸಹಕಾರ ನಿಡೋಣ. ತುಳು ಕೂಟದ ಸಮಿತಿಯ ಪಧಾದಿಕಾರಿಗಳು ಸದಸ್ಯರು, ಮಹಿಳಾ ವಿಬಾಗ, ಯುವ ವಿಬಾಗದವರ ಶ್ರಮ ಬಹಳಷ್ಟು ಇದೆ, ಎಲ್ಲರ ಮುಕ್ತ ಮನಸ್ಸಿನ ಈ ವಾರ್ಷಿಕ ಉತ್ಸವ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿ ನಡೆಯುವಲ್ಲಿ ಸರ್ವ ತುಳುವರು,ಧಾನಿಗಳು ಉತ್ತಮ ಸಹಕಾರವನ್ನು ನೀಡಿದ್ದಾರೆ ಧನ್ಯವಾದಗಳು – ಶ್ರೀ ಮೋಹನ್ ಶೆಟ್ಟಿ ಎಣ್ಣೆಹೊಳೆ -ಅಧ್ಯಕ್ಷರು ತುಳುಕೂಟ ಪುಣೆ
ಸೇವೆಯೇ ನನ್ನ ಉಸಿರು, ನನ್ನ ನಿಸ್ವಾರ್ಥ ಈ ಕಾಯಕದಲ್ಲಿ ಅದೆಷ್ಟೋ ಜನರು ತಕ್ಕ ಮಟ್ಟದ ಸಂತೃಪ್ತಿಯನ್ನು ಹೊಂದಿರುತ್ತಾರೆ ಎಂದು ನಂಬಿದ್ದೇನೆ. ಸಮುದ್ರ, ನದಿ, ಕೆರೆ, ಬಾವಿ, ಸರೋವರ, ಜಲಾಶಯಗಳಲ್ಲಿ ಆಪತ್ಕಾಲದಲ್ಲಿ ತನ್ನವರನ್ನು ಕಳೆದುಕೊಂಡು ಅದೆಷ್ಟೋ ತಂದೆ ತಾಯಿ, ಹೆಂಡತಿ ಮಕ್ಕಳು ಸಹಾಯಕ್ಕಾಗಿ ಕಾದು ಕುಳಿತಿರುತ್ತಾರೆ, ಅವರ ಮನದಾಸೆ ನಮ್ಮವರು ಬದುಕಿ ಬರಲಿ ಎಂಬುದೇ ಆಗಿದ್ದರೂ ಕೆಲವೊಮ್ಮೆ ಮೃತ ದೇಹ ಅದರೂ ಸಿಗಲಿ ಎಂಬ ಇಚ್ಛೆ ಇರುತ್ತದೆ, ಬಹಳ ಕಠಿನ ಪರಿಸ್ಥಿಯನ್ನು ಲೆಕ್ಕಿಸದೆ ಬದುಕಿಸುವ ಪ್ರಯತ್ನ ಮಾಡಿ ಆಗದೆ ಇದ್ದಾಗ ಅದೆಷ್ಟೋ ಆಳದಲ್ಲಿ ಇದ್ದರೂ ಮೃತ ದೇಹವನ್ನು ತಂದು ಮನೆಯವರಿಗೆ ಒಪ್ಪಿಸಿ ಕೊಡುವ ಕಾಯಕ ನನ್ನದು, ಈ ಭೂಮಿಯ ಮೇಲೆ ಯಾರು ಶಾಶ್ವತವಲ್ಲ, ಆದರೆ ಜೀವನದಲ್ಲಿ ಅದೆಷ್ಟೋ ಪರೀಕ್ಷೆಗಳನ್ನು ಎದುರಿಸುವ ಸಂದರ್ಭ ನಮಗೆ ಒದಗಿ ಬರುತ್ತದೆ, ಅದನ್ನೆಲ್ಲಾ ಸಮಾನಾಂತರವಾಗಿ ಸ್ವೀಕರಿಸಿ ಸಮಾಜದ ಸೇವೆಯನ್ನು ಮಾಡಬೇಕು, ನನ್ನ ಬದುಕಿನಲ್ಲಿ ಎಷ್ಟೇ ಕಷ್ಟ ನೋವು ಇದ್ದರೂ ಆಪತ್ಕಾಲದಲ್ಲಿ ದಿನದ 24ಗಂಟೆಯೂ ಯಾರದೇ ಕರೆ ಬಂದರು ನಾನು ಅಲ್ಲಿ ತಲುಪಿ ನನ್ನ ಸೇವೆಯನ್ನು ಮಾಡುವುದು ನನ್ನ ಕರ್ತವ್ಯ ಎಂದು ನಂಬಿದ್ದೇನೆ, ನಾವು ನಿಂತ ಭೂಮಿ ತಾಯಿಗೆ ನಮಸ್ಕರಿಸಿ, ದೈವದೇವರನ್ನು ನೆನೆದು ಕಾಯಕವನ್ನು ಮಾಡುವವ ನಾನು, ತಮ್ಮೆಲ್ಲರ ಆಶಿರ್ವಾದವು ಸಿಕ್ಕಿದೆ, ಪುಣೆ ತುಳುವರು ನನಗೆ ನೀಡಿದ ಸನ್ಮಾನಕ್ಕೆ ಧನ್ಯವಾದಗಳು . ಶ್ರೀ ಈಶ್ವರ್ ಮಲ್ಪೆ , ಅಪತ್ಭಾಂದವ ಜೀವ ರಕ್ಷಕ ಖ್ಯಾತ ಮುಳುಗು ತಜ್ಞ
ರಾಷ್ಟ್ರ ಪ್ರೇಮವನ್ನು ಕೊಂಡಾಡುವ ದಿನ ಪುಣೆ ತುಳುವರು ಪ್ರೀತಿಯಿಂದ ಒಳ್ಳೆಯ ಮನಸ್ಸಿನಿಂದ ನೀಡಿದ ಸನ್ಮಾನ ಖುಷಿಯಿಂದ ಸ್ವೀಕರಿಸಿದ್ದೇನೆ. ತುಳು ಬಾಷೆ ನಮ್ಮ ಅಮ್ಮ ಬಾಷೆ, ತುಳುನಾಡ ಜನರ ಸಂಸ್ಕಾರ, ಕಲೆ ಸಂಸ್ಕ್ರತಿ ಎಂದರೆ ನಮ್ಮ ಮಣ್ಣಿನ ಗುಣ. ಪ್ರಕ್ರತಿಯೊಂದಿಗೆ ಬೆರೆತು ಬೆಳೆದ ತುಳುವರ ಎಲ್ಲಿ ಹೋದರು ಸಂಸ್ಕಾರ ಬಿಟ್ಟವರಲ್ಲ. ಪುಣೆಯಲ್ಲಿ ತುಳುವರ ಈ ಸಂಭ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸುವ ಸುಸಂದರ್ಭ ಸಿಕ್ಕಿದೆ, ತಮಗೆಲ್ಲರೂ ವಂದನೆಗಳನ್ನು ಸಲ್ಲಿಸುತ್ತೇನೆ -ವಿಜಯ ಕುಮಾರ್ ಶೆಟ್ಟಿ ತೋನ್ಸೆ -ಸ್ಥಾಪಕರು ಕಲಾ ಜಗತ್ತು ಮುಂಬಯಿ ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು
ನಮ್ಮ ತುಳುನಾಡ ಸಂಸ್ಥೆ ಎಂಬ ಗೌರವವಿದೆ ತುಳುನಾಡಿನ ಎಲ್ಲಾ ಜಾತಿ ಭಾಂದವರು ಒಂದೇ ವೇದಿಕೆಯಡಿಯಲ್ಲಿ ಸೇರುವ ಸಂಸ್ಥೆ ಇದ್ದಾರೆ ಅದು ಪುಣೆ ತುಳುಕೂಟ. ಹಲವಾರು ವರ್ಷಗಳಿಂದ ಸೇವೆಯನ್ನು ನೀಡುತ್ತಾ ಬರುತಿದ್ದು, ಇದೀಗ ಸಂಸ್ಥೆ ರಜತ ಮಹೋತ್ಸವದ ಸಂಭ್ರಮದಲ್ಲಿ ಬಂದು ನಿಂತಿದೆ. ಎಲ್ಲಾ ತುಳು ಭಾಂದವರ ಒತ್ತಾಸೆಯಂತೆ ಸರ್ವರ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ತಮ್ಮೆಲ್ಲರ ಸಹಕಾರ ವಿರಲಿ. ದೇವರು ನನಗೆ ಸಮಾಜ ಸೇವೆ ಮಾಡುವ ಭಾಗ್ಯ ನನ್ನ ರಕ್ತದಲ್ಲೇ ನೀಡಿದ್ದಾರೆ, ಜನ ಸೇವೆಯೇ ಜನಾರ್ಧನ ಸೇವೆ ಎಂದು ಅರಿತು ನಾವೆಲ್ಲರೂ ಮುಂದರಿಯೋಣ – ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು -ಅಧ್ಯಕ್ಷರು ರಜತ ಮಹೋತ್ಸವ ಸಮಿತಿ , ತುಳುಕೂಟ ಪುಣೆ .
ತುಳುಕೂಟದ 25ರ ಸಂಭ್ರಮಕ್ಕೆ ಸಂಘಕ್ಕೆ ಕಾಣಿಕೆಯಾಗಿ ಸ್ವಂತ ಕಟ್ಟಡ ನಿರ್ಮಾಣವಾಗಲಿ, ತುಳುವರ ಸಂಘಟನೆ ಪುಣೆಯಲ್ಲಿ ಇನ್ನಷ್ಟು ಬೆಳೆಯಬೇಕು, ತುಳುವರ ಸೇವಾ ಕಾರ್ಯ ಆದರೆ ಬಹಳ ಉತ್ತಮ, ಎಲ್ಲರ ಸಹಕಾರದಿಂದ ಮುನ್ನಡೆಯಲಿ – ಜಯ ಶೆಟ್ಟಿ ಪುಣೆ ಸ್ಥಾಪಕಾಧ್ಯಕ್ಷರು ತುಳುಕೂಟ ಪುಣೆ