ದಿನಾಂಕ 26.2.2023ರ ಭಾನುವಾರ ಸಾಗರದ ಎಸ್.ಎ.ಎನ್ ನಗರದ ಬಂಟರ ಸಂಘದ ಕಚೇರಿಯಲ್ಲಿ, ಬಂಟರ ಯಾನೆ ನಾಡವರ ಸಂಘದ ವತಿಯಿಂದ ಜನಪ್ರಿಯ ಶಾಸಕರಾದ ಹರತಾಳು ಹಾಲಪ್ಪನವರಿಗೆ ಸನ್ಮಾನಿಸಲಾಯಿತು. ಈ ಹಿಂದೆ ಸಾಗರ ಬಂಟರ ಸಂಘದ ಕಟ್ಟಡಕ್ಕೆ 30 ಲಕ್ಷ ರೂಪಾಯಿಗಳ ಅನುದಾನವನ್ನು ಶಾಸಕರು ನೀಡಿದ್ದರು. ಇದಕ್ಕಾಗಿ ಬಂಟ ಸಮಾಜ ಬಾಂಧವರೆಲ್ಲ ಒಟ್ಟುಗೂಡಿ ಶಾಸಕರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಸಕ ಹರತಾಳು ಹಾಲಪ್ಪನವರು ಮಾತನಾಡಿ ಬಂಟರು ಶ್ರಮಜೀವಿಗಳು, ಪ್ರಪಂಚದಾದ್ಯಂತ ಬಂಟರ ಸಮುದಾಯಕ್ಕೆ ಅವರದೇ ಆದಂತ ಗೌರವವಿದ್ದು ವಿವಿಧ ರೀತಿಯ ಉದ್ಯಮಗಳಲ್ಲಿ ಅವರು ಅವರನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಸಾಗರ ಬಂಟರ ಸಂಘದ ಕಟ್ಟಡವನ್ನು ಪೂರ್ಣಗೊಳಿಸಲು ಇನ್ನೂ ಹೆಚ್ಚಿನ ರೀತಿಯಲ್ಲಿ ಅನುದಾನ ನೀಡುವುದಾಗಿ ತಿಳಿಸಿದರು.
ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ ಶಾಸಕರಿಗೆ ಸಮಾಜದ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಸಾಗರ ಬಂಟರ ಸಮಾಜ ಸಾಗರ ತಾಲೂಕಿನಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆಯನ್ನು ಸಮಾಜಮುಖಿಯಾಗಿ ನಡೆಸಲು ಅನುದಾನ ಹಾಗೂ ಸ್ಥಳಾವಕಾಶವನ್ನು ನೀಡಬೇಕಾಗಿ ಕೋರಿದರು.
ಸಂಘದ ಗೌರವಾಧ್ಯಕ್ಷ ಟಿ.ಬಿ ಮಂಜುನಾಥ್ ಶೆಟ್ಟಿ ಮಾತನಾಡಿ ಸಂಘ 43 ವರ್ಷಗಳ ಹಿಂದೆ ಸ್ಥಾಪನೆ ಆಗಿದ್ದು, ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಗೌರವ ಅಧ್ಯಕ್ಷರುಗಳಾದ ಜಯಶೀಲ ಶೆಟ್ಟಿ, ಕೆ.ಟಿ ಶೆಟ್ಟಿ, ಉಪಾಧ್ಯಕ್ಷ ರಘುಪತಿ ಶೆಟ್ಟಿ, ಕಾರ್ಯದರ್ಶಿ ಮಹೇಂದ್ರ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಖಜಾಂಚಿ ಅಣ್ಣಪ್ಪ ಶೆಟ್ಟಿ, ಬಟ್ಟೆ ಮಲ್ಲಪ್ಪ ನಾಗರಾಜ ಶೆಟ್ಟಿ, ಮಹಿಳಾ ಸಂಘದ ಅಧ್ಯಕ್ಷೆ ವಸಂತಿ ಶೆಟ್ಟಿ, ಸಾಗರ ಬಂಟರ ಸಂಘದ ಹಿರಿಯ ಕಿರಿಯ ನಿರ್ದೇಶಕರು, ಮಹಿಳಾ ಸಂಘದ ನಿರ್ದೇಶಕರು, ಗ್ರಾಮ ಪಂಚಾಯತ್ ಸದಸ್ಯರುಗಳು, ತಾಲೂಕು ಧುರೀಣರು, ಹಲವಾರು ಮುಖಂಡರುಗಳು ಭಾಗವಹಿಸಿದ್ದರು.
ಮಂಜುನಾಥ್ ಶೆಟ್ಟಿ ವರದ ಮೂಲ ಕಾರ್ಯಕ್ರಮ ನಿರೂಪಿಸಿದರು, ಪುಷ್ಪಾ ಶೆಟ್ಟಿ ಸ್ವಾಗತಿಸಿದರು, ಪ್ರಕಾಶ್ ಶೆಟ್ಟಿ ವಂದಿಸಿದರು.