ಯುನೈಟೆಡ್ ಸ್ಟೇಟ್ಸ್ ಸರಕಾರ ನಡೆಸುವ “ಲೀಡರ್ಸ್ ಲೀಡ್ ಆನ್ ಡಿಮಾಂಡ್’ ಕಾರ್ಯಕ್ರಮಕ್ಕೆ ಉಡುಪಿಯ ಬಂಟ ಕುವರಿ ಸಂಬ್ರಾತಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಭಾರತದಿಂದ ಮೂಲತಃ ಕೆಮ್ಮಣ್ಣುವಿನ ನಿವಾಸಿ ಸಂಬ್ರಾತಾ ಶೆಟ್ಟಿ, ಬೆಂಗಳೂರಿನ ಪ್ರಣಯ್ ಕೊಟಸ್ತಾನೆ, ಹೊಸದಿಲ್ಲಿಯ ಇಬ್ಬರು ಹಾಗೂ ಕೋಲ್ಕತದ ಒಬ್ಬರು ಆಯ್ಕೆಯಾಗಿದ್ದಾರೆ.
ಸಂಬ್ರಾತಾ ಶೆಟ್ಟಿಯವರು ಪ್ರಸ್ತುತ ಫಿನಾಜಿಯಾ ಫೌಂಡೇಶನ್ನಲ್ಲಿ ಚೀಫ್ ಆಪರೇಟಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಡಾ| ರೋಶನ್ ಶೆಟ್ಟಿ ಅವರ ಪತ್ನಿ. ಉಡುಪಿಯ ಉದ್ಯಮಿ ಸಂಪತ್ಕುಮಾರ್ ಶೆಟ್ಟಿ ಹಾಗೂ ಮಮತಾ ಶೆಟ್ಟಿ ದಂಪತಿಯ ಪುತ್ರಿ. ಸಂಬ್ರಾತಾ ಶೆಟ್ಟಿ ಅವರು ನೇಸಲ್ ಸ್ಪ್ರೇಯನ್ನು ಅಭಿವೃದ್ಧಿಪಡಿಸಿ ಅದಕ್ಕಾಗಿ ಪೇಟೆಂಟ್ ಪಡೆದಿದ್ದರು.