ಮಕ್ಕಳ ಆರೋಗ್ಯ ದ್ರಷ್ಟಿಯಲ್ಲಿ ಇದು ಮಾದರಿ ಸೇವೆಯಾಗಬಹುದು -ಗಣೇಶ್ ಹೆಗ್ಡೆ ಪುಣ್ಚೂರು
ಪುಣೆ : ಮನುಷ್ಯರಲ್ಲಿ ಅರೋಗ್ಯ ಎಂಬುದು ಇಂದಿನ ಕಾಲದಲ್ಲಿ ಬಹಳ ಎಚ್ಚರಿಕೆವಹಿಸಬೇಕಾದ ಒಂದು ಮುಖ್ಯ ವಿಚಾರ ,ಅದರಲ್ಲೂ ಮಕ್ಕಳ ಅರೋಗ್ಯ ಕಾಪಾಡುವಲ್ಲಿ ತುಂಬಾ ಮುತುವರ್ಜಿ ವಹಿಸಬೇಕಾಗುತ್ತದೆ ,ಏಳವೆಯಿಂದ ಪ್ರೌಡವಸ್ಥೆಯ ವರೆಗಿನ ಬೆಳವಣಿಗೆಯಲ್ಲಿ ಮಕ್ಕಳ ಆರೋಗ್ಯದಲ್ಲಿ ಬಗ್ಗೆ ಜಾಗ್ರತಿ ಮೂಡಿಸುವುದು ಒಳ್ಳೆಯದು ,ಈ ರೀತಿಯ ಸೇವೆಯಲ್ಲಿ ನಮ್ಮ ಬಂಟ್ಸ್ ಅಸೋಸಿಯೇಷನ್ ಮೆಡಿಕಲ್ ವಿಬಾಗದ ಕಾರ್ಯಾಧ್ಯಕ್ಷರಾದ ಬೇಬಿ ಫ್ರೆಂಡ್ ಕ್ಲಿನಿಕ್ ನ ಮಾಲಕರಾದ ಡಾ ಸುಧಾಕರ್ ಶೆಟ್ಟಿ ಯವರು ಮಾಡುತ್ತಾ ಬರುತಿದ್ದು , ಮಕ್ಕಳ ಅರೋಗ್ಯ ಸೇವೆಯಲ್ಲಿ ಸುಮಾರು 40 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ ಬಂದವರು ,ಇವರ ಜೊತೆಯಲ್ಲಿ ಬಹಳ ವರ್ಷಗಳ ಒಡನಾಟ ನನಗೆ ಇದೆ, ಇಂತಹ ಸೇವೆಯ ಬಗ್ಗೆ ನಮ್ಮಲ್ಲಿ ಹಲವಾರು ಬಾರಿ ಮಾತುಕತೆ ನಡೆದಿತ್ತು ,ಸಮಾಜಕೊಸ್ಕರ ಏನಾದರು ಮಾಡಬೇಕು ಎಂಬ ಯೋಚನೆ ನಮ್ಮಲ್ಲಿತ್ತು ,ಈಗ ಡಾ .ಸುಧಾಕರ್ ಶೆಟ್ಟಿ ಯವರ ಪರಿಕಲ್ಪನೆಯ ಈ ಮಕ್ಕಳ ಆರೋಗ್ಯದ ಕಾರ್ಯಕ್ರಮ ವೈದ್ಯಕೀಯ ಸೇವೆಯು ರಾಷ್ಟ್ರ ಮಟ್ಟದಲ್ಲಿ ಮಾದರಿ ಸೇವೆಯಾಗಿ ದಾಖಲಾಗಬಹುದು ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ನುಡಿದರು .
ಪುಣೆಯ ಖ್ಯಾತ ಮಕ್ಕಳ ತಜ್ಞ , 2022 ರ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರರಷ್ಕ್ರತ ಡಾ .ಸುಧಾಕರ್ ಶೆನಮ್ಮ ಟ್ಟಿ ಯವರ ಬೇಬಿ ಫ್ರೆಂಡ್ ಕ್ಲಿನಿಕ್ ಮತ್ತು ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ಜಂಟಿ ಆಯೋಜನೆಯಲ್ಲಿ ಎಪ್ರಿಲ್ 2 ರವಿವಾರದಂದು ಉಚಿತ ಕಟೀಲ್ ಬೇಬಿ ಫ್ರೆಂಡ್ ಚೈಲ್ಡ್ ಹೆಲ್ತ್ ಕಾರ್ಡ್ ಬಿಡುಗಡೆ ಮತ್ತು ಉಚಿತ ತಪಸಣಾ ಶಿಭಿರ ಕಾರ್ಯಕ್ರಮವು ಪುಣೆಯ ಕ್ಯಾಂಪ್ ಎಂ .ಜಿ ರೋಡ್ ನಲ್ಲಿಯ ಸ್ಟರ್ಲಿಂಗ್ ಸೆಂಟರ್ ನಲ್ಲಿರು ಡಾ ಸುಧಾಕರ್ ಶೆಟ್ಟಿ ಯವರ ಬೇಬಿ ಕ್ಲಿನಿಕ್ ನ ಆವರಣದಲ್ಲಿ ನಡೆಯಿತು .
ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರು ಮತ್ತು ಸಂಘದ ಮೆಡಿಕಲ್ ವಿಬಾಗದ ಕಾರ್ಯಾಧ್ಯಕ್ಷರಾದ ಬೇಬಿ ಫ್ರೆಂಡ್ ಕ್ಲಿನಿಕ್ ನ ಮಾಲಕರಾದ ಡಾ ಸುಧಾಕರ್ ಶೆಟ್ಟಿ ಯವರು ಈ ಹೆಲ್ತ್ ಕಾರ್ಡ್ ನ್ನು ಬಿಡುಗಡೆ ಗೋಳಿಸಿದರು,ಈ ಸಂದರ್ಭದಲ್ಲಿ ಪುಣೆ ಬಂಟ್ಸ್ ಅಸೋಸಿಯೇಷನ್ ಪ್ರಮುಖರಾದ ಉಪಾಧ್ಯಕ್ಷ ಸತೀಶ್ ರೈ ಕಲ್ಲಂಗಳ ಗುತ್ತು ,ಕೋಶಾದಿಕಾರಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ , ಮಾಜಿ ಅಧ್ಯಕ್ಷರುಗಳಾದ ಸುಭಾಶ್ಚಂದ್ರ ಹೆಗ್ಡೆ ಕಟ್ಟಿಂಗೇರಿ ,ನಾರಾಯಣ ಶೆಟ್ಟಿ ,ಮಹಿಳಾ ವಿಬಾಗದ ಅಧ್ಯಕ್ಷೆ ಉಷಾ ಯು .ಶೆಟ್ಟಿ ,ಕಾರ್ಯದರ್ಶಿ ಲತಾ ಎಸ್.ಶೆಟ್ಟಿ ,ಮಾಜಿ ಅಧ್ಯಕ್ಷೆ ಸುಜಾತಾ ಎಸ್.ಹೆಗ್ಡೆ , ಕಾರ್ಯಕಾರಿ ಸಮಿತಿ ಪ್ರಮುಖರಾದ ಸುಧೀರ್ ಶೆಟ್ಟಿ ಕೊಳ್ಕೆಬೈಲು, ಸುಧಾಕರ್ ಶೆಟ್ಟಿ ಕೆಮ್ತೂರು ,ಉಲ್ಲಾಸ್ ಶೆಟ್ಟಿ ,ರವೀಂದ್ರ ಶೆಟ್ಟಿ ,ದಿನೇಶ್ ಶೆಟ್ಟಿ ,ದಯಾನಂದ ಶೆಟ್ಟಿ ,ಸುರೇಶ್ ಶೆಟ್ಟಿ , ಸುಶ್ಮಿತ್ ಶೆಟ್ಟಿ ,,ಯುವ ವಿಬಾಗದ ಅಧ್ಯಕ್ಷ ನ್ಯಾಯವಾದಿ ರೋಹನ್ ಶೆಟ್ಟಿ ಪ್ರಮುಖರಾದ ನಿಖಿಲ್ ಶೆಟ್ಟಿ ,ಕೃತಿ ಶೆಟ್ಟಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು .
ಈ ಹೊಸ ಯೋಜನೆಯ ಪ್ರಕಾರ ಪುಣೆಯ ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕಾರ್ಖಾನೆಗಳು, ಕಚೇರಿಗಳು, ಮತ್ತು ಗೃಹ ಸೇವಕಿಯರು, ಚಾಲಕರು ಇತ್ಯಾದಿ ವಿಬಾಗಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮಕ್ಕಳ ಅನುಕೂಲಕ್ಕಾಗಿ ಪುಣೆ ನಗರದಲ್ಲಿ ಉಚಿತ ಕಟೀಲ್ ಬೇಬಿಫ್ರೆಂಡ್ ಚೈಲ್ಡ್ ಹೆಲ್ತ್ ಕಾರ್ಡ್ ಅನ್ನು ಪ್ರಾರಂಭಿಸುತ್ತಿದ್ದಾರೆ.ತುಳು ಕನ್ನಡಿಗ ಮಕ್ಕಳಿಗೆ ಮೊದಲ ಆಧ್ಯತೆ ನೀಡುವ ಉದ್ದೇಶ ಹೊಂದಿದೆ .
ಸಿಬ್ಬಂದಿಯ ಮಕ್ಕಳಿಗೆ ಅಂದರೆ ಜನನದಿಂದ 12 ವರ್ಷದ ವರೆಗೆ ಉಚಿತ ತಪಾಸಣೆ ಮತ್ತು ಇನ್ನಿತರೇ ವೈದ್ಯಕೀಯ ಸವಲತ್ತುಗಳನ್ನು ನೀಡುವ ವಿಶೇಷತೆಯನ್ನು ಈ ಕಾರ್ಡ್ ಹೊಂದಿದೆ. PMC ಮಿತಿಯಲ್ಲಿರುವ ಮೇಲ್ಕಾಣಿಸಿದ ಸಂಸ್ಥೆಗಳ ಸಿಬ್ಬಂದಿಗಳ ಮಕ್ಕಳಿಗೆ ಸಿಗುವ ಸೌಲಭ್ಯಗಳಲ್ಲಿ,ವೈಧ್ಯರೊಂದಿಗೆ ಉಚಿತ ಸಮಾಲೋಚನೆ , ಸರ್ಕಾರ ಅನುಮೋದಿತ ಲಸಿಕೆ ಉಚಿತವಾಗಿ , ಮಕ್ಕಳ ಎಲ್ಲಾ ಹೊಸ ಲಸಿಕೆಗಳು ಕಡಿಮೆ ದರದಲ್ಲಿ, 24×7 ಮಕ್ಕಳ ಸಹಾಯವಾಣಿ., ವಿಶೇಷ ಅಗತ್ಯತೆಗಳು ಮತ್ತು ಹಿಂದುಳಿದಿರುವ ಮಕ್ಕಳಿಗಾಗಿ ಉಚಿತ ಮಾರ್ಗದರ್ಶನ ನೀಡಲಾಗುವುದು .ಈ ಹೆಲ್ತ್ ಕಾರ್ಡ್ ಮೂರು ವರ್ಷಗಳ ಕಾಲ ಮಾನ್ಯತೆಯನ್ನು ಹೊಂದಿರಲಿದೆ .
ಈ ಸಂದರ್ಭದಲ್ಲಿ ವಿವಿದ ಸಂಘ ಸಂಸ್ಥ್ರೆಗಳ ಪ್ರಮುಖರಾದ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ,ಪಿಂಪ್ರಿ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ,ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ,ಪಿಂಪ್ರಿ ತುಳು ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ,ಕಾತ್ರಜ್ ಶ್ರೀ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಸುಭಾಶ್ ಶೆಟ್ಟಿ ,,ಪುಣೆ ಬಂಟರ ಸಂಘದ ಉಪಾಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ಏರ್ಮಾಲ್ ,ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ,ಪ್ರಮುಖರಾದ ಸತೀಶ್ ಶೆಟ್ಟಿ ,ರಾಮಕೃಷ್ಣ ಶೆಟ್ಟಿ ,ಕಿಶೋರ್ ಹೆಗ್ಡೆ ,ಪ್ರಶಾಂತ್ ಶೆಟ್ಟಿ ,ಮಹಿಳಾ ವಿಬಾಗದ ಅಧ್ಯಕ್ಷೆ ಸುಲತಾ ಎಸ್ .ಶೆಟ್ಟಿ,ದಕ್ಷಿಣ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಶೇಖರ್ ಶೆಟ್ಟಿ ,ಶ್ರೀ ಗುರುದೇವ ಸೇವಾ ಬಳಗದ ಉಪಾಧ್ಯಕ್ಷ ರಂಜಿತ್ ಶೆಟ್ಟಿ ,ಸಲಹೆಗಾರ ಉಷಾ ಕುಮಾರ್ ಶೆಟ್ಟಿ ,ಪಿಂಪ್ರಿ ಬಂಟರ ಸಂಘದ ಕಾರ್ಯದರ್ಶಿ ಅರುಣ್ ಶೆಟ್ಟಿ ,ಕೋಶಾದಿಕಾರಿ ಸುದಾಕರ್ ಶೆಟ್ಟಿ ಪೆಲತ್ತೂರು, ಪುಣೆ ತುಳುಕೂಟದ ಮಹಿಳಾ ಅಧ್ಯಕ್ಷೆ ಸುಜಾತಾ ದಿವಾಕರ್ ಶೆಟ್ಟಿ ,ನಿವ್ರತ್ತ ಐ.ಜಿ ಜಯಾನಂದ ಶೆಟ್ಟಿ ,ಜಯಂತಿ ಜೆ .ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು .
ನಮ್ಮ ಹಿರಿಯರು ಎಲ್ಲರೂ ಹೋಟೆಲ್ ಉದ್ಯಮಿಗಳೇ ,ಈ ಉದ್ಯಮದಿಂದಲೇ ಅರ್ಥಿಕವಾಗಿ ,ಸಾಮಾಜಿಕವಾಗಿ ಹೆಸರನ್ನು ಗಳಿಸಿದವರು , ಹೋಟೆಲ್ ಕ್ಯಾಂಟೀನ್ ಉದ್ಯಮದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಂದ ಈ ಉದ್ಯಮ ಬೆಳೆದಿದೆ ಮತ್ತು ನಾವು ಮುಂದೆ ಬಂದಿದ್ದೇವೆ . .ಇಂಥಹ ಸಿಬ್ಬಂದಿಗಳಿಗೆ ಮತ್ತು ಅವರ ಮಕ್ಕಳಿಗೆ ಹೆಲ್ತ್ ಗೈಡ್ ಲೈನ್ಸ್ ಸಿಗುತಿಲ್ಲಾ,ಸಿಕ್ಕರೂ ದುಬಾರಿ ,ನನ್ನ ದೃಷ್ಟಿಯಲ್ಲಿ ವೈದ್ಯಕೀಯ ಸೇವೆ ಪ್ರಾಮುಖ್ಯವಾದುದು ಮತ್ತು ಎಲ್ಲರಿಗೂ ಸಿಗಬೇಕು ,ಈ ಉದ್ದೇಶದೊಂದಿಗೆ ಮುಖ್ಯವಾಗಿ ಹೋಟೆಲ್ ಕಾರ್ಮಿಕರ ಮಕ್ಕಳ ಅರೋಗ್ಯಪಾಲನೆಗೆ ಸಹಾಯಕವಾಗಳು,ನಾನು ಬಂಟ್ಸ್ ಅಸೋಸಿಯೇಷನ್ ಮೆಡಿಕಲ್ ವಿಬಾಗದ ಕಾರ್ಯಧ್ಯಕ್ಷನಾಗಿ ಈ ಉಚಿತ ಹೆಲ್ತ್ ಕಾರ್ಡ್ ನ್ನು ಬಿಡುಗಡೆ ಮಾಡಿದ್ದೇವೆ ಮತ್ತು ಉಚಿತ ತಪಾಸಣೆಯನ್ನು ಮಾಡುವ ಸಂಕಲ್ಪ ಮಾಡಿದ್ದೇವೆ .ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಸಂಪೂರ್ಣ ಬೆಂಬಲ ಸಿಕ್ಕಿದೆ. ಈ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ಕಾರ್ಯ ರೂಪಕ್ಕೆ ತರುವ ಯೋಜನೆ ನಮ್ಮಲ್ಲಿದೆ ,ನಮ್ಮ ತುಳು ಕನ್ನಡಿಗರು ಮತ್ತು ಇತರೆ ಬಾಷಿಕ ಕಾರ್ಮಿಕರು ಇದರ ಪ್ರಯೋಜನ ಪಡೆಯಬಹುದು .-ಡಾ .ಸುಧಾಕರ್ ಶೆಟ್ಟಿ ,ಬೇಬಿ ಫ್ರೆಂಡ್ ಕ್ಲಿನಿಕ್ / ಕಾರ್ಯಾಧ್ಯಕ್ಷರು ಮೆಡಿಕಲ್ ವಿಬಾಗ ,ಬಂಟ್ಸ್ ಅಸೋಸಿಯೇಷನ್,ಪುಣೆ
ಡಾ ಸುದಾಕರ್ ಶೆಟ್ಟಿ ಯವರ ಸಮಾಜ ಸೇವಾ ಚಿಂತನೆಯಲ್ಲಿ ಪುಣೆ ಬಂಟ್ಸ್ ಅಸೋಸಿಯೇಷನ್ ಮತ್ತು ಬೇಬಿ ಫ್ರೆಂಡ್ ಆಶ್ರಯದಲ್ಲಿ ಈ ಮಕ್ಕಳ ಅರೋಗ್ಯ ದ್ರಷ್ಟಿಯಿಂದ ಕೈಗೊಂಡ ಈ ಕಾರ್ಯಕ್ರಮ ಅತ್ಯುತ್ತಮವಾದುದರಲ್ಲಿ ಒಂದು .ಎಲ್ಲರೂ ಇಂದಿನ ದಿನಗಳಲ್ಲಿ ಅರೋಗ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯ ,ಹೋಟೆಲ್ ಸಿಬ್ಬಂದಿಗಳು ಮತ್ತು ಇತರೆ ಕಾರ್ಮಿಕರ ಮಕ್ಕಳಿಗೆ ಈ ರೀತಿಯ ಉಚಿತ ಸೇವೆಯನ್ನು ನೀಡುವ ಡಾ ಸುದಾಕರ್ ಶೆಟ್ಟಿಯವರ ಮನಸ್ಸಿನ ಯೋಜನೆ ಅದೆಷ್ಟು ಮಕ್ಕಳಿಗೆ ಸಂಜೀವಿನಿಯಾಗಿ ಪರಿಣಮಿಸಲಿದೆ .ಕಾರ್ಮಿಕರ ಮಕ್ಕಳ ಅಭ್ಯುದಯಕ್ಕಾಗಿ ಇಂತಹ ಯೋಜನೆಗಳು ಮತ್ತಷ್ಟು ವಿಸ್ತಾರವಾಗಿ ನಡೆಯಲಿ – ಸಂತೋಷ್ ಶೆಟ್ಟಿ ,ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ , ಅಧ್ಯಕ್ಷರು ಬಂಟರ ಸಂಘ ಪುಣೆ .
ಸ್ವಾರ್ಥ ರಹಿತ ಸಮಾಜಕ್ಕೆ ಪೂರಕವಾದ ಸೇವೆಯಿಂದ ಸಂತೃಪ್ತಿಯನ್ನು ಪಡೆಯಬಹುದು ,ತಾನು ಕೈಗೊಳ್ಳುವ ಕಾರ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಕೂಡಾ ಲಭಿಸಬೇಕು ಅದರಿಂದ ಜನ ಸಾಮಾನ್ಯರಿಗೆ ಅನುಕೂಲಕರವಾದರೆ ಸಾರ್ಥಕ ,ಎಂಬ ಚಿಂತನೆಯೊಂದಿಗೆ ಡಾ ಸುಧಾಕರ್ ಶೆಟ್ಟಿ ಯವರ ಈ ಅರೋಗ್ಯ ಸೇವೆ ಉತ್ತಮವಾದುದು ,ಒಳ್ಳೆಯ ಸೇವಾ ಕಾರ್ಯಕ್ಕೆ ನಮ್ಮ ಅಸೋಸಿಯೇಷನ್ ಮೂಲಕ ಇವರು ಕೈಗೊಂಡ ಸೇವೆಗೆ ನಮ್ಮೆಲ್ಲರ ಸಹಕಾರ ಇದೆ , ಶ್ರೀಮತಿ ಉಷಾ ಉಲ್ಲಾಸ್ ಶೆಟ್ಟಿ ,ಅಧ್ಯಕ್ಷೆ ಮಹಿಳಾ ವಿಬಾಗ ಬಂಟ್ಸ್ ಅಸೋಸಿಯೇಷನ್,ಪುಣೆ.
ಚಿತ್ರ ವರದಿ ಹರೀಶ್ ಮೂಡಬಿದ್ರಿ