ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದಲ್ಲಿ ವಿಶ್ವ ಮಹಿಳೆಯರ ದಿನಾಚರಣೆಯನ್ನು ಬಂಟ್ಸ್ ಫ್ರೆಂಡ್ಸ್ ಸಂಘ ಹಾವಂಜೆ ಇವರ ಸಂಘದ ವತಿಯಿಂದ ಹಾವಂಜೆ ಮಂಜುನಾಥ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು. ವಿಶ್ವ ಮಹಿಳೆಯ ದಿನಾಚರಣೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಸದಸ್ಯರು ಹಾಗೂ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ಶೆಟ್ಟಿಯವರು ನೆರವೇರಿಸಿದರು.
ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಶಿಕ್ಷಕರಾದ ಶಶಿಕಲಾ ಶೆಟ್ಟಿ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಜಾತ ಯು ಶೆಟ್ಟಿ ಹಾಗೂ ಶ್ರೀಮತಿ ಉಷಾ ಶೆಟ್ಟಿ ಶ್ರೀಮತಿ ಸುಗುಣ ಡಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತಿ ಇದ್ದರು. ಈ ಒಂದು ಶುಭ ಸಮಾರಂಭದ ಕಾರ್ಯಕ್ರಮದಲ್ಲಿ ಬಂಟ ಸಮುದಾಯದ ಹಿರಿಯ ಸಾಧಕರಾದ ಶ್ರೀಮತಿ ರಾಧಮ್ಮ ಶೆಟ್ಟಿ, ಶ್ರೀಮತಿ ಅಕ್ಕಯ್ಯ ಶೆಟ್ಟಿ, ಮೀನಕ್ಕಶೆಟ್ಟಿ, ಮೈರ ಶೆಟ್ಟಿ ಇವರನ್ನು ಶ್ರೀಯುತ ಸುಂದರ ಶೆಟ್ಟಿ ನಿವೃತ್ತ ಅಧ್ಯಾಪಕರು ಹಾವಂಜೆ ಇವರ ಸಹಕಾರದಿಂದ ಹಾಗೂ ನೇತೃತ್ವದಲ್ಲಿ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು.
ಈ ಒಂದು ಶುಭ ಸಂದರ್ಭದಲ್ಲಿ ಸಮುದಾಯದ ಊರಿನ ಯುವ ಪ್ರತಿಭೆಗಳಾದ ಕುಮಾರಿ ಪ್ರಜ್ಞಾ ಪಿ.ಶೆಟ್ಟಿ, ಕುಮಾರಿ ರಿಯಾ ಜಿ.ಶೆಟ್ಟಿ, ಕುಮಾರಿ ಸ್ಮಿರ ಪಿ .ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನಡೆಯಿತು ಹಾಗೂ ಊರಿನ ಯುವ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಈ ಒಂದು ಸಂದರ್ಭದಲ್ಲಿ ಊರಿನ ಪ್ರಮುಖ ಗಣ್ಯರಾದ ನಿವೃತ್ತ ಕ್ರೀಡಾ ಅಧ್ಯಾಪಕರಾದ ಸೀತಾರಾಮ್ ಶೆಟ್ಟಿ ಹಾಗೂ ಅಧ್ಯಾಪಕರಾದ ಪ್ರಶಾಂತ್ ಶೆಟ್ಟಿ, ಉದಯ್ ಶೆಟ್ಟಿ, ಅರುಣ್ ಶೆಟ್ಟಿ, ನಾರಾಯಣ ಶೆಟ್ಟಿ, ಸುರೇಶ್ ಶೆಟ್ಟಿ, ನಮ್ಮ ಉಡುಪಿ ಟಿವಿ ಹಾಗೂ ವಿ ಸ್ ಗ್ರೂಪ್ ನಿರ್ದೇಶಕರು ಹಾಗೂ ಅಖಿಲ ಭಾರತ ತುಳುನಾಡ್ ದೈವಾರಧಕರ ಒಕ್ಕೂಟ (ರಿ ) ಉಡುಪಿ ಜಿಲ್ಲೆ ಸಂಸ್ಥಾಪಕರಾದ ವಿನೋದ್ ಶೆಟ್ಟಿ ಹಾಗೂ ಅರುಣ ಶೆಟ್ಟಿ ಮಹಿಳಾ ಸರ್ವ ಸದಸ್ಯರು ಉಪಸ್ಥಿತಿ ಇದ್ದರು. ಶ್ರೀಮತಿ ಆಶಾ ಹರೀಶ್ ಶೆಟ್ಟಿ ಧನ್ಯವಾದ ಕಾರ್ಯಕ್ರಮ ನೆರವೇರಿಸಿದರು. ಶಿಕ್ಷಕಿ ಶ್ರೀಮತಿ ಪದ್ಮ ಪಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ : ವಿನೋದ್ ಶೆಟ್ಟಿ ಉಡುಪಿ